ಪರಶುರಾಮಪುರದಲ್ಲಿ ಶ್ರೀ ಕೃಷ್ಣಜಯಂತ್ಯುತ್ಸವದ ಅಂಗವಾಗಿ ಶ್ರೀ ಕೃಷ್ಣನ ಭಾವಚಿತ್ರ ಮೆರವಣಿಗೆ, ವಿವಿಧ ಜನಪದ ಕಲಾತಂಡಗಳು, ಕುಂಭ ಮೆರವಣಿಗೆ
ಪರಶುರಾಮಪುರದಲ್ಲಿ ಶ್ರೀ ಕೃಷ್ಣಜಯಂತ್ಯುತ್ಸವದ ಅಂಗವಾಗಿ ಸಾರೋಟಿನಲ್ಲಿ ಶ್ರೀ ಕೃಷ್ಣನ ಭಾವಚಿತ್ರ ಮೆರವಣಿಗೆ
ಗ್ರಾಮದ ಗೊಲ್ಲಸಮುದಾಯದವರು ಸೋಮವಾರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣಜಯಂತ್ಯುತ್ಸವದಲಿ ಸೋಮವಾರ ಗ್ರಾಮದ ಶ್ರೀ ಕೃಷ್ಣಭವನದ ಬಳಿ ಟ್ರಾö್ಯಕ್ಟರ್ ಮತ್ತು ಸಾರೋಟುಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಶ್ರೀ ಕೃಷ್ಣನ ಭಾವಚಿತ್ರವನ್ನು ಪ್ರತಿಷ್ಟಾಪಿಸಿ ಕುಂಭಮೇಳದೊAದಿಗೆ ವಿವಿಧ ಜನಪದ ವಾದ್ಯಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು
ಶ್ರೀ ಕೃಷ್ಣಜಯಂತಿಯ ಅಂಗವಾಗಿ ಮೆರವಣಿಗೆಯಲ್ಲಿ ಗೊಂಬೆಕುಣಿತ, ಹೆಣ್ಣು ಮಕ್ಕಳ ಕುಂಭ, ವಾಲಗ ಕಹಳೆ ಡೋಲು ಮೇಳಗಳೊಂದಿಗೆ ಡಿಜೆ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು
ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಸಾದ ಹಂಚಿ ವೀಳ್ಯ ನೀಡಿ ಪ್ರಸಾದ ವಿತರಿಸಿ ಜಯಂತ್ಯುತ್ಸವದ ಅಂಗವಾಗಿ ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು
ಗ್ರಾಮದ ಶ್ರೀ ಕೃಷ್ಣಭವನದಲ್ಲಿ ಕಳೆದ ಒಂದು ವಾರದಿಂದ ಶ್ರೀ ಕೃಷ್ಣನ ಭಾವಚಿತ್ರವನ್ನು ಪ್ರತಿಷ್ಟಾಪಿಸಿ ಪೂಜಿಸಿದರು ಕಳೆದ ಒಂದು ವಾರದಿಂದ ಪ್ರತೀ ದಿನವೂ ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು ಕಡೇ ಶ್ರಾವಣ ಸೋಮವಾರದ ಅಂಗವಾಗಿ ಗೊಲ್ಲರಹಟ್ಟಿಯವರು ಸ್ವಾಮಿಯ ಮೆರವಣಿಗೆ ಕೈಗೊಂಡಿದ್ದರು
ಸಂದರ್ಭದಲ್ಲಿ ಶ್ರೀ ಕೃಷ್ಣಯಾದವ ಯುವಕ ಸಂಘ, ಹಾಗೂ ಗೋಕುಲನಗರದ ಯುವಕರು, ಗೊಲ್ಲರಹಟ್ಟಿಯ ಹೆಣ್ಣು ಮಕ್ಕಳು ಹನ್ನೆರೆಡು ಕೈವಾಡಸ್ತರು ಗೊಲ್ಲರಹಟ್ಟಿಯ ಗ್ರಾಮಸ್ಥರು ಇದ್ದರು