ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಕಾಲೇಜಿನ ಕ್ರೀಡಾಪಟುಗಳಿಗೆ ಸನ್ಮಾನ
ಯುವಜನತೆಯ ಮನೋವಿಕಾಸಕ್ಕೆ ಕ್ರೀಡೆ ಸಹಕಾರಿ
ಚಳ್ಳಕೆರೆ : ಯುವಜನತೆಯ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗಲಿದೆ ಎಂದು ಪ್ರಾಚಾರ್ಯ ಆರ್.ರಂಗಪ್ಪ ಹೇಳಿದರು.
ನಗರದ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಮಂಗಳವಾರ ದೈಹಿಕಶಿಕ್ಷಣ ವಿಭಾಗದಿಂದ ಹಮ್ಮಿಕೊಂಡಿದ್ದ ರಾಷ್ಟೀಯ ಕ್ರೀಡಾ ದಿನದ ಪ್ರಯುಕ್ತ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಹಾಕಿಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಸ್ಮರಣಾರ್ಥವಾಗಿ ಅವರ ಜನ್ಮದಿನವನ್ನು ರಾಷ್ಟಿçÃಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಅವರು ಹಾಕಿ ಕ್ರೀಡೆಗೆ ಸಲ್ಲಿಸಿದ ಜೀವಮಾನ ಸಾಧನೆಯು ಮತ್ತಾö್ಯವ ಕ್ರೀಡಾಪಟುವು ಸಹ ಸಾಧಿಸಲು ಸಾಧ್ಯವಾಗಿಲ್ಲ. ಅಂತಹ ಸಾಧನೆಯನ್ನು ನಮ್ಮ ಕಾಲೇಜಿನ ಎಲ್ಲ ಕ್ರೀಡಾಪಟುಗಳು ಸಾಧಿಸಬೇಕು. ಅದಕ್ಕಾಗಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗವಿದೆ. ಸುಜ್ಜಿತವಾದ ಕ್ರೀಡಾಸಲಕರಣೆಗಳು, ವಿಶಾಲವಾದ ಆವರಣ, ಆಟದ ಮೈದಾನವಿದೆ. ಹಾಗೇ ಕಾಲೇಜಿನಲ್ಲಿ ಎನ್‌ಸಿಸಿ ವಿಭಾಗವಿದ್ದು, ಅದರಲ್ಲೂ ಸಹ ಸಾಕಷ್ಟು ವಿದ್ಯಾರ್ಥಿಗಳು ಪಾಲ್ಗೋಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ದೈಹಿಕವಾಗಿ ಮಾನಸಿಕವಾಗಿ ಮತ್ತು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಲು ಸಾಧ್ಯವಾಗುತ್ತದೆ. ಇದರಿಂದ ಶೈಕ್ಷಣಿಕ ಚಟುವಟಕೆಗಳಿಗೆ ಉತ್ತೇಜನಕ್ಕೆ ದೊರೆಯುತ್ತದೆ. ಹಾಗಾಗಿ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ದೈಹಿಕಶಿಕ್ಷಣ ನಿರ್ದೇಶಕ ಎಸ್.ತಿಪ್ಪೇಸ್ವಾಮಿ, “ಮೇಜರ್ ಧ್ಯಾನ್‌ಚಂದ್ ಅವರು ದೇಶಕಂಡ ಅಪ್ರತಿಮ ಹಾಕಿ ಕ್ರೀಡಾಪಟುವಾಗಿದ್ದಾರೆ. ಜತೆಗೆ ರಾಷ್ಟçಪ್ರೇಮವನ್ನು ಬೆಳೆಸಿದ ಅಪ್ಪಟ ದೇಶಭಕ್ತರಾಗಿದ್ದಾರೆ. ಕ್ರೀಡಾಪಟುವಾಗಿ ಮೂರು ಒಲಂಪಿಕ್ಸ್ನಲ್ಲಿ ಭಾಗವಹಿಸಿ ಬಂಗಾರ ಪದಕಗಳಿಸಿದರು. ಇವರು ಸುಮಾರು 185 ಪಂಧ್ಯಗಳಿAದ 570 ಗೋಲ್‌ಗಳನ್ನು ಹೊಡೆಯುವ ಮೂಲಕ ವಿಶ್ವದ ಪ್ರಥಮ ಹಾಕಿ ಕ್ರೀಡಾಪಟುವಾಗಿದ್ದಾರೆ. ಇಂತರಹ ಮಹಾನ್ ವ್ಯಕ್ತಿಯನ್ನು ಸ್ಮರತಿಸುವ ಮೂಲಕ ಅವರ ಕ್ರೀಡಾ ಸಾಧನೆಯನ್ನು ಕ್ರೀಡಾಪಟುಗಳು ಅಳವಡಿಸಿಕೊಳ್ಳಬೇಕು” ಎಂದರು.
ಇದೇವೇಳೆ ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಿ ಸಾಧನಗೈದ ಕಾಲೇಜಿನ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕರಾದ ಬಿ.ಯು.ನರಸಿಂಹಮೂರ್ತಿ, ರಂಗಸ್ವಾಮಿ, ಬಣಕಾರ್, ರಘುನಾಥ್, ಮಹಮ್ಮದ್‌ಸತ್ತಾರ್, ಕೆ.ಚಿತ್ತಯ್ಯ, ಜಗನ್ನಾಥ್, ಸತೀಶ್, ಮುರುಳಿ, ಗ್ರಂಥಪಾಲಕ ಪಾಪಣ್ಣ, ಅಧಿಕ್ಷಕ ವಿ.ವಿನೇಶ್ ಇದ್ದರು.

Namma Challakere Local News
error: Content is protected !!