ಚಳ್ಳಕೆರೆ : ರಾತ್ರಿವೇಳೆ ಬಸ್ಸಿಗಾಗಿ ಸಾರಿಗೆ ನಿಲ್ದಾಣದಲ್ಲಿ ಕಾಯುತ್ತಿರುವ ಬಾದಿಹಳ್ಳಿ ಮಾರ್ಗದ ಪ್ರಯಾಣಿಕರು……
ಪ್ರತಿದಿನ ಬೆಳಿಗ್ಗೆ ಬಂದ ಬಸ್ಸು ಸಾಯಂಕಾಲ ಮರಳುವದಿಲ್ಲ, ಸಾಯಂಕಾಲ ಬರುವ ಬಸ್ಸು 2-3 ದಿನಗಳವರೆಗೆ ಬರುವದಿಲ್ಲ, ದಿನಂಪ್ರತಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ರಾತ್ರಿಯಲ್ಲಾ ಬಸ್ಸಿಗಸಗಿ ನಿಲ್ದಾಣದಲ್ಲಿ ಕಾಯುವಂತಾಗಿದೆ.
ರಾತ್ರಿವೇಳೆ ಬಸ್ಸಿಗಾಗಿ ಕಾಯುತ್ತಿರುವ ಮಹಿಳೆಯರು ಬಸ್ ಯಾವಾಗ ಬರುತ್ತೆ ಎಂದು ಹೇಳುವ ಅಧಿಕಾಯಿಲ್ಲ ಖಾಲಿ ಕುರ್ಚಿ ಮುಂದೆ ಮಹಿಳೆಯರು ಸಾರಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದುಹೌದು ಇದು ಚಳ್ಳಕೆರೆ ತಾಲೂಕಿನ ಸುಮಾರು , 40 ಕಿ.ಮೀ ದೂರದ ಆಂದ್ರಗಡಿ ಭಾಗಕ್ಕೆ ಹೊಂದೊಕೊAಡ ದೊಡ್ಡಬಾದಿಹಳ್ಳಿ. ಚಿಕ್ಕಬಾದಿಹಳ್ಳಿ. ಓಬಳಾಪುರು. ಜಾಜೂರು .ರೇಣುಕಾಪುರ ಮಾರ್ಗದ ಮೂಲಕ ಪ್ರತಿ ನಿತ್ಯ ಸಂಜೆ ಚಳ್ಳಕೆರೆ ನಗರದ ಸಾರಿಗೆ ಬಸ್ ನಿಲ್ದಾಣದಿಂದ ಸಾರಿಗೆ ಬಸ್ಸ್ ಹತ್ತಿದರೆ ರಾತ್ರಿ ಸುಮಾರು 10.30 ಕ್ಕೆ ಬಾದಿಹಳ್ಳಿಗೆ ತಲುಪುತ್ತದೆ ಮತ್ತೊಂದು ಸುಮಾರು_8.15 ಕ್ಕೆ ಬಿಡುವ ಸಾರಿಗೆ ಬಸ್ ಹತ್ತಿದರೆ ರಾತ್ರಿ 11 ಗಂಟೆಯಾಗುತ್ತದೆ ಪ್ರತಿ ನಿತ್ಯ ಬಾದಿಹಳ್ಳಿ ಮಾರ್ಗದಲ್ಲಿ ಸುಮಾರು 15 ರಿಂದ 20 ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರುತ್ತಾರೆ. ಪ್ರತಿ ಎರಡು ದಿನಕೊಮ್ಮೆ ಮೊದಲ ಸಾರಿಗೆ ಬಸ್ ಒಂದಲ್ಲಾ ಒಂದು ನೆಪ ಹೇಳಿಗೆ ಮಾರ್ಗಕ್ಕೆ ಬಸ್ ತಪ್ಪಿಸುತ್ತಾರೆ ಇದರಿಂದ ಬಾದಿಹಳ್ಳಿಯಿಂದ ಸುಮಾರು 70 ಕಿ
ಮೀ ದೂರದ ಚಿತ್ರದುರ್ಗ ನಗರದ ಕಾಲೇಜುಗೆ ಹೋಗುವ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಚಕ್ಕರ್ ಹೊಡೆಯ ಬೇಕಾಗುತ್ತದೆ. ಈ ದಿನ ಬುಧವಾರ ರಾತ್ರಿ 7 ಗಂಟೆಗೆ ಬಿಡುವ ಬಸ್ ಇಲ್ಲವಾದ್ದರಿಂದ ಸುಮಾರು 15 ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರು ಸಾರಿಗೆ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವಮನತಾಗಿದೆ.
ದೂರದ ಪ್ರಯಾಣವಾಗಿರುವುದರಿಂದ ಮೊದಲ ಅವಧಿಗೆ ಹೋಗುವ ಸಾರಿಗೆ ಬಸ್ಸನ್ಬು ತಪ್ಪಿಸದೆ ಸಂಚಾರಕ್ಕೆ ಬಿಡುವಂತೆ ವಿದ್ಯಾರ್ಥಿಗಳು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕರೆಮಾಡಿ ಕೇಳಿದರೆ ಚಾಲಕರಿಗೆ.ಆರೋಗ್ಯ ಸರಿಯಿಲ್ಲ. ಅವರ ಸಂಬAಧಿಕರು ಮೃತಪಟ್ಟಿದ್ದಾರೆ, ಬಸ್ಸುಗಳಿಲ್ಲ ಎಂಬ ಹಲವಾರು ನೆಪ ಹೇಳಿ ತಪ್ಪಿಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಪಾಲಿನ ಶತ್ರುಗಳಾಗಿದ್ದಾರೆ. ಇನ್ನಾದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿಕೊಂಡು ಬಸ್ಸ ತಡೆದು ಪ್ರತಿಭಟನೆ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ

About The Author

Namma Challakere Local News
error: Content is protected !!