ನಾಯಕನಹಟ್ಟಿ:: ಸೆ.25. ನಾಯಕನಹಟ್ಟಿ ಹೋಬಳಿ ಘಟಕದ ವತಿಯಿಂದ ಮತ್ತು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ನಾಯಕನಹಟ್ಟಿ ಹೋಬಳಿ ಘಟಕದ ವತಿಯಿಂದ ಕಾವೇರಿ ನದಿ ನೀರು ತಮಿಳುನಾಡಿಗೆ ಬಿಟ್ಟಿರುವ ಕಾರಣ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
.ಮಳೆ ಯಾಗದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣೆ ಪ್ರಾಧಿಕಾರ ತಮಿಳುನಾಡಿಗೆ 5000 ಕ್ಲೂಸಿಕ್ ಹರಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಇದು ರಾಜ್ಯದಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಗಿದೆ ಎಂದು ಹೋಬಳಿ ಅಧ್ಯಕ್ಷ ಪಿ ಮುತ್ತಯ್ಯ ಹೇಳಿದ್ದಾರೆ.
ಅವರು ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಪ್ರತಿಭಟನೆಯ ನಡೆಸಿದರು ವಾಲ್ಮೀಕಿ ವೃತ್ತದಿಂದ ಪ್ರತಿಭಟನೆ ಮೂಲಕ ನಾಡ ಕಚೇರಿಯ ಹೊರಗೆ ಪಾದಯಾತ್ರೆ ಮೂಲಕ ಆಗಮಿಸಿ ರಾಜಸ್ವ ನಿರೀಕ್ಷಕ ಆರ್ ಚೇತನ್ ಕುಮಾರ್ ಅವರಿಗೆ ಮನವಿಯನ್ನ ಸಲ್ಲಿಸಿದರು .
ಇದೇ ಸಂದರ್ಭದಲ್ಲಿ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ,
ನಗರ ಘಟಕ ಅಧ್ಯಕ್ಷ ಓ ತಿಪ್ಪೇಸ್ವಾಮಿ, ಗೌರವಾಧ್ಯಕ್ಷ. ವಿಶ್ವನಾಥ್,
ಯುವ ಘಟಕ ಅಧ್ಯಕ್ಷ ಸುರೇಶ್, ಸಹ ಕಾರ್ಯದರ್ಶಿ ಎನ್ ಬೋರಯ್ಯ, ಉಪಾಧ್ಯಕ್ಷ ಕೆ ಜಿ ಮಂಜುನಾಥ್, ಕಾರ್ಮಿಕ ಘಟಕ ಅಧ್ಯಕ್ಷ ಕೆ ನಾಗರಾಜ್, ಮಹಾಪ್ರದಾನ ಕಾರ್ಯದರ್ಶಿ ಎಸ್ ಕಾಟಯ್ಯ, ಸದಸ್ಯರಾದ ಹೊನ್ನೂರಪ್ಪ, ಬಿ ತಿಪ್ಪೇಸ್ವಾಮಿ, ರಮೇಶ್, ಎಸ್ ವೆಂಕಟೇಶ್, ಜಿ ಶಿವು, ನಿತಿನ್, ಬೋರಸ್ವಾಮಿ, ಮನೋಜ್ ತಿಪ್ಪೇಸ್ವಾಮಿ ಎಸ್ ತಿಪ್ಪೇಸ್ವಾಮಿ, ಇದ್ದರು