ಚಳ್ಳಕೆರೆ : ಎನ್.ದೇವರಹಳ್ಳಿ ಗ್ರಾಮದಲ್ಲಿ ನಡೆದ ಅಂತರ್ಜಾತಿ ವಿವಾಹದ ಕಾರಣದಿಂದ ಉದ್ಭವಿಸಿದ ಸಾಮಾಜಿಕ ಬಹಿಷ್ಕಾರ ನಡೆಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಇಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ಹಾಗೂ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ್ದಾರೆ.
ತಾಲೂಕಿನ ನಾಯಕನಹಟ್ಟಿ ಹೋಬಳಿಯ ಎನ್. ದೇವರಹಳ್ಳಿ ಗ್ರಾಮದಲ್ಲಿ ಮೂಕ ದಂಪತಿಗ ಅಂತರ್ಜಾತಿ ವಿವಾಹಕ್ಕೆ ದಂಢ ಹಾಗೂ ಬಹಿಷ್ಕಾರ ಹಾಕಲಾದ ಎನ್ನುವ ಪ್ರಕರಣಕ್ಕೆ ಗ್ರಾಮದಲ್ಲಿ ಶಾಂತಿಸಭೆ ನಡೆಸಿ ಗ್ರಾಮದ ಮುಖಂಡರಿಗೆ ಸಲಹೆ ಸೂಚನೆ ನೀಡಿದರು.
ನಂತರ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ಮಾತನಾಡಿ, ಸಾಮಾಜಿಕ ಮೌಢ್ಯತೆಯು ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಯಾವುದೇ ನಾಗರೀಕರೂ ಇಂತಹ ಘಟನೆಗಳಿಗೆ ಬೆಂಬಲಿಸಬಾರದು. ಅದರಲ್ಲೂ ವಿಶೇಷವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಬೆಂಬಲಿಸಿದ್ದೇ ಆದಲ್ಲಿ, ಅಂತಹವರ ಸದಸ್ಯತ್ವ ರದ್ದು ಪಡಿಸುವುದಾಗಿ ಖಡಕ್ ಎಚ್ಚರಿಕೆ ನೀಡಿ, ಪ್ರಕರಣವು ಸುಖಾಂತ್ಯವಾಗುವAತೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಬಹಿಷ್ಕಾರ, ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಕಾನೂನು ಕ್ರಕೈಗೊಳ್ಳುವ ಹಾಗೂ ಜೈಲು ಶಿಕ್ಷೆ ಇದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಸಾಮರಸ್ಯ, ಸೌಹಾರ್ದಕ್ಕೆ ಧಕ್ಕೆ ತರುವ ಬಹಿಷ್ಠಾರ ಪ್ರಕರಣಗಳು ವರದಿಯಾಗುತ್ತಿರುವುದು ವಿಷಾಧನೀಯ ಎಂದರು.
ಇನ್ನೂ ಡಿಡಿಪಿಐ ರವಿಶಂಕರ್‌ರೆಡ್ಡಿ ಮಾತನಾಡಿ, ಡಾ.ಬಿಆರ್.ಅಂಬೇಡ್ಕರ್ ರವರು ರೂಪಿಸಿದ ಸಂವಿಧಾನ ಬದ್ದ ಹಕ್ಕು ಪ್ರತಿಯೊಬ್ಬರಿಗೂ ಜೀವಸುವ ಹಕ್ಕು ಇದೆ, ಇನ್ನೂ ಭಾರತದ ಯಾವುದೇ ಮೂಲೆಯಲ್ಲಿ ಕೂಡ ಜೀವಿಸುವ ಹಕ್ಕು ಇದೆ, ಆದರೆ ಈಂತಹ ಆಧುನಿಕ ಜಗತ್ತಿನಲ್ಲಿ ಮೂಡನಂಭಿಕೆ ಇನ್ನೂ ಜೀವಂತವಾಗಿರುವುದು ಘೋರ ದುರಂತವೇ ಸರಿ, ಇಂತಹ ಘಟನೆಗಳು ಮತ್ತೆ ಎಲ್ಲೂ ಸಹ ಮರುಕಳಿಸಬಾರದು, ಅದರಲ್ಲೂ ಚುನಾಯಿತ ಪ್ರತಿನಿಧಿಗಳು ಇದ್ದರು ಕೂಡ ಇಂತಹ ಘಟನೆ ನಡೆಯದಾಗಿ ನೋಡಿಕೊಳ್ಳಬೇಕು, ಮೊದಲ ಬಾರಿಗೆ ಇಂತಹ ಘಟನೆ ಜರುಗಿದೆ, ಮುಂದೆ ನಡೆಯದಂತೆ ಗ್ರಾಮದಲ್ಲಿ ಶಾಂತಿ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.
ಇನ್ನೂ ಡಿವೈಎಸ್‌ಪಿ ಬಿಟಿ.ರಾಜಣ್ಣ ಮಾತನಾಡಿ, ಇಂತಹ ಘಟನೆಗಳು ಗ್ರಾಮದಲ್ಲಿ ಮತ್ತೆ ಮರುಕಳಿಸಬಾರದು, ಇಂತಹ ಘಟನೆಗಳಿಂದ ಗ್ರಾಮದಲ್ಲಿ ಅಶಾಂತಿ ಕದಡುತ್ತದೆ, ಮತ್ತೆ ಮರುವಾಪಸ್ ಅವರು ಗ್ರಾಮಕ್ಕೆ ಬಂದಾಗ ಅವರನ್ನು ಬೇರೆಯವಂತೆ ನೋಡದೆ ನಮ್ಮವರಂತೆ ಕಾಣಬೇಕು, ನಿಮ್ಮ ಗ್ರಾಮದವರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣಬೇಕು ಅನಾದಿಕಾಲದ ಮೌಡ್ಯಪದ್ದತಿಗಳನ್ನು ಕೈ ಬಿಡಬೇಕು ಎಲ್ಲಾರೂ ಸಮಾನರು ಸಮಾನ ಭಾವನೆಯಿಂದ ಕಾಣಬೇಕು ಎಂದು ಗ್ರಾಮದಲ್ಲಿ ಜಾಗೃತಿ ಮೂಡಿಸಿದರು.
ಸಭೆಯಲ್ಲಿ ಗ್ರಾಮದ ಮುಖಂಡರು ಮಾತನಾಡಿ, ಅಂತರ್ಜಾತಿ ವಿವಾಹಕ್ಕೆ ಮುಖಂಡರು ಬಹಿಷ್ಕಾರ ಹಾಕಿರುವುದು ಗ್ರಾಮದ ಮುಖಂಡರ ಗಮನಕ್ಕೆ ಈ ಸಮುದಾಯದವರು ವರ್ಷಕೊಮ್ಮೆ ಸೇರಿಕೊಂಡು ಹಬ್ಬಗಳನ್ನು ಆಚರಣೆ ಮಾಡುತ್ತಾರೆ ಆದರೆ ಇಲ್ಲ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಬೇರೆ ಕಡೆ ದೂರು ನೀಡಿದಾಗ ಮಾಧ್ಯಮಗಳಲ್ಲಿ ಬಂದಾಗ ನಮಗೆ ತಿಳಿದಿದೆ, ಮತ್ತೆ ಇಂತಹ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಸಭೆ ಗಮನ ಸೆಳೆದರು.

ಬಾಕ್ಸ್ ಮಾಡಿ :
ನಿಮ್ಮ ಗ್ರಾಮದವರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣಬೇಕು ಅನಾದಿಕಾಲದ ಮೌಡ್ಯಪದ್ದತಿಗಳನ್ನು ಕೈ ಬಿಡಬೇಕು ಎಲ್ಲಾರೂ ಸಮಾನರು ಸಮಾನ ಭಾವನೆಯಿಂದ ಕಾಣಬೇಕು, ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಸಾಮರಸ್ಯ, ಸೌಹಾರ್ದಕ್ಕೆ ಧಕ್ಕೆ ತರುವ ಬಹಿಷ್ಕಾರ ಪ್ರಕರಣಗಳು ಮತ್ತೆ ಎಲ್ಲೂ ಮರುಕಳಿಸಬಾರದು, ಯಾವುದೇ ಕಾರಣಕ್ಕೂ ಸಾಮಾಜಿಕ ಬಹಿಷ್ಕಾರ ಹಾಕುವುದು ಕಾನೂನು ಬಾಹಿರವಾಗಿದೆ. ಯಾವುದೇ ಗ್ರಾಮದಲ್ಲಿ ಬಹಿಷ್ಕಾರ ಘೋಷಿಸುವುದು, ಕಂಡುಬAದಲ್ಲಿ ಅಂತಹವರ ವಿರುದ್ಧ ಗಂಭೀರ ಕಾನೂನು ಕ್ರಮ ಕೈಗೊಳ್ಳಲಾಗುದು.
–ಸಿಪಿಐ.ಕೆ.ಸಮೀವುಲ್ಲಾ. ತಳಕು ವೃತ್ತ, ಗ್ರಾಮಾಂತರ ಠಾಣೆ

ಗ್ರಾಮದಲ್ಲಿ ಅಶಾಂತಿ ಕದಡುವ ಕೆಲಸ ಮಾಡಬಾರದು , ಚುನಾಯಿತ ಜನಪ್ರತಿನಿಧಿಗಳು ಗ್ರಾಮದ ಜನರ ಸ್ಯಸ್ಥ್ಯ ಕಾಪಾಡುವ ಮೂಲಕ ಕೆಲವು ಮೌಡ್ಯ ಆಚರಣೆಗಳನ್ನು ಕೈ ಬಿಡಬೇಕು, ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.. ಜಿ.ಕೆ.ಹೊನ್ನಯ್ಯ ತಾಪಂ.ಇಓ ಚಳ್ಳಕೆರೆ
ಈ ಸಮಯದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಜಿಲ್ಲಾ ಉಪನಿರ್ದೇಶಕರಾದ ರವಿಶಂಕರ್‌ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್, ಸಿಪಿಐ ಸಮಿವುಲ್ಲಾ, ಪಿಎಸ್‌ಐ ದೇವರಾಜ್

, ಸಿಡಿಪಿಓ ಹರಿಪ್ರಸಾದ್, ಪಿಡಿಓ. ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪೋಟೋ : ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮದಲ್ಲಿ ನಡೆದ ಸಾಮಾಜಿಕ ಬಹಿಷ್ಕಾರ ನಡೆಯ ವಿರುದ್ಧ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ ಜಿಪಂ.ಸೋಮಶೇಖರ್ ಹಾಗೂ ಅಧಿಕಾರಿಗಳ ತಂಡ

Namma Challakere Local News
error: Content is protected !!