ಗ್ರಾಮೀಣ ಜನರ ಆರೋಗ್ಯ ಜಾಗೃತೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿವೆ ಪಟ್ಟಣ ಪಂಚಾಯತಿ ಸದಸ್ಯ ವಿನೂತ ಅಭಿಪ್ರಾಯ

ನಾಯಕನಹಟ್ಟಿ:: ಆರೋಗ್ಯ ತಪಾಸಣೆ ಶಿಬಿರದಿಂದ ಬಡಜನರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಶ್ರೀಮತಿ ವಿನುತಾ ಹೇಳಿದ್ದಾರೆ

ಅವರು ಶುಕ್ರವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಾಯಕನಹಟ್ಟಿ. ಕಾರ್ಯಕ್ಷೇತ್ರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಬಡವರ ಸಂಜೀವಿನಿ ಆಗಿದೆ ಗ್ರಾಮೀಣ ಜನರ ಬದುಕಿನ ಸುಧಾರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಪಾತ್ರ ದೊಡ್ಡದು ಎಂದರು.

ಇದೆ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಸಂತೋಷ್ ಮಾತನಾಡಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿರುವುದು ಸಂತಸ ತಂದಿದೆ.
ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಕಡೆ ಗಮನ ನೀಡಬೇಕು ಜೀವನ ಸಾಗಿಸಲು ದುಡಿಮೆಯ ಜೊತೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಬಿಪಿ ಶುಗರ್, ಕಪ್ಪ ಸೇರಿದಂತೆ ರೋಗಗಳಿಗೆ ತುತ್ತಾಗುವ ಸಂದರ್ಭ ಕಂಡುಬರುತ್ತದೆ ಆದ್ದರಿಂದ ಉತ್ತಮವಾದ ಪೌಷ್ಟಿಕಾಂಶ ಉಳ್ಳ ಆಹಾರವನ್ನು ಸೇವಿಸಿ ವಾರಕ್ಕೆ ಎರಡು ಗಂಟೆಗಳ ವ್ಯಾಯಾಮ ಮಾಡಬೇಕು ಎಂದು ರೋಗಿಗಳಿಗೆ ಕಿವಿಮಾತು ಹೇಳಿದರು.
ಇನ್ನೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 120 ಜನರಿಗೆ ಗ್ರಾಮೀಣ ಪ್ರದೇಶದಿಂದ ಭಾಗವಹಿಸಿದ ಜನರಿಗೆ ಡಿಪಿ ಶುಗರ್, ಕಫ ಮತ್ತು ಕಣ್ಣಿನ ತಪಾಸಣೆ ಮಾಡಿಸಲಾಯಿತು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀಮತಿ ವಿನುತ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ,ನೇತ್ರ ತಜ್ಞರಾದ ಶ್ಯಾಮ್ ಪ್ರಸಾದ್, ಪತ್ರಕರ್ತ ಕೆ ಟಿ ಓಬಳೇಶ್, ಮೇಲ್ವಿಚಾರಕರಾದ ಸಂತೋಷ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಯಶೋಧ, ಸೇವಾ ಪ್ರತಿನಿಧಿಗಳಾದ ಅಶ್ವಿನಿ, ನಾಗರತ್ನಮ್ಮ, ಜ್ಯೋತಿ, ಶೋಭಾ, ವಿವಿಧ ಹಳ್ಳಿಗಳಿಂದ ಆಗಮಿಸಿದ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!