ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಡಿವೈಎಸ್‌ಪಿ ಬಿಟಿ.ರಾಜಣ್ಣ
ಚಳ್ಳಕೆರೆ : ಈ ಬಾರಿ ಗೌರಿ ಗಣೇಶ ಚರ್ತುಥಿ ಹಾಗೂ ಈದ್‌ಮಿಲಾದ್ ಹಬ್ಬ ಒಂದೇ ವಾರದಲ್ಲಿ ಬಂದಿರುವುದರಿAದ ಹಿಂದೂ ಮುಸ್ಲಿಂ ಸ್ನೇಹಮಯದಿಂದ ವರ್ತಿಸಬೇಕು, ಅದರಂತೆ ತಾಲೂಕಾದ್ಯಂತ ಗೌರಿ ಗಣೇಶ ಹಬ್ಬವನ್ನು ಶಾಂತಿ-ಸುವ್ಯವಸ್ಥೆಯಿAದ ಆಚರಿಸಬೇಕು ಎಂದು ಡಿವೈಎಸ್ಪಿ ರಾಜಣ್ಣ ಹೇಳಿದರು.

ಅವರು ನಗರದ ಪೋಲಿಸ್ ಠಾಣೆ ಆವರಣದಲ್ಲಿ ಪೋಲಿಸ್ ಇಲಾಖೆವತಿಯಿಂದ ಈದ್ ಮಿಲಾದ್ ಹಾಗೂ ಗಣೇಶೋತ್ಸವ ಹಬ್ಬಗಳ ಆಚರಣೆ ಅಂಗವಾಗಿ ಸಾರ್ವಜನಿಕರಿಗೆ, ವಿವಿಧ ಸಂಘ ಸಂಸ್ಥೆ ಹಾಗೂ ಮುಸ್ಲಿಮ್ ಸಮುದಾಯದ ಮುಖಂಡರಿಗೆ ಆಯೋಜಿಸಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗಣೇಶ ಪ್ರತಿಷ್ಠಾಪಿಸುವ ಸಂಘವು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು, ಗಣೇಶ ಕುರಿಸುವ ಸ್ಥಳವನ್ನು ಪೊಲೀಸ್ ಸಿಬ್ಬಂದಿಗೆ ತೋರಿಸಬೇಕು, ಹಾಗೂ ಬೆಸ್ಕಾಂ ಇಲಾಖೆ, ನಗರಸಭೆ, ಗ್ರಾಪಂ. ಹಾಗೂ ಪರಿಸರ ನೈರ್ಮಲ್ಯ ಇಲಾಖೆಯಿಂದ ಪರವಾನಿಗೆ ಪಡೆದ ನಂತರ ಒಪ್ಪಂದ ಪ್ರಕಾರ ಗಣೇಶ ಕುರಿಸಿ ವಿರ್ಸಜನೆ ಮಾಡಬೇಕು, ಸಮಾಜದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಕಾಪಾಡಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು ತಾಲೂಕಿನಲ್ಲಿ ಹಿಂದೂ ಹಾಗೂ ಮುಸಲ್ಮಾನ್ ಬಾಂಧವರು ಭಾವೈಕ್ಯತೆಯಿಂದ ಜೀವನ ನಡೆಸುತ್ತಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಎರಡು ಸಮುದಾಯದವರು ತಮ್ಮದೇ ಆದ ಸಂಪ್ರದಾಯಗಳಲ್ಲಿ ಆಚರಿಸುತ್ತಾರೆ
ಇನ್ನೂ ಇನ್ಸ್ಪೆಕ್ಟೆರ್ ಆರ್.ಎಪ್.ದೇಸಯಿ ಮಾತನಾಡಿ, ಪೊಲೀಸ್ ಇಲಾಕೆ ಹಾಘೂ ನಗರಸಭೆ ಸೂಚಿಸಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು, ನಗರದಲ್ಲಿ ಹಬ್ಬಗಳ ದಿನದಂದು ಶಾಂತಿ ಕಾಪಾಡುವುದು ಸಾರ್ವಜನಿಕರ ಕರ್ತವ್ಯವಾಗಿದ್ದು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಾರ್ಯವನ್ನು ಕೈಗೊಂಡಿರುತ್ತದೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಇಲಾಖೆಯ ಮಾರ್ಗದರ್ಶನದಂತೆ ನಿಯಮಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಿಸಬೇಕು, ಪೊಲೀಸ್ ಇಲಾಖೆ ಇರುವುದು ಸಾರ್ವಜನಿಕರ ರಕ್ಷಣೆಗಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವುದು ಇಲಾಖೆ ಜವಾಬ್ದಾರಿಯಾಗಿರುತ್ತದೆ ಗಣೇಶ ಹಬ್ಬದಂದು ಪೊಲೀಸ್ ನಗರ ಸಭೆ ಬೆಸ್ಕಾಂ ಕಂದಾಯ ಇಲಾಖೆಗಳ ಅನುಮತಿ ಪಡೆದು ಪರಿಸರ ಸ್ನೇಹಿ ಮಣ್ಣಿನ ಗಣೇಶವನ್ನು ಪ್ರತಿಷ್ಠಾಪಿಸಬೇಕು ಸಂಜೆ 7ರಿಂದ ರಾತ್ರಿ 10ವರೆಗೆ ಮಾತ್ರ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿದ್ದು ಗಣೇಶ ವಿಸರ್ಜನೆಯ ದಿನ ಮೆರವಣಿಗೆ ಸಾಗುವ ಮಾರ್ಗಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು ನಿಯಮಗಳನ್ನು ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಈದ್ ಮಿಲಾದ್ ಹಬ್ಬದ ವೇಳೆ ಮುಸ್ಲಿಂ ಬಾಂಧವರು ಶಾಂತಿಯನ್ನು ಕಾಪಾಡಿ ತಮ್ಮ ಆಚರಣೆಗಳನ್ನು ಕೈಗೊಳ್ಳಬೇಕು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಪೌರಾಯುಕ್ತ ಚಂದ್ರಪ್ಪ ಮಾತನಾಡಿ ರಸ್ತೆಗೆ ಅಡ್ಡವಾಗಿ ಪ್ಲೆಕ್ಸ್ ಬಂಟಿಗ್ಸ್ ಕಟ್ಟಬಾರದು ನಿಯಮ ಬಾಹಿರವಾಗಿ ಕಟ್ಟಿದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ, ನಗರಸಭೆ ಪರವಾನಗೆ ಕಡ್ಡಾಯವಾಗಿರುತ್ತದೆ, ಅನಧಿಕೃತ ಫ್ಲೆಕ್ಸ್ಗಳಿಗೆ ದಂಡ ವಿಧಿಸಲಾಗುವುದು ಫ್ಲೆಕ್ಸ್ಗಳಿಗೆ ಹಾನಿ ಉಂಟಾದಲ್ಲಿ ನಗರ ಸಭೆ ಜವಾಬ್ದಾರಿ ಆಗಿರುವುದಿಲ್ಲ ಫ್ಲೆಕ್ಸ್ ಗಳನ್ನು ಹಾಕುವವರೆ ಉಸ್ತೂವಾರಿ ನೋಡಿಕೊಳ್ಳಬೇಕು, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಗರಸಭೆ ಅನುಮತಿ ಕಡ್ಡಾಯವಾಗಿರುವುದರಿಂದ ಕಚೇರಿಯಲ್ಲಿ ಬಂದು ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ ಈಡೀ ನಗರದಲ್ಲಿ ನೂರಾರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ ಆದರೆ ವಿಸರ್ಜನೆಗೆ ಸೂಕ್ತವಾದ ಸ್ಥಳವಿಲ್ಲ ಆದ್ದರಿಂದ ನಗರಸಭೆಯಿಂದ ಕರೆಕಲ್ ಕೆರೆಯಲ್ಲಿ ದೊಡ್ಡದಾದ ಒಂದು ಬಾವಿ ಹೊಂಡ ತೆಗೆದು ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು, ಅದರಂತೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಕಳೆದ ಐದು ವರ್ಷಗಳಿಂದ ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ ಈ ನಿಟ್ಟಿನಲ್ಲಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಗಣೇಶ ಹಬ್ಬಗಳಲ್ಲಿ ಮನೋರಂಜನೆ ಆಟಿಕೆಗಳನ್ನು ನಿಷೇಧಿಸಬೇಕು ಇಲ್ಲದಿದ್ದರೆ ನಿಗದಿತ ದರವನ್ನು ಜಾರಿಗೊಳಿಸಿ ಮಾಲೀಕರಿಗೆ ಎಚ್ಚರಿಕೆ ನೀಡಬೇಕು ಎಂದು ಕೋರಿದರು.
ಮುಸ್ಲಿಂ ಮುಖಂಡ ಎಚ್ಎಸ್ ಸೈಯದ್ ಮಾತನಾಡಿ ಈಡೀ ರಾಜ್ಯದಲ್ಲಿ ಮಾದರಿ ನಗರ ಎಂದರೆ ಅದು ಚಳ್ಳಕೆರೆ ನಗರ ಮಾತ್ರ ಹಿಂದೂ ಯುವಕರ ಜೊತೆ ಮುಸ್ಲಿಂ ಯುವಕರು ಸೇರಿ ನಗರದಲ್ಲಿ ಆಚರಣೆ ಮಾಡುತ್ತಿದ್ದಾರೆ, ಆದರೆ ಈ ಬಾರಿ ಎರಡು ಧಾರ್ಮಿಕ ಹಬ್ಬಗಳು ಒಂದೇ ತಿಂಗಳಲ್ಲಿ ಆಚರಣೆಗೆ ಬಂದಿರುವುದರಿAದ ಹಿಂದೂ ಮುಸ್ಲಿಂ ಸಮುದಾಯವು ಸಹೋದರತೆಯ ಮನೋಭಾವವನ್ನು ಬೆಳೆಸಿಕೊಂಡು ಹಬ್ಬಗಳನ್ನು ಆಚರಿಸೋಣ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ ಇಡೀ ರಾಜ್ಯಕ್ಕೆ ಮಾದರಿ ಆಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಳಕು ವೃತ ನಿರೀಕ್ಷಕ ಕೆ.ಸಮಿವುಲ್ಲ .ಪಿಎಸ್ಐ ಶಿವರಾಜ್, ನಗರಸಭೆ ಸದಸ್ಯ ಹೊಯ್ಸಳ ಗೋವಿಂದ ಗಾಂಧಿನಗರದ ಡಿ.ಚಂದ್ರು. ಕೃಷ್ಣ, ಡಿಎಸ್‌ಎಸ್.ವಿಜಯ್ ಕುಮಾರ್, ಹೊನ್ನುರಸ್ವಾಮಿ, ಬೆಸ್ಕಾಂ ಇಲಾಖೆ ಅಧಿಕಾರಿ ರಾಜಣ್ಣ, .ಶಿರಸ್ತೆದಾರ್ ಗಿರೀಶ್ .ನಗರಸಭೆ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ, ಸೇರಿದಂತೆ ಗಣೇಶ ಸಂಘಗಳ ಸದಸ್ಯರು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

Namma Challakere Local News
error: Content is protected !!