ಗೌರಸಮುದ್ರ ಮಾರಮ್ಮದೇವಿ
ಹುಂಡಿ ಹಣ ಏಣಿಕೆ : ಒಟ್ಟು 9,52,895 ರೂ.

ಚಳ್ಳಕೆರೆ : ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಸೆ.18ರಂದು ಪ್ರಾರಂಭವಾಗಲಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ದೇವಸ್ಥಾನದ ಹುಂಡಿ ಹಣ ಏಣಿಕೆ ಕಾರ್ಯ ಭರದಿಂದ ನಡೆಯಿತು.
ಇದೇ ಸೆ.18 ರಿಂದ 21ರವರೆಗೆ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ನಡೆಯಲಿದ್ದು, ಇಂದು ಗೌರಸಮುದ್ರ ಮಾರಮ್ಮದೇವಿಯ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಗೌರಸಮುದ್ರ ಮಾರಮ್ಮದೇವಿಯ ಹುಂಡಿಯಲ್ಲಿ ಒಟ್ಟು 8,91,680 ನೋಟು, 61,215 ಚಿಲ್ಲರೆ ಒಟ್ಟು 9,52,895 ರೂ. ಗಳು ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.
ತಹಸೀಲ್ದಾರ್ ರೇಹಾನ್ ಪಾಷ, ಗ್ರಾ.ಪಂ. ಅಧ್ಯಕ್ಷ ಓಬಣ್ಣ, ಸದಸ್ಯರಾದ ಶಶಿಕುಮಾರ್, ಮಲ್ಲಯ್ಯ, ತಿಮ್ಮಾರೆಡ್ಡಿ, ಸಂಜಯ್‌ಗೌಡ, ಗುರುಸ್ವಾಮಿ, ಜಯಮ್ಮ, ತುಳಸಿ, ಸುಭಾಷಿಣಿ, ಆರ್ಚಕ, ಪಿ.ಆರ್.ನಿಂಗಣ್ಣ, ರುದ್ರಣ್ಣ, ಪಿಡಿಒ ಹನುಮಂತರಾಜು, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕಾಧಿಕಾರಿ ನರೇಂದ್ರ ಬಾಬು ಉಪಸ್ಥಿತರಿದ್ದರು.

Namma Challakere Local News
error: Content is protected !!