ಚಿತ್ರದುರ್ಗ, ಆ. 25 – ಪ್ರಸ್ತುತ ದಿನಗಳಲ್ಲಿ ಮಾನವೀಯತೆ ಕಳೆದುಕೊಂಡು ದಾನವನಾಗಿರುವ ಮಾನವ ಜಗತ್ತನ್ನು ಕರುಣೆ ಎನ್ನುವ ಕನ್ನಡಕವನ್ನು ಧರಿಸಿ ನೋಡಬೇಕಿದೆ. ಹಣವಂತನಾಗುವುದಕ್ಕಿAತ ಗುಣವಂತನಾಗಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಅಭಿಪ್ರಾಯಿಸಿದರು.
ನಗರದ ಪಿಳ್ಳೆಕೇರನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸಂಜೆ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಸಮಾರಂಭದ ನೇತೃತ್ವ ವಹಿಸಿ, ಕಾರುಣ್ಯ ದೃಷ್ಟಿ ವಿಷಯ ಕುರಿತು ಮಾತನಾಡಿದ ಶ್ರೀಗಳು, ಕರುಣಾಮಯಿಗಳ ಹೃದಯದಲ್ಲಿ ದೇವರಿದ್ದಾನೆ. ನಾವು ಮಾತೃಹೃದಯಿಗಳಾಗಬೇಕು. ಕ್ರೌರ್ಯದಿಂದ ದೇಶ ನಾಶವಾಗುತ್ತದೆ. ಸ್ವಾರ್ಥದ ಗುಣದಿಂದ ಮಾನವೀಯತೆ ಕಳೆದುಕೊಂಡಿz್ದೆÃವೆ ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಜಿ.ವಿ. ರಾಜಣ್ಣ ಮಾತನಾಡಿ, ದೃಷ್ಟಿ ಅಂದರೆ ಒಳಗಣ್ಣು. ಕಾರುಣ್ಯವೆಂದರೆ ಪ್ರೀತಿ, ಮಮಕಾರ. ಅದೊಂದು ಭಕ್ತಿ. ಪ್ರಾಚೀನ ಕಾಲ, ಮಧ್ಯಕಾಲೀನ ಮತ್ತು ಆಧುನಿಕ ಯುಗದ ಕಾರುಣ್ಯ ದೃಷ್ಟಿಯನ್ನು ಸೂಕ್ಷö್ಮವಾಗಿ ಅವಲೋಕಿಸಬೇಕಿದೆ. ವೈದಿಕ ಸಂಸ್ಕೃತಿಯ ಕಾರುಣ್ಯದೃಷ್ಟಿ ಬೇರೆ. ಅದೇ ರೀತಿ ವಚನಕಾರರ ಸಂದರ್ಭದಲ್ಲಿ ಬಂದ ಕಾರುಣ್ಯದೃಷ್ಟಿ ವಿಸ್ತೃತ ರೂಪ ಪಡೆದುಕೊಂಡಿತು. ಹಾಗಾಗಿ ಬಸವಣ್ಣನವರನ್ನು ಕಾರುಣ್ಯದ ಮೂರ್ತಿ ಎಂದು ಕರೆಯುತ್ತೇವೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ ಬಸವಣ್ಣನವರಲ್ಲಿ ಕಾರುಣ್ಯದ ದೃಷ್ಟಿ ಇತ್ತು. ಅವರಿಗೆ ಮುಕ್ತಿ ಸಿಗುವ ಕೆಲಸ ಮಾಡಿದರು. ಭಕ್ತಿ, ಆಧ್ಯಾತ್ಮ, ಪರಮಾರ್ಥ ಮೊದಲಾದುವನ್ನು ಕಾರುಣ್ಯದ ನೆಲೆಯಲ್ಲಿ ವಚನಕಾರರು ಅರ್ಥೈಸಿದ್ದಾರೆ ಎಂದು ಹೇಳಿದರು.
ಚಂದ್ರಹಾಸ ಹುಬ್ಬಳ್ಳಿ ಮಾತನಾಡಿ, ಮಾನಸಿಕ ಒತ್ತಡ ದೇಶಕ್ಕೆ ಅಂಟಿಕೊAಡಿರುವ ಒಂದು ರೋಗ. ಅವರವರ ವಯಸ್ಸಿಗೆ ತಕ್ಕ ಒತ್ತಡಗಳು ಇವೆ. ನಮಗೆ ಎಲ್ಲವೂ ಬೇಗ ಆಗಬೇಕು ಎಂಬ ಅವಸರದ ಜೀವನ. ಇಂದಿನ ಮಾನಸಿಕ ಒತ್ತಡಗಳು ಆತ್ಮಹತ್ಯೆಯ ಹಂತ ತಲುಪುತ್ತಿವೆ. ದೊಡ್ಡ ದೊಡ್ಡ ಹುದ್ದೆಯಲ್ಲಿರುವ ನೌಕರರು, ವಿದ್ಯಾರ್ಥಿಗಳು, ಉದ್ಯಮಿಗಳು ಎಲ್ಲರೂ ಇದಕ್ಕೆ ಹೊರತಲ್ಲ. ಇಂಥ ಕಸಿವಿಸಿಗೊಂಡ ಮನಸ್ಸಿಗೆ ಮನರಂಜನೆ ಅತಿಮುಖ್ಯ. ಆಡಂಬರದ ಜೀವನಕ್ಕಿಂತ ಸರಳ ಜೀವನ ನೆಮ್ಮದಿಯನ್ನು ನೀಡುತ್ತದೆ ಎಂದು ತಿಳಿಸಿದರು.
ಆರ್. ಶೇಷಣ್ಣಕುಮಾರ್ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪದಗಳಲ್ಲಿ ಕಾರುಣ್ಯವೂ ಒಂದು. ಸ್ಥಿತಿವಂತರು ಇಲ್ಲದವರಿಗೆ ಕರುಣೆ ತೋರಿಸಬೇಕಿದೆ ಎಂದರು.
ಶ್ರೀಮತಿ ಜಯಲಕ್ಷಿö್ಮ, ವಕೀಲರಾದ ಎನ್.ಬಿ. ವಿಶ್ವನಾಥ್, ಶ್ರೀ ಬೃಹನ್ಮಠ ಸಂ.ಪ.ಪೂ. ಕಾಲೇಜಿನ ಪ್ರಾಚಾರ್ಯ ಎಸ್.ಷಡಾಕ್ಷರಯ್ಯ, ಕಾರ್ಯಕ್ರಮ ಆಯೋಜಕ ಕೆ.ಎಂ. ವೀರೇಶ್ ಮಾತನಾಡಿದರು.
ಗಾನಯೋಗಿ ಸಂಗೀತ ಬಳಗ, ಚಿತ್ರದುರ್ಗ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ನಡೆಸಿಕೊಟ್ಟರು.
ಶಿವಕುಮಾರ್ ಸ್ವಾಗತಿಸಿದರು. ಪದ್ಮಶ್ರೀ ನಿರೂಪಿಸಿದರು.

About The Author

Namma Challakere Local News
error: Content is protected !!