ನಾಯಕನಹಟ್ಟಿ:: ಕೃಷಿಗೆ ಹೆಚ್ಚಿನ ಮಹತ್ವವನ್ನು ನೀಡಿದ ಬಲರಾಮ ರವರ ಕಾರ್ಯ ಶ್ಲಾಘನೀಯ ಎಂದು ರಾಷ್ಟ್ರೀಯ ಕಿಸಾನ್ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯೆ ಪಿ ಅಮೃತ ಹೇಳಿದ್ದಾರೆ.

ಸೋಮವಾರ ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ವತಿಯಿಂದ ಬಲರಾಮ ಜಯಂತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಭಾರತದಲ್ಲಿ ಕೃಷಿ ಸಂಸ್ಕೃತಿಯನ್ನು ಮೊಟ್ಟ ಮೊದಲು ಅಳವಡಿಸಿದ ಕೃಷಿಕರ ಆರಾಧ್ಯ ದೈವ ಬಲರಾಮ ಮಹಾಭಾರತದಲ್ಲಿ ಬರುವ ಬಲರಾಮ ಓರ್ವ ಆದರ್ಶ ರೈತನಾಗಿದ್ದು ಕೊಂಡು ಇಡೀ ಜೀವನ ಪರ್ಯಂತ ಕೃಷಿಕನಾಗಿ ಅನ್ನ ಬೆಳೆದು ನೀಡಿದ್ದನು ಹೊರತುಪಡಿಸಿದರೆ ಎಲ್ಲಿಯೂ ರಾಜಕೀಯ ಮಾಡಲಿಲ್ಲ ಶ್ರೀಕೃಷ್ಣನಿಗಿಂತ ಹೆಚ್ಚು ಬಲಶಾಲಿಯಾಗಿದ್ದರು ಸಹ ಯುದ್ಧದಲ್ಲಿ ಪಾಲ್ಗೊಳ್ಳದೆ ಶಾಂತಿಯನ್ನು ಬಯಸಿದ ವೀರ ಹಾಗಾಗಿ ಇಂತಹ ಆದರ್ಶ ಪುರುಷನ ಜಯಂತಿಯನ್ನು ಭಾರತೀಯ ಕಿಸಾನ್ ಸಂಘ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಅದರಿಂದ ಈ ಭಾಗದ ರೈತರು ರಾಷ್ಟ್ರೀಯ ಕಿಸಾನ್ ಸಂಘದ ವತಿಯಿಂದ ಗ್ರಾಮ ಸಮಿತಿಯ ಮೂಲಕ ಹೆಚ್ಚಿನ ರೈತರನ್ನು ಸೇರ್ಪಡಿಸುವ ಮೂಲಕ ರಾಷ್ಟ್ರೀಯ ಕಿಸಾನ್ ಸಂಘವನ್ನು ಬಲಪಡಿಸಲು ಪ್ರತಿಯೊಬ್ಬ ರೈತರು ಮುಂದಾಗಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯೆ ಪಿ.ಅಮೃತ ತಿಳಿಸಿದ್ದಾರೆ

ಇದೇ ಸಂದರ್ಭದಲ್ಲಿ ಗುಂತುಕೋಲಮ್ಮನಹಳ್ಳಿ ಮಾಜಿ ಉಪಾಧ್ಯಕ್ಷ ಕೆ ಟಿ ಮಲ್ಲಿಕಾರ್ಜುನ್, ಜಿ ಎಂ ಜಯಣ್ಣ, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಶೇಖರ್ ಗೌಡ, ಕೊರಡಿಹಳ್ಳಿ ಸುರೇಂದ್ರಪ್ಪ, ಚೌಳಕೆರೆ ಡಿ ಬಿ ಕರಿಬಸಪ್ಪ, ಸಿದ್ದಲಿಂಗಪ್ಪ, ಗುಂತಕೋಲಮ್ನಳ್ಳಿಯ ಬೂಟ್ ತಿಪ್ಪೇಸ್ವಾಮಿ, ಕಾವಲು ಬಸವೇಶ್ವರನಗರ ಬೋರಣ್ಣ, ಸೇರಿದಂತೆ ಮುಂತಾದವರು ಇದ್ದರು

Namma Challakere Local News
error: Content is protected !!