ಚಳ್ಳಕೆರೆ : ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸುವುದಕ್ಕಾಗಿ ಹಾಗೂ ರೈತರ ಪಂಪ್ ಸೆಟ್ ಗಳಿಗೆ ನಿರಂತರ ಜ್ಯೋತಿ ಹಾಗೂ ಟಿಸಿ ಸುಟ್ಟುಹೊದಲ್ಲಿ ಅತಿ ತುರ್ತಾಗಿ ಸರಿಪಡಿಸುವಿಕೆ ಕುರಿತು ಆಗ್ರಹಿಸುವುದಕ್ಕಾಗಿ ಪ್ರತಿಭಟನೆ ಮೆರವಣಿಗೆಯನ್ನು ಭಾರತೀಯ ಕಿಸಾನ್ ಸಂಘ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವಿವಿಧ ಕಚೇರಿಗಳಿಗೆ ಮನವಿ ಸಲ್ಲಿಸಿ ಆಕ್ರೋಶ ಹೊರಹಾಕಿದರು
ಅವರು ನಗರದ ಬೆಸ್ಕಾಂ, ಕಚೇರಿ ಅಂಬೇಡ್ಕರ್ ವೃತ್ತ ಹಾಗೂ ನೆಹರು ವೃತ್ತದ ಮೂಲಕ ತಹಶಿಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು,
ರೈತರಿಗೆ ಹಗಲು ರಾತ್ರಿ ವಿದ್ಯುತ್ ನೀಡಬೇಕು ಕಳೆದ ಸುಮಾರು ವರ್ಷಗಳಿಂದ ಹಾಗೆ ಉಳಿದಿರುವಂತಹ ರೈತರ ಜಮಿನುಗಳಿಗೆ ಉಚಿತವಾಗಿ ಅಕ್ರಮ ಸಕ್ರಮ ಯೋಜನೆಯಲ್ಲಿ ಟ್ರಾನ್ಸ್ ಪರ್ ಮರ್ ಪೆಟ್ಟಿಗೆ ನೀಡುವ ಕಾರ್ಯ ತ್ವರಿತವಾಗಿ ಆಗಬೇಕು ಇನ್ನು ಟಿಸಿ ಟ್ರಾನ್ಸ್ಫರ್ ಸುಟ್ಟು ಹೋದಲ್ಲಿ ಅತಿ ತುರ್ತಾಗಿ ದಿನದ 24 ಗಂಟೆ ಒಳಗೆ ಬದಲಾಯಿಸಿ ಹೊಸ ಟ್ರಾನ್ಸ್ಫರ್ ಪೆಟ್ಟಿಗೆಯನ್ನು ಅಳವಡಿಸಬೇಕು ಎಂದು ರೈತ ಮುಖಂಡರು ಕಾರ್ಯನಿರ್ವಾಹಕ ಅಧಿಕಾರಿ ಇಂಜಿನಿಯರ್ ಹಿರಿಯೂರು ವಿಭಾಗದ ಅಶೋಕ್ ಹೆಂಡೇಗಾರ್ ರವರಿಗೆ ಹಾಗೂ ಸಹಾಯಕ ಬೆಸ್ಕಾಂ ಇಂಜಿನಿಯರ್ ಶಿವಪ್ರಸಾದ್ ರವರಿಗೆ ಮನವಿ ಸಲ್ಲಿಸಿದರು
ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ಜಿಲ್ಲಾ ಘಟಕದ ಕರಿಕೆರೆ ಜಿ ತಿಪ್ಪೇಸ್ವಾಮಿ, ಕೆ ಸಿ ಎನ್ ಗೌಡ,ಪಂಚಾಕ್ಷರಪ್ಪ, ಪ್ರಾಂತ ಪ್ರಮುಖರಾದ ಅಮೃತ, ರಮ್ಯಾ , ಮಹಿಳಾ ಪ್ರಮುಖ ಜಿಲ್ಲಾ ಪದಾಧಿಕಾರಿಗಳು ಹಾಗೂ ಇತರರು ರೈತರು ಭಾಗವಹಿಸಿದ್ದರು


