ಶಾಲೆಯಲ್ಲಿ ವಾಮಚಾರ ಬೆಚ್ಚಿಬಿದ್ದ ವಿದ್ಯಾರ್ಥಿಗಳು : ತಿಮ್ಮಪ್ಪನಹಳ್ಳಿ ಸರಕಾರಿ ಶಾಲೆಯಲ್ಲಿ..!
ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಇತ್ತಿಚೀಗೆ ವಾಮಚಾರದ ಗಮಲು ಹೆಚ್ಚಾಗಿದೆ, ಅದರಂತೆ ತಿಮ್ಮಪ್ಪಯ್ಯನಹಳ್ಳಿ ಗ್ರಾನದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರ ಕಚೇರಿ ಮುಂಭಾಗದಲ್ಲಿ ಯಾರೋ ಕಿಡಿಕೇಡಿಗಳು ವಾಮಾಚಾರ ಮಾಡಿ ಶಾಲೆಯಲ್ಲಿ ವಿಕೃತ ಮೆರೆದಿದ್ದಾರೆ.
ಇದರಿಂದ ಬೆಚ್ಚಿ ಬಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ತಡ ರಾತ್ರಿ ಈ ಕೃತ್ಯ ನಡೆಸಲಾಗಿದ್ದು, ಶನಿವಾರ ಬೆಳಗ್ಗೆ ಮಾರ್ನಿಂಗ್ ಶಾಲೆಗೆ ಆಗಮಿಸಿದ ಮಕ್ಕಳು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಈ ಕೃತ್ಯವನ್ನು ಯಾರು ಮಾಡಿದ್ದು ಎನ್ನುವುದು ತಿಳಿದುಬಂದಿಲ್ಲ. ಇವರ ಗುರಿ ಯಾರು ಎನ್ನುವುದು ಕೂಡಾ ಗೊತ್ತಿಲ್ಲ. ಆದರೆ, ವಾಮಾಚಾರ ಕಂಡು ಶಾಲಾ ಮಕ್ಕಳಲ್ಲಿ ಶಿಕ್ಷಕರಲ್ಲಿ ಹಾಗೂ ಪೋಷಕರಲ್ಲಿ ಮಾತ್ರ ಆತಂಕ ಮೂಡಿದೆ. ಹೀಗಾಗಿ ಈ ಕೃತ್ಯ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲ ಬಳಿ ತಲೆ ಬುರುಡೆ, ಲಿಂಬೆ ಹಣ್ಣು ,ಎಲೆ ಅಡಿಕೆ ಜತೆಗೆ ಕುಂಕುಮವನ್ನೂ ಬಳಸಲಾಗಿದೆ. ನೋಡಿದರೆ ಭಯ ಹುಟ್ಟಿಸುವ ಸ್ಥಿತಿ ಇದೆ.
ಕಿಡಿಗೇಡಿಗಳು ಶಾಲೆಯಲ್ಲಿ ಯಾರನ್ನೋ ಗುರಿಯಾಗಿಟ್ಟುಕೊಂಡು ವಾಮಾಚಾರ ಮಾಡುವುದಕ್ಕಾಗಿ ಈ ರೀತಿ ಮಾಡಿರಬಹುದು ಎಂಬ ಅನುಮಾನದ ಮಾತುಗಳು ಕೇಳಿ ಬರುತ್ತಿವೆ.
ಇನ್ನೂ ಮಾಹಿತಿ ಪ್ರಕಾರ ಹೊರಗಿನವರೂ ಯಾರೂ ಮಾಡಿದ್ದಲ್ಲಿ ಮುಖ್ಯ ಶಿಕ್ಷಕಿಯನ್ನು ಎದುರಿಸಲು ಈ ರೀತಿ ಮಾಡಿದ್ದಾರೆ ಶಾಲೆಯ ಸಮೀಪದಲ್ಲೇ ಸ್ಮಶಾನ ವಿದ್ದು, ವಸತಿ ನಿಲಯದ ಆವರಣದಲ್ಲಿ ನಿಂಬೆಹಣ್ಣಿನ ಮರವಿದೆ ಶಾಲಾ ಆವರದಲ್ಲಿರುವ ಹೂವಿನ ಗಿಡದಲ್ಲಿ ರಂಗೋಲಿ ಬಿಡಿಸುವ ಬಣ್ಣ ಹಾಕಿದ್ದಾರೆ,
ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ತಳಕು ಠಾಣೆಗೆ ಮಾಹಿತಿ ನೀಡಲಾಗಿತ್ತು ಸ್ಥಳಕ್ಕೆ ತಳಕು ಠಾಣೆಯ ಪಿಎಸ್ ಐ ಭೇಟಿ ನೀಡಿದ್ದಾರೆ ಇದು ವಿದ್ಯಾರ್ಥಿಗಳ ಕೈಚಳಕ ಎಂಬ ಅನುಮಾನ ವ್ಯಕ್ತವಾಗಿದೆ ಎಂಬ ಮಾಹಿತಿ ನೀಡಿದ್ದಾರೆ.