ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ದರಗಳನ್ನು 2023-24ನೇ ಸಾಲಿಗೆ ತಾಲ್ಲೂಕು
ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿ ಸಭೆಯಲ್ಲಿ ಪರಿಷ್ಕರಿಸಲಾಗಿದೆ ಎಂದು ತಾಲ್ಲೂಕು ಮಾರುಕಟ್ಟೆ ಮೌಲ್ಯ
ಮಾಪನ ಉಪಸಮಿತಿಯ ಕಾರ್ಯದರ್ಶಿಗಳು ಹಾಗೂ ಉಪನೋಂದಣಾಧಿಕಾರಿಗಳು ತಿಳಿಸಿರುತ್ತಾರೆ.
ಪರಿಷ್ಕರಿಸಿದ ಸ್ಥಿರಾಸ್ತಿ ಮಾರುಕಟ್ಟೆ ದರಗಳ ಕರಡು ಪತ್ರಿಯನ್ನು ಸಾರ್ವಜನಿಕರ ಸಲಹೆ ಸೂಚನೆ ಮತ್ತು
ಆಕ್ಷೇಪಣೆಗಳಿಗಾಗಿ ಕಛೇರಿಯ ಸೂಚನಾ ಫಲಕದಲ್ಲಿ ಪುಕಟಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ
ಸೂಚನೆ ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 24-09-2023ರ ಒಳಗೆ ಚಳ್ಳಕೆರೆ
ಉಪನೋಂದಣಾಧಿಕಾರಿಗಳ ಕಛೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಚಳ್ಳಕೆರೆ ಉಪನೊಂದಾಣಿಧಿಕಾರಿ ಭಾಗ್ಯಮ್ಮ ಪುಕಟಣೆಯಲ್ಲಿ ತಿಳಿಸಿದ್ದಾರೆ