ಚಳ್ಳಕೆರೆ: ಮಕ್ಕಳಿಗೆ ಸಂಬAಧಿಸಿದAತೆ ಕಠಿಣವಾದ ಕಾನೂನು ರೂಪಿಸಿದ್ದರು ಕೂಡ ಮಕ್ಕಳಿಗೆ ಸಿಗಬೇಕಾದ ಹಕ್ಕುಗಳು ಇಂದು ಸಿಗದೆ ಇರುವುದು ಶೋಚನೀಯ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿಎಸ್ ರೇಖಾ ಬೇಸರ ವ್ಯಕ್ತಪಡಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ವಕೀಲರ ಸಂಘ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪೋಸ್ಕೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ತಡೆ ಕಾಯ್ದೆ ಕುರಿತು ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಪ್ರತಿಯೊಬ್ಬ ತಂದೆ ತಾಯಿ, ಮಗುವನ್ನು ಮಗುವಿನ ರೀತಿಯಲ್ಲಿ ಕಾಣಬೇಕು ಮಗುವಿಗೆ ಸಿಗಬೇಕಾದ ಸ್ವಾತಂತ್ರ‍್ಯ ನೀಡಬೇಕಾಗಿರುವುದು ಪ್ರತಿಯೊಬ್ಬರ ಜವಾಬಾýರಿಯಾಗಿದೆ, ಬಾಲ್ಯದಲ್ಲಿ ಮಕ್ಕಳಿಗೆ ವಿವಾಹ ಮಾಡುವುದರಿಂದ ಹಲವು ಸಮಸ್ಯೆಗಳು ಆ ಮಗು ಎದುರಿಸಬೇಕಾಗುತ್ತದೆ ತನ್ನ ಜೀವನವನ್ನು ಕಟ್ಟಿಕೊಳ್ಳಲು ಕನಸು ಕಾಣುವ ವಯಸ್ಸಿನಲ್ಲಿ ಒಂದು ಮಗುವಿಗೆ ತಾಯಿಯಾದರೆ ಆ ಮಗುವಿಗೆ ಪೌಷ್ಟಿಕಾಂಶದ ಕೊರತೆಯಿಂದಾಗಿ ಜೀವನ ಭದ್ರತೆ ಇಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಫೋಸ್ಕೋ ಪ್ರಕರಣಗಳನ್ನು ತಡೆಗಟ್ಟಲು ಶಾಲೆಗಳಲ್ಲಿ ಶಿಕ್ಷಕರಿಗೆ ಮಕ್ಕಳ ಜೊತೆ ವರ್ತನೆಯ ಬಗ್ಗೆ ತರಬೇತಿ ನೀಡಿ ಮಕ್ಕಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದನ್ನು ತಿಳಿಯಪಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ, ಕಾರ್ಯದರ್ಶಿ ವಿಜಯ ಮಾತನಾಡಿ ಚಿತ್ರದುರ್ಗ ಜಿಲ್ಲೆ, ಬಾಲ್ಯ ವಿವಾಹ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದ್ದು ಏಪ್ರಿಲ್ ನಿಂದ ಆಗಸ್ಟ್ ಮಾಹೆಯವರೆಗೆ 157 ಪ್ರಕರಣಗಳು ದಾಖಲಾಗಿದ್ದು ಇಂತಹ ಪ್ರಕರಣಗಳು ಹೆಚ್ಚಾಗಲು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ತಿಳುವಳಿಕೆ ಮೂಡಿಸಬೇಕಾದ ಅಧಿಕಾರಿಗಳು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇಂತಹ ಪ್ರಕರಣಗಳ ಬಗ್ಗೆ ಗಮನ ಹರಿಸಲೇಬೇಕಾದ ಅನಿವಾರ್ಯತೆ ಉಂಟಾಗಿ ತಮ್ಮ ವೃತ್ತಿ ಬದುಕಿಗೆ ಧಕ್ಕೆ ಬರಬಹುದು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರೇಷ್ಮಾ ಕಲಕಪ್ಪ ಗೋಣಿ, ಗಾಯತ್ರಿ ಎಸ್ ಕಾಟೆ, ಡಿವೈಎಸ್ಪಿ ಟಿಪಿ.ರಾಜಣ್ಣ, ಡಿಎಚ್ಓ.ರಂಗನಾಥ್, ತಾಪಂ.ಇಓ ಹೊನ್ನಯ್ಯ, ಸಹಾಯಕ ಅಧಿಕಾರಿ ಸಂತೋಷ್ ಕುಮಾರ್, ಸಿ ಡಿ ಪಿ ಓ ಹರಿಪ್ರಸಾದ್, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು