ಚಳ್ಳಕೆರೆ : ಇಂದು ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರದಲ್ಲಿ ನಿರಾಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಅದರಂತೆ ಯಾವುದೇ ಪ್ರತಿಭಟನೆ ಇಲ್ಲದೆ ರಾಜ್ಯರ ಗಮನ ಸೇಳೆಯುಲು ನಗರದ ವಸುಂಧರ ಶಿಕ್ಷಣ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ತಹಶಿಲ್ದಾರ್ ಗೆ ಮನವಿ ಸಲ್ಲಿಸುವ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ.
ಇನ್ನೂ ಸಂಘದ ಅಧ್ಯಕ್ಷ ಜೆ.ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಲು
ಮುಂದಾಗಿರುವುದನ್ನು ಖಂಡಿಸಿ ಇಂದು ಮನವಿ ಸಲ್ಲಿಸಲಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ಬರಗಾಲದ ಪರಿಸ್ಥಿತಿ ಆವರಿಸಿದೆ.
ಪ್ರಸ್ತುತ ರಾಜ್ಯ ಸರ್ಕಾರವೇ 169 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿರುವ ಈ
ಪರಿಸ್ಥಿತಿಯಲ್ಲಿ ನಾಡಿನ ಬೃಹತ್ ನಗರಗಳು ಕುಡಿಯುವ ನೀರಿಗೆ ಮತ್ತು ರೈತರ ಕೃಷಿ
ಚಟುವಟಿಕೆಗಳಿಗೆ ಅವಲಂಬಿಸಿರುವ ಕಾವೇರಿ ನದಿ ನೀರನ್ನು ಅವೈಜ್ಞಾನಿಕವಾಗಿ ತಮಿಳುನಾಡಿಗೆ
ಹರಿಸುತ್ತಿರುವುದು ಖಂಡನೀಯ.
ಕಾವೇರಿ ನೀರಿನ ಗರಿಷ್ಟ 124.80 ಅಡಿ ಸಂಗ್ರಹ ಸಾಮರ್ಥ್ಯದಲ್ಲಿ
ಈಗ ಕುಸಿತವಾಗಿದೆ. ಇದರಲ್ಲಿ ಕೇವಲ 35 ಅಡಿ ಅಂದರೆ 45 ಟಿಎಂಸಿ ನೀರನ್ನು ಮಾತ್ರ
ಬಳಸಿಕೊಳ್ಳಲು ಅವಕಾಶವಿದೆ.
ನಾಡಿನ ನಗರಗಳಿಗೆ ಕುಡಿಯಲು ಮತ್ತು ರೈತರ ಜಮೀನುಗಳಿಗೆ
ಮಾತ್ರ ಸಾಧ್ಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ.
ನಾಡಿನ ರೈತರ ಮತ್ತು ಜನತೆಯ ಹಿತ ಕಾಪಾಡುವ ನಿರ್ಧಾರ ರಾಜ್ಯ ಸರ್ಕಾರ ಕೈಗೊಳ್ಳಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ತಮ್ಮ ಹಕ್ಕೊತ್ತಾಯಗಳು
ತುರ್ತಾಗಿ ವಿಧಾನಸಭೆಯ ವಿಶೇಷ ಸಭೆ ನಡೆಸಿ, ಕಾವೇರಿ ನದಿ ನೀರು ಕಾಪಾಡಿಕೊಳ್ಳಲು ಕೇಂದ್ರ
ಸರ್ಕಾರದ ಮೇಲೆ ಒತ್ತಡ ತರಬೇಕು.
- ತಮಿಳುನಾಡಿನ ರಾಜಕೀಯ ಪ್ರಭಾವ ಕೇಂದ್ರ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದೆ. ಇದು
ಪ್ರಜಾಪ್ರಭುತ್ವದ ಅಪಾಯವಾಗಿದೆ. ಇಂತಹ ದೃಷ್ಟ ರಾಜಕೀಯ ಕೊನೆಯಾಗಬೇಕು. - ಕಾವೇರಿ ನದಿ ಸಂರಕ್ಷಣಾ ವಿಚಾರದಲ್ಲಿ ರಾಜಕೀಯ ಧೋರಣೆ ಅನುಸರಿಸದೆ ಎಲ್ಲಾ ರಾಜಕೀಯ
ಪಕ್ಷಗಳು ಏಕಪಕ್ಷೀಯ ನಿರ್ಧಾರಕ್ಕೆ ಬದ್ಧವಾಗಬೇಕು. - ರಾಜಕೀಯ ಹಿಡಿತದಲ್ಲಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರದ್ದುಪಡಿಸಬೇಕು.
- ರಾಜ್ಯದ ಜನರ ಹಿತ ಕಾಪಾಡುವ ದೃಷ್ಟಿಯಿಂದ ನೀರಾವರಿ ಯೋಜನೆಗಳು ಮತ್ತು ಕೆರೆಗಳಲ್ಲಿ
ಹೆಚ್ಚು ಮಳೆ ನೀರು ಸಂಗ್ರಹವಾಗುವ ರೀತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ
ಇದೇ ಸಂಧರ್ಭದಲ್ಲಿ ಗೌರವಧ್ಯಕ್ಷ ಎಚ್.ಲಂಕಪ್ಪ, ಉಪಾಧ್ಯಕ್ಷ ಪಿಡಿ.ಮಂಜುನಾಥ್, ಆರ್.ಮಂಜುನಾಥ್, ರುದ್ರಮುನಿ, ಕಿರಣ್, ಆನಂದ್, ಇತರರು ಹಾಜರಿದ್ದರು.