ತಾಲೂಕಿನ ನಗರಂಗೆರೆ ನಿವಾಸಿ,ಸಹೃದಯವಂತ ಕವಿ ನಗರಂಗೆರೆ ಶ್ರೀನಿವಾಸ(47) ಆರೋಗ್ಯ ಸಮಸ್ಯೆಯಿಂದ ಮಂಗಳವಾರ ನಿಧನರಾಗಿದ್ದಾರೆ. ಪತ್ನಿ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಬುಧವಾರ ಗ್ರಾಮದ ಕುಟುಂಬದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿಯಲಾಗಿದೆ. ಶ್ರೀನಿವಾಸ್ ಸದಾ ಸಾಹಿತ್ಯಸಾಂಸ್ಕೃತಿಕ ಸಂಘಟನೆಯಲ್ಲಿ ಸಮಾಜಮುಖಿಯಾಗಿ ಸಮಾಜಕ್ಕೆ ಪರಿಚಯ ಇದ್ದವರು. ಗ್ರಾಮೀಣ ಭಾಗದ ರಂಗಭೂಮಿ ಮತ್ತು ಅಸಂಘಟಿತ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಿದ ಕೆಲಸ ಮಾಡಿದವರು. ಸಾಹಿತ್ಯ ಚಿಂತನೆಯಲ್ಲಿ ‘ ನಾಳೆಯ ನಿರೀಕ್ಷೆಯಲ್ಲಿ’ ಎನ್ನುವ ಕವನ ಸಂಕಲನ ಪ್ರಕಟಿಸಿದವರು. ಇವರ ಸಾಮಾಜಿಕ ಸೇವಾ ಕಾರ್ಯ ಗುರುತಿಸಿ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.