ಚಳ್ಳಕೆರೆ : ನಗರದ ರಾಮಕೃಷ್ಣ ಚಿತ್ರಮಂದಿರದ ಹಿಂಬಾಗದ

ಏರ್ ಟೆಲ್ ದೂರವಾಣಿ ಸಂಪರ್ಕ ಕೇಂದ್ರದಲ್ಲಿ ನಕಲಿ ಸಿಮ್ ಹಾಗೂ ಹೊಸ ಸಿಮ್ ಕಾರ್ಡ್ ಗಳನ್ನು ಪಡೆಯಲು

ಸಾರ್ವಜನಿಕರಿಂದ ಹೆಚ್ಚಿನ ದರ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಹೌದು ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ

ಮಾಧ್ಯಮಕ್ಕೆ ವರದಿಗೆ ತೆರಳಿ ಶಾಪ್ ಮಾಲೀಕರನ್ನು ವಿಚಾರಿಸಿದಾಗ ಉಡಾಫೆಯ ಉತ್ತರ ನೀಡಲು ಮುಂದಾದಾಗ

ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಪತ್ರಕರ್ತರೊಂದಿಗೆ ಗ್ರಾಹಕ ವೀರೇಶ್ ಮಾತನಾಡಿ

ನಾನು ಬಹಳ ವರ್ಷಗಳಿಂದ ಏರ್ ಟೆಲ್ ಸಿಮ್ ಉಪಯೋಗಿಸುತ್ತಿದ್ಧೇನೆ

ಫೋನ್ ಕಳೆದಿದ್ದರಿಂದ ನಕಲಿ ಸಿಮ್ ಪಡೆಯಲು ಬಂದಾಗ 200ರೂ ನೀಡಿದರೆ ಮಾತ್ರ ಸಿಮ್ ನೀಡುವುದಾಗಿ ತಿಳಿಸಿದರು.

ನಕಲಿ ಸಿಮ್ ಪಡೆಯಲು ಕೇವಲ 50ರೂ ದರ ನಿಗದಿ ಪಡಿಸಿದ್ದಾರೆ

ದೂರವಾಣಿ ಸಂದೇಶದಲ್ಲಿ ಹೆಚ್ಚಿನ ದರ ನೀಡಬೇಡಿ ಎಂದು ಕಂಪನಿಯಿಂದ ಸಂದೇಶ ಬಂದಿದೆ

ಆದರೆ ಇಲ್ಲಿ 200ರೂ ಪಡೆದು ಗ್ರಾಹಕರಿಗೆ ವಂಚನೆ ಮಾಡುತ್ತಿದ್ದಾರೆ.

ಯಾವ ಮಾನದಂಡದ ಮೇಲೆ ಹಣ ಉಸುಡಿ ಮಾಡುತ್ತಿದ್ದಾರೆ

ಹೊರಗಡೆ ಎಲ್ಲಿಯೂ ನಕಲಿ ಹಾಗೂ ಹೊಸ ಸಿಮ್ ದೊರೆಯುತ್ತಿಲ್ಲ

ಹೀಗಾಗಿ ಏರ್ ಟೆಲ್ ಕಛೇರಿಗೆ ಬಂದು ಪಡೆಯಬೇಕಾಗಿರುವುದರಿಂದ ಬೇಕಾಬಿಟ್ಟಿ ದರ ವಿಧಿಸುತ್ತಿದ್ದಾರೆ

ಹಾಗಾಗಿ ಹೆಚ್ಚಿನ ಹಣ ತೆರಬೇಕಾಗಿದೆ ಎಂದು ದೂರಿದರು.

ಉಪನ್ಯಾಸಕ ರಾಜೇಶ್ ಮಾತನಾಡಿ ಕಾನೂನಿನ ಪ್ರಕಾರ ಗ್ರಾಹಕರು ನಕಲಿ ಸಿಮ್ ಪಡೆಯಲು

ಪೋಲಿಸ್ ಠಾಣೆಗೆ ದೂರು ನೀಡಿ ಎಫ್ಐಆರ್ ಪಡೆದು ನಂತರ ಸಿಮ್ ಪಡೆಯಬೇಕು

ಸಿಮ್ ಕಾರ್ಡ್ ಗಳ ಪಡೆಯಲು ಬರುವ ಗ್ರಾಹಕರಿಗೆ ದೂರವಾಣಿ ಸಂಪರ್ಕ ಕೇಂದ್ರಗಳಲ್ಲಿ ದರಪಟ್ಟಿ ಹಾಕುವುದಿಲ್ಲ

ಗ್ರಾಹಕರು ನೀಡಿದ ಹಣಕ್ಕೆ ರಸೀದಿ ನೀಡುವುದಿಲ್ಲ

ಗ್ರಾಹಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದಿಲ್ಲ.

ಮೃತ ವ್ಯಕ್ತಿಗಳ ಹೆಸರಿನಲ್ಲಿನ ಸಿಮ್ ಗಳನ್ನು ಸಂಬಂಧಿಕರು ಪಡೆಯಬೇಕಾದರೆ ಸಾವಿರಾರು ರೂಪಾಯಿ ತೆರಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ದೂರವಾಣಿ ಸಂಪರ್ಕ ಕೇಂದ್ರಗಳು ಟ್ರಾಯ್ ಸಂಸ್ಥೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ

ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡಿ ವಂಚಿಸುವ ಜಾಲ ರೂಪುಗೊಂಡಿವೆ.

ಫೋನ್ ಕಳೆದುಕೊಂಡ ಗ್ರಾಹಕರು ಅದೇ ನಂಬರ್ ಗಾಗಿ ನಕಲಿ ಸಿಮ್ ಕೇಳಿದಾಗ

ಗ್ರಾಹಕರ ಅನಿವಾರ್ಯತೆಗಳನ್ನು ದುರುಪಯೋಗ ಪಡಿಸಿಕೊಂಡು

ಹೆಚ್ಚಿನ ದರ ವಿಧಿಸುತ್ತಿರುವುದು ಖಂಡನೀಯ ನಗರದಲ್ಲಿ ಇಂತಹ ಅಕ್ರಮಗಳು ನಡೆಯುತ್ತಿದ್ದರೂ

ಸಂಬಂಧಪಟ್ಟ ಪೋಲೀಸ್ ಇಲಾಖೆಯಾಗಲಿ ತಾಲೂಕು ಆಡಳಿತವಾಗಲಿ ಟ್ರಾಯ್ ಸಂಸ್ಥೆಯಾಗಲಿ

ಕಣ್ಣು ಮುಚ್ಚಿ ಕುಳಿತಿರುವುದು ಸೋಜಿಗದ ಸಂಗತಿಯಾಗಿದೆ ಎಂದರು.

ಇನ್ನಾದರೂ ಇಂತಹ ಗ್ರಾಹಕ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವರೋ

ಅಥವಾ ತಮಗೂ ಅದಕ್ಕೂ ಸಂಬಂಧ ಇಲ್ಲವೆಂದು ಕೂರುವರೋ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!