ಛಾಯಾಗ್ರಾಹಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ : ತಾಲೂಕು ಅಧ್ಯಕ್ಷÀ ನೇತಾಜಿ ಪ್ರಸನ್ನ

ಚಳ್ಳಕೆರೆ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಛಾಯಾಗ್ರಾಹಕರನ್ನು ಗುರುತಿಸುವ ಮಹತ್ವದ ಕಾರ್ಯದಲ್ಲಿ ಆಯ್ದ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ ಎಂದು ನೂತನ ತಾಲೂಕ್ ಅಧ್ಯಕ್ಷರಾದ ನೇತಾಜಿ ಪ್ರಸನ್ನ ಹೇಳಿದರು.
ಅವರು ನಮ್ಮ ಚಳ್ಳಕೆರೆ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಛಾಯಾಗ್ರ ಸಂಘದ ವತಿಯಿಂದ ಇಂಟರ್ನ್ಯಾಷನಲ್ ಫೋಟೋ ಎಕ್ಸಿಬಿಷನ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಪ್ರತಿ ತಾಲೂಕಿನ ಹಿರಿಯ ಛಾಯಾಗ್ರಾಹಕರನ್ನ ಮತ್ತು ಗುರುಗಳಾಗಿ ಸೇವೆ ಸಲ್ಲಿಸಿರತಕ್ಕಂಥ ಛಾಯಾಗ್ರಾಹಕರನ್ನ ಗುರುತಿಸಿ ಸನ್ಮಾನಿಸುವುದು ಮತ್ತು ಗೌರವಿಸುವುದು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಹೆಸರಾಂತ ಸ್ಟುಡಿಯೋಗಳಾದ ಸ್ವಾಮಿ ಸ್ಟುಡಿಯೋ ಮಾಲೀಕರಾದ ಎರ್ರಿಸ್ವಾಮಿ ಮತ್ತು ಚಳ್ಳಕೆರೆ ಬಾನು ಸ್ಟುಡಿಯೋ ಮಾಲೀಕರಾದ ಆರ್.ಅಶೋಕ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ನೂತನ ತಾಲೂಕ್ ಅಧ್ಯಕ್ಷರಾದ ನೇತಾಜಿ ಪ್ರಸನ್ನ ಕಾರ್ಯದರ್ಶಿಗಳಾದ ಶಾಂತಲಾ ಚಂದ್ರಶೇಖರ್ ನಿರ್ದೇಶಕರಾದ ದಿವಾಕರ್ ಮಾರುತಿ ಸ್ಟುಡಿಯೋ ತಿಪ್ಪೇಸ್ವಾಮಿ ಮತ್ತು ಮಿಕ್ಸಿಂಗ್ ನಾಗೇಶ್ ನೇರ್ಲುಗುಂಟೆ ವೆಂಕಟೇಶ್ ಛಾಯಾಗ್ರಹಕರಾದ ಶಿವು ಹಿರೇಹಳ್ಳಿ ಮಂಜುನಾಥ್ ವಿಡಿಯೋಗ್ರಾಫರ್ ವಿಜಯ, ಕೆಪಿಎ ರಾಜ್ಯಾಧ್ಯಕ್ಷರಾದ ಪರಮೇಶ ಸುಬ್ಬಯ್ಯ. ಉಪಾಧ್ಯಕ್ಷರಾದ ನಾಗೇಶ್ ನಿರ್ದೇಶಕರಾದ ಸಂಪತ್ ವನ್ಯಜೀವಿ ಛಾಯಾಗ್ರಾಹಕರಾದ ಉಮಾಶಂಕರ್ ಚಿಕ್ಕಮಂಗಳೂರು ಜಿಲ್ಲಾಧ್ಯಕ್ಷರಾದ ಜಯಚಂದ್ರ ಮತ್ತು ಕಾರ್ಯದರ್ಶಿಗಳಾದ ರೇಣುಕಪ್ಪ ಇವರುಗಳು ಭಾಗಿಯಾಗಿದ್ದರು

About The Author

Namma Challakere Local News
error: Content is protected !!