ಸಾರ್ವಜನಿಕರ ಹಾಗೂ ರೈತರ ಕುಂದು ಕೊರತೆಗಳನ್ನು ಹವಾಲಿಸಲು ಚಳ್ಳಕೆರೆ ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಶಾಸಕ ಟಿ ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.
ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೂರಾರು ಮಹಿಳೆಯರು ಮಧ್ಯ ನಿಷೇಧ ಮಾಡುವಂತೆ ಒತ್ತಾಯ ಮಾಡಿದರು.
ಇನ್ನೂ ಗ್ರಾಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಹೊದಗಿಸುವಂತೆ ಸಾರ್ವಜನಿಕರ ಮನವಿ ಮಾಡಿದರು
ಈಗೇ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ನಿರ್ವಹಣಾಧಿಕಾರಿಯಾದ ಹೊನ್ನಯ್ಶ, ಪೊಲೀಸ್ ಉಪ ಅದೀಕ್ಷಕರಾದ ರಾಜಣ್ಣ, ಪಿಎಸ್ ಐ ಕೆ.ಸತೀಶ್ ನಾಯ್ಕ, ಬುಡ್ನಹಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಮಲತಾ, ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಮುಖಂಡರು, ಮತ್ತು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.