ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಪುರುಷ ಸದಾ ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಚಿಲುಮೇರುದ್ರಸ್ವಾಮಿ ಅವರ ಗದ್ದುಗೆಯ ಬಳಿ ದೇವಸ್ಥಾನ ನಿರ್ಮಿಸುತ್ತಿರುವುದು ಸಂತಸದ ಸಂಗತಿ ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹೇಳಿದರು
ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಹೊರವಲಯದ ವೇದಾವತಿ ನದಿಯ ದಡದಲ್ಲಿನ ಧಾರ್ಮಿಕ ಕ್ಷೇತ್ರ ಶ್ರೀ ಗುರುಚಿಲುಮೇರುದ್ರಸ್ವಾಮಿ ಮಠದ ಆವರಣದಲ್ಲಿ ಶ್ರಾವಣ ಸೋಮವಾರ ದೇವಸ್ಥಾನ ಸಮಿತಿಯವರು ಮತ್ತು ಸುತ್ತೇಳು ಹಳ್ಳಿಗಳ ಗ್ರಾಮಸ್ಥರು ಆಯೋಜಿಸಿದ್ದ ನೂತನ ದೇವಸ್ಥಾನಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು
ನಾಗಗೊಂಡನಹಳ್ಳಿ ಗ್ರಾಮ ವೇದಾವತಿ ನದಿ ತಟದಲ್ಲಿದ್ದು ಅನಾದಿ ಕಾಲದಿಂದಲೂ ಇಲ್ಲಿ ಚಿಲುಮೇರುದ್ರಸ್ವಾಮಿ ಸುತ್ತೇಳು ಹಳ್ಳಿಗಳ ಕೆರೆ ಕಟ್ಟೆ ಜನ ಜಾನುವಾರುಗಳಿಗೆ ಕುಡಿವ ನೀರು ಸದಾ ಜನ ಜಾನುವಾರುಗಳಿಗೆ ಒಳ್ಳೆಯದನ್ನೇ ಬಯಸುತ್ತಿದ್ದ ಪವಾಡ ಪುರುಷ ಚಿಲುಮೇರುದ್ರಸ್ವಾಮಿ ಗದ್ದುಗೆಯ ಬಳಿ ಪ್ರತೀ ವರ್ಷ ಭಕ್ತರು ಜಾತ್ರೆ ಆಯೋಜಿಸಿ ದನಗಳ ಜಾತ್ರೆ, ರಥೋತ್ಸವ ಹಮ್ಮಿಕೊಂಡು ಈ ಭಾಗದ ಹಳ್ಳಿಗಳ ಜನರ ನಡುವೆ ಸಾಮಾಜಿಕ ಸಾಮರಸ್ಯತೆ ಉಂಟುಮಾಡಿದ್ದರು ಈ ಹಿನ್ನೆಲೆ ಈ ಗದ್ದುಗೆಯ ಬಳಿ ಸುಸಜ್ಜಿತ ದೇವಸ್ಥಾನ ನಿರ್ಮಾಣಕ್ಕೆ ಸಮಿತಿಯವರು ಕೈಹಾಕಿದ್ದಾರೆ ದೇವಸ್ಥಾನ ನಿರ್ಮಾಣಕ್ಕೆ ತನು ಮನ ಧನವನ್ನು ಅರ್ಪಿಸುವುದಾಗಿ ಭರವಸೆ ನೀಡಿದರು
ಚಿಲುಮೇರುದ್ರಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗಗೊಂಡನಹಳ್ಳಿ ಎಚ್ ಓಬಳಪ್ಪ ಮಾತನಾಡಿ ಸುತ್ತೇಳು ಹಳ್ಳಿಗಳ ಚಿಲುಮೇರುದ್ರಸ್ವಾಮಿಯ ಭಕ್ತಸಮೂಹದ ಆಶಯದಂತೆ ದೇವಸ್ಥಾನ ಸಮಿತಿಯವರು ಈಗ ಗದ್ದುಗೆಯ ಬಳಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇವೆ ಈ ದೇವಸ್ಥಾನ ನಿರ್ಮಾಣಕ್ಕೆ ಸಂಸದ, ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪ್ರೋತ್ಸಾಹ ಅಗತ್ಯ ಈಗಾಗಲೇ ಕೆಲ ಭಕ್ತರು ತಮ್ಮ ತನು ಮನ ಧನವನ್ನು ಅರ್ಪಿಸಲು ಮುಂದೆ ಬಂದಿದ್ದಾರೆ ಈ ಧಾರ್ಮಿಕ ಕಾರ್ಯಕ್ಕೆ ಎಲ್ಲರ ನೆರವು ಅಗತ್ಯ ಎಂದರು
ಸAದರ್ಭದಲ್ಲಿ ಜಾಜೂರು ಗ್ರಾಪಂ ಅಧ್ಯಕ್ಷೆ ಲೋಕಮ್ಮಸುರೇಶ, ಪಗಡಲಬಂಡೆ ಗ್ರಾಪಂ ಅಧ್ಯಕ್ಷ ಕಲ್ಲೇಶಪ್ಪ, ದೇವಸ್ಥಾನ ಸಮಿತಿಯ ಎಚ್ ಓಬಳಪ್ಪ, ಕಾರ್ಯದರ್ಶಿ ಜೆ ಎಚ್ ಬೊಮ್ಮಯ್ಯ, ಗ್ರಾಪಂ ಸದಸ್ಯರಾದ ಸಿದ್ದೇಶ, ಹಂಪಣ್ಣ, ಚಲುಮಕ್ಕ ಹನುಮಂತರಾಯ, ವರಲಕ್ಷಿö್ಮÃಚಲ್ಮೇಶ, ನರಸಿಂಹಪ್ಪ, ರವಿಚಂದ್ರ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಜೆ ಎಲ್ ಶ್ರೀನಿವಾಸ, ರೈತ ಮುಖಂಡ ಕೆ ಪಿ ಭೂತಯ್ಯ, ಉಮಾಮಹೇಶ್ವರಪ್ಪ, ರಾಮಾಂಜಿನೇಯ, ದೇವರಾಜು, ತಿಪ್ಪೇಸ್ವಾಮಿ, ಕೆಂಜಡಿಯಪ್ಪ, ಸುರೇಶ, ಹರವಿಗೊಂಡನಹಳ್ಳಿ, ನಾಗಗೊಂಡನಹಳ್ಳಿ, ಹಾಲಗೊಂಡನಹಳ್ಳಿ, ಕಾಮಸಮುದ್ರ, ಜಾಜೂರು ಸೇರಿದಂತೆ ಸುತ್ತೇಳು ಹಳ್ಳಿಗಳ ಭಕ್ತರು ದೇವಸ್ಥಾನ ಸಮಿತಿಯವರು ಗ್ರಾಮಸ್ಥರು ಇದ್ದರು
ಪೋಟೋ (ಪಿಆರ್‌ಪುರ ಎಂಎಲ್‌ಎ 11 )
ಪರಶುರಾಮಪುರ ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಹೊರವಲಯದ ವೇದಾವತಿ ನದಿಯ ದಡದಲ್ಲಿನ ಧಾರ್ಮಿಕ ಕ್ಷೇತ್ರ ಶ್ರೀ ಗುರುಚಿಲುಮೇರುದ್ರಸ್ವಾಮಿ ಮಠದ ಆವರಣದಲ್ಲಿ ಶ್ರಾವಣ ಸೋಮವಾರ ದೇವಸ್ಥಾನ ಸಮಿತಿಯವರು ಮತ್ತು ಸುತ್ತೇಳು ಹಳ್ಳಿಗಳ ಗ್ರಾಮಸ್ಥರು ಆಯೋಜಿಸಿದ್ದ ನೂತನ ದೇವಸ್ಥಾನಕ್ಕೆ ಗುದ್ದಲಿಪೂಜೆಯನ್ನು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ನೆರವೇರಿಸಿದರು ಜಾಜೂರು ಗ್ರಾಪಂ ಅಧ್ಯಕ್ಷೆ ಲೋಕಮ್ಮಸುರೇಶ, ಪಗಡಲಬಂಡೆ ಗ್ರಾಪಂ ಅಧ್ಯಕ್ಷ ಕಲ್ಲೇಶಪ್ಪ, ದೇವಸ್ಥಾನ ಸಮಿತಿಯ ಎಚ್ ಓಬಳಪ್ಪ, ಕಾರ್ಯದರ್ಶಿ ಜೆ ಎಚ್ ಬೊಮ್ಮಯ್ಯ, ಗ್ರಾಪಂ ಸದಸ್ಯರಾದ ಸಿದ್ದೇಶ, ಹಂಪಣ್ಣ, ಚಲುಮಕ್ಕ ಹನುಮಂತರಾಯ, ವರಲಕ್ಷಿö್ಮÃಚಲ್ಮೇಶ, ನರಸಿಂಹಪ್ಪ, ರವಿಚಂದ್ರ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನಸ್ವಾಮಿ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!