ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ನಿವೃತ್ತಿ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪನವರ ಪುತ್ರ ಸುಜಯ್ ಭೇಟಿ ನೀಡಿ ವರ್ಣನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಕೆ
ನಾಯಕನಹಟ್ಟಿ:: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಮಳೆರಾಯನ ಮುನಿಸು ಇನ್ನಾದರೂ ಕರಗಬಹುದೆಂಬ ನಂಬಿಕೆಯಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಎನ್ ವೈ ಸುಜಯ್ ಹೇಳಿದರು.
ಅವರು ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ವರ್ಣನ ಕೃಪೆಗಾಗಿ ಶ್ರಾವಣ ಮಾಸದ ಮೂರನೇ ಸೋಮವಾರದಂದು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರೆ. ನಮ್ಮ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಿನಿಂದ ಮಳೆ ಬರುತ್ತಿಲ್ಲ ಈ ಭಾಗದ ರೈತರು ಶಾಲಾ-ಸೂಲ ಮಾಡಿ ಶೇಂಗಾ ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದಾರೆ ಕ್ಷೇತ್ರದಲ್ಲಿ ಬರದ ಛಾಯೆ ಮೂಡಿದೆ ಅದರಿಂದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವರ್ಣನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಆದ್ದರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮೊಳಕಾಲ್ಮೂರು ಕ್ಷೇತ್ರದಾದ್ಯಂತ ವರ್ಣನ ಕೃಪೆ ತೋರಲಿ ಎಂದರು.
ಇದೇ ಸಂದರ್ಭದಲ್ಲಿ ಎನ್ ವೈ ಸುಜಯ್, ಚೇತನ್, ಎಸ್ ಟಿ ತಿಪ್ಪೇಸ್ವಾಮಿ, ಪಿ ಜಿ ಬೋರನಾಯಕ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಜಿ ಬಿ ಮುದಿಯಪ್ಪ, ಗುಂತ ಕೋಲಮ್ಮನಹಳ್ಳಿ ಮಲ್ಲಿಕಾರ್ಜುನ್, ವಕೀಲ ಮಲ್ಲೇಶ್, ಮಲ್ಲೂರಹಳ್ಳಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಬಿ ಕಾಟಯ್ಯ, ಕೆ ಟಿ ನಾಗರಾಜ್, ಗೌಡಗೆರೆ ಮಾಜಿ ಅಧ್ಯಕ್ಷ ಟಿ ರಂಗಪ್ಪ, ರಂಗಜ್ಜ, ತೊರೆಕೋಲಮ್ಮನಹಳ್ಳಿ ಆರ್ ಬಸವರಾಜ್, ಜೋಗಿಹಟ್ಟಿ ಎಚ್ ಬಿ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಮಲ್ಲಿಕಾರ್ಜುನ್, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ಡಾ. ಓಬನಾಯಕ, ಚೇರ್ಮನ್ ತಿಪ್ಪೇಸ್ವಾಮಿ, ಮಧು ಸೇರಿದಂತೆ ಮುಂತಾದವರು ಇದ್ದರು