ನಾಯಕನಹಟ್ಟಿ: ಮಕ್ಕಳ ಪ್ರತಿಬಿಂಬ ಗುರುತಿಸಿ ಅದನ್ನು ಪೋಷಣೆ ಮಾಡಿ ಹೆಮ್ಮರವಾಗಿ ಬೆಳೆಯಲು ಪ್ರತಿಯೊಬ್ಬ ಶಿಕ್ಷಕರ ಪಾತ್ರ ಮಹತ್ವವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಹೇಳಿದ್ದಾರೆ.
ಸಮೀಪದ ನೇರಲಗುಂಟೆ ಕ್ಲಸ್ಟರ್ ಮಟ್ಟದ ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ/ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಚಳ್ಳಕೆರೆ ತಾಲ್ಲೂಕಿನ ಈ ಬಾರಿ ಎಲ್ಲಾ ಕ್ಲಸ್ಟರ್ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿವೆ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಣೆ ಮಾಡಿ ಹೆಮ್ಮರವಾಗಿ ಬೆಳೆಯಲು ಬೇಕಾಗುವಂತಹ ಬೀಜ ಸ್ವರೂಪದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ/ ಕಲೋತ್ಸವ ಕಾರ್ಯಕ್ರಮ ಇದೊಂದು ಮಕ್ಕಳಿಗೆ ಅದ್ಭುತವಾದ ವೇದಿಕೆ ಯಾಗಿದ್ದು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲಿಕ್ಕೆ ಆಗಮಿಸಿದ್ದಾರೆ ಈ ಸ್ಪರ್ಧೆಯನ್ನು ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಬಹಳ ವ್ಯವಸ್ಥಿತವಾಗಿ ಆಯೋಜಿಸಿದ್ದಾರೆ ಶಾಲೆಯ ಎಲ್ಲಾ ಆಯೋಜಿಕರಿಗೆ ಇಲಾಖೆ ಪರವಾಗಿ ಅಭಿನಂದನೆ ತಿಳಿಸಿದರು….

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಗೋಪಾಲ ನಾಯಕ, ಸದಸ್ಯ ಪಾಪಣ್ಣ, ಇಸಿಓ ಈರಸ್ವಾಮಿ, ಎನ್ ಮಹದೇವಪುರ ಸಿ ಆರ್ ಪಿ ಹನುಮಂತಪ್ಪ, ಇಸಿಓ ತಿಪ್ಪೇಸ್ವಾಮಿ, ಇಸಿಓ ರವಿಶಂಕರ್, ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್ ಸತ್ಯ ನಾರಾಯಣ್, ನೇರಲಗುಂಟೆ ಸಿ ಆರ್ ಪಿ ರಮೇಶ್ ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನಮ್ಮ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಂದ್ರಣ್ಣ, ಕಾರ್ತಿಕೇನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಪ್ರಶಸ್ತಿ ಪತ್ರ ದಾನಿಗಳಾದ ನಲಗೇತನಹಟ್ಟಿ ಎ.ಎಂ ಬೋರಯ್ಯ, ಶಿಕ್ಷಕರಾದ ಮಂಜುನಾಥ್, ಶ್ರೀನಿವಾಸ್, ಈರಣ್ಣ, ಸೇರಿದಂತೆ ನೇರಲಗುಂಟೆ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮುಂತಾದವರು ಇದ್ದರು…

Namma Challakere Local News
error: Content is protected !!