ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು
ಮಾದಿಗ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕ ಹಾಗೂ ಸಚಿವರಿಗೆ ಸನ್ಮಾನ ಸಮಾರಂಭ ಚಳ್ಳಕೆರೆ ನಗರದ ಶ್ರೀ ಅನಂತನಾಥ ಜೈನ ಭವನದಲ್ಲಿ ನಡೆಯಿತು.
ಇನ್ನೂ ತಾಲ್ಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ರಿ. ವತಿಯಿಂದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಸಚಿವರು, ಶಾಸಕರು ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ನಡೆಯಿತು.
ಈ ಸಂಧರ್ಭದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಪೌರಾಯುಕ್ತರಾದ ಚಂದ್ರಪ್ಪ, ಮಾಜಿ ಸಚಿವ ಹೆಚ್.ಅಂಜನೆಯ, ತಾಲ್ಲೂಕು ದಂಡಾಧಿಕಾರಿಗಳಾದ ಮಲ್ಲಿಕಾರ್ಜುನ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪರವರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ಮೂರ್ತಿ ರವರು, ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥ ರಾಯ್, ಟಿ.ವಿಜಯ್ ಕುಮಾರ್, ಜಯಲಕ್ಷ್ಮೀ ಕೃಷ್ಣಮೂರ್ತಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ, ದಯಾನಂದ್, ಶ್ರೀನಿವಾಸ್, ಹೆಚ್.ಹನುಮಂತಪ್ಪ, ಮುಖಂಡರಾದ ಜಯಕುಮಾರ್ , ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.