ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಾಯಕನಹಟ್ಟಿ ಪಟ್ಟಣದಲ್ಲಿ ಡಾ. ಬಾಬು ಜಗಜೀವನರಾಂ,ಡಾ. ಬಿ. ಆರ್.ಅಂಬೇಡ್ಕರ್ ಜಯಂತಿ. ಆಚರಣೆ ಕುದಾಪುರ ತಿಪ್ಪೇಸ್ವಾಮಿ.

ನಾಯಕನಹಟ್ಟಿ:: ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ, ರವರ ಜಯಂತಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಎಂದು ಕುದಾಪುರ ತಿಪ್ಪೇಸ್ವಾಮಿ ಹೇಳಿದರು.

ಭಾನುವಾರ ಪಟ್ಟಣದ ಯಾತ್ರಿನಿವಾಸದಲ್ಲಿ ಡಾ. ಬಾಬು ಜಗಜೀವನರಾಂ, ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ರಾಷ್ಟ್ರ ಕಂಡ ಅಪ್ರತಿಮ ಮಹಾನ್ ನಾಯಕರ ಜಯಂತಿಯನ್ನು ನಾಯಕನಹಟ್ಟಿ ಹೋಬಳಿಯ ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಬೇಕು ಸಮುದಾಯದ ಎಲ್ಲಾ ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕು ಎಂದರು,

ತಾರಕೇಶ್ ಮಾತನಾಡಿದರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಡಾ.ಬಾಬುಜಗಜೀವನರಾಂ, ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರ ಆದ್ದರಿಂದ ಇಬ್ಬರು ಮಹಾನಾಯಕರ ಜಯಂತಿಯನ್ನು ಹೋಬಳಿ ಮಟ್ಟದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ತಿಳಿಸಿದರು.

ನಲಗೇತನಹಟ್ಟಿ ಕೆ.ಬಿ. ನಾಗರಾಜ್ ಮಾತನಾಡಿದರು. ಡಾ, ಬಾಬು ಜಗಜೀವನರಾಂ, ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಆದ್ದರಿಂದ ಈ ಬಾರಿ ನಾಯಕನಹಟ್ಟಿ ಹೋಬಳಿ ಮಟ್ಟದಲ್ಲಿ ಅತಿ ಹೆಚ್ಚು ಮಾದಿಗ ಸಮುದಾಯ ಇರುವುದರಿಂದ ಈ ಇಬ್ಬರು ಮಹನಾಯಕರ ಜಯಂತಿಯನ್ನ ಸಂಭ್ರಮಾ ಸಡಗರಕ್ಕೆ ಸಾಕ್ಷಿ ಆಗುವಂತೆ ಆಚರಣೆ ಮಾಡಬೇಕು ಹೋಬಳಿಯ ಮಾದಿಗ ಸಮುದಾಯದ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಯುವಕರು ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು

ಆರ್ ಬಸವರಾಜ್, ಮರಿಪಾಲಯ್ಯ,ಬಿ.ಶಂಕರ್ ಸ್ವಾಮಿ, ಬಿ.ಟಿ .ಶಿವಕುಮಾರ್, ಉಪ್ಪಾರಹಟ್ಟಿ ಮಲ್ಲಿಕಾರ್ಜುನ, ಅಬ್ಬೇನಹಳ್ಳಿ ನಾಗರಾಜ್, ನಾಯಕನಹಟ್ಟಿ ರಮೇಶ್, ಆರ್ ಯನ್ನಪ್ಪ, ಟಿ ತಿಪ್ಪೇಸ್ವಾಮಿ, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ಕರಿಬಸವರಾಜ್, ಇನ್ನೂ ಮುಂತಾದವರು ಇದ್ದರು

About The Author

Namma Challakere Local News
error: Content is protected !!