ವಿಜೃಂಭಣೆಯ ಶ್ರೀ ರಾಮ ನವಮಿ ಆಚರಣೆ.
ನಾಯಕನಹಟ್ಟಿ ಪಟ್ಟಣದ ಕೋಟೆ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ.
ನಾಯಕನಹಟ್ಟಿ: ಪಟ್ಟಣದ ಕೋಟೆ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಶ್ರೀ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪುರೋಹಿತರಾದ ಮುರಳಿ ಕೃಷ್ಣ ಮಾತನಾಡಿ ಶ್ರೀರಾಮ ನವಮಿ ಅಂಗವಾಗಿ ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕಗಳನ್ನು ಮಾಡಿ ಆ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ದಿನ ಸಂಜೆ ಶ್ರೀ ರಾಮ ನವಮಿ ನಿಮಿತ್ತ ರಥೋತ್ಸವವನ್ನು ಜರುಗಿಸಲಾಗುವುದು. ಶ್ರೀರಾಮ ಮತ್ತು ಆಂಜನೇಯ ವಿಗ್ರಹಗಳನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಮತ್ತು ರಥೋತ್ಸವಕ್ಕೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿದೆ. ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ವತಿಯಿಂದ ಶ್ರೀ ರಾಮನವಮಿಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಕೋಸಂಬರಿ ಮತ್ತು ಪಾನಕದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಶ್ರೀ ರಾಮನವಮಿಗೆ ಆಗಮಿಸಿದ ಭಕ್ತಾದಿಗಳಿಗೆ ಅವರ ಇಷ್ಟಾರ್ಥಗಳು ಸಿದ್ಧಿಯಾಗಿ ಉತ್ತಮ ಮಳೆ, ಬೆಳೆ, ವ್ಯಾಪಾರ, ಉದ್ಯೋಗ, ವಿದ್ಯೆ ಅಭಿವೃದ್ಧಿಯಾಗಲಿ ಎಂದು ಈ ಮೂಲಕ ದೇವರಲ್ಲಿ ಪ್ರಾರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಅರ್ಚಕರಾದ ವೆಂಕಟೇಶ್, ತಾರಕೇಶ್, ದಳವಾಯಿ ರುದ್ರಮುನಿ,ಜಿತೇಶ್, ಸತೀಶ್, ಗೋವಿಂದ, ಪ್ರಕಾಶ್, ಪಾಂಡುರಂಗ ಇನ್ನು ಮುಂತಾದವರು ಹಾಜರಿದ್ದರು.