ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಸೆ.19ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾತ್ರೆ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಡನ್.ವೈ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತ್ರೆಗೆ ಬರುವ ಭಕ್ತರಿಗೆ ಬೀದಿ ದೀಪ.ಕುಡಿಯುವ ನೀರು. ಸ್ವಚ್ಚತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಾತ್ರೆಯಶಸ್ವಿಯಾಗುವಂತೆ ಅಧಿಕಾರಿಗಳು ಅಗತ್ಯ ಮುಂಜಾಗೃತ ಕ್ರಮ ಕೈಕೊಳ್ಳುವಂತೆ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ತಾಕೀತು ಮಾಡಿದರು.
ಹಣ ಜಾತ್ರೆಗಳಲ್ಲಿ ಭಕ್ತರು ಹುಂಡಿಗೆ ಹಾಕುವ ದುಡ್ಡಿನಲ್ಲಿ ಶೇ.50ರಷ್ಟು ಆದರೂ ಆ ದೇವಾಲಯಗಳ ಅಭಿವೃದ್ಧಿಗೆ ಹಣ ಬಳಸಬೇಕು. ಇನ್ನು ಮುಜರಾಯಿ ಇಲಾಖೆಯವರು ಗಂಟುಕಟ್ಟಿಕೊAಡು ಹೋಗಲೆದಂದು ಭಕ್ತರು ಹಾಕುವುದಿಲ್ಲ, ಹಾಗಾಗಿ ಯಾತ್ರಿ ನಿವಾಸ, ಶೌಚಾಲಯ ಹೀಗೆ ದೇವಾಲಯಗಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಎಂದು ಕಂದಾಯ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಮತ್ತು ತಹಸೀಲ್ದಾರ್ ರೇಹಾನ್ ಪಾಷಾಗೆ ಸೂಚಿಸಿದರು.
ದೇವಿಯ 24 ಲಕ್ಷ ಹುಂಡಿಯ ಗಂಗಾಧರಪ್ಪ ಮಾತನಾಡಿ, ಗೌರಸಮುದ್ರ ಹಣ ವರ್ಷಕ್ಕೆ 22ರಿಂದ ಸಂಗ್ರಹವಾಗುತ್ತಿದ್ದು, 25 ಲಕ್ಷ ದಾಟುವಂತೆ ಮಾಡಿದಲ್ಲಿ ಎ-ಗ್ರೇಡ್‌ಗೆ ಸೇರ್ಪಡೆಯಾಗುವುದು. ಈ ಬಗ್ಗೆ ಇಲಾಖೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ರೇಹಾನ್ ಪಾಷಾ ಮಾತನಾಡಿ, ಜಾತ್ರೆ ನಡೆಯುವ ಸ್ಥಳದಲ್ಲಿ ಅಂಗಡಿಗಳ ಹರಾಜು ಮಾಡಬೇಕು ಎಂಬ ಪ್ರಸ್ತಾಪಕ್ಕೆ ಗ್ರಾಪಂ ಅಧ್ಯಕ್ಷ ಓಬಯ್ಯ ಪ್ರತಿಕ್ರಿಯಿಸಿ, ಎತ್ತಿನ ಬಂಡಿಗಳು ಬಿಟ್ಟು ಅಂಗಡಿಗಳಿಗೆ ಹರಾಜು ಮಾಡಬೇಕು ಎಂದಾಗ ಪಿಡಿಒ ಕಳೆದ ವರ್ಷ ಹರಾಜು ಹಾಕಿಲ್ಲ ಎಂದು ತಿಳಿಸಿದರು.

ಗ್ರಾಪಂ ಸದಸ್ಯೆ ಶುಭಾಷಿಣಿ ಮಾತನಾಡಿ, ಗೌರಸಮುದ್ರ ಜಾತ್ರೆ ನಡೆಯುವ ತಮಲಿನಲ್ಲಿ ವಸತಿ ಮತ್ತು ಶೌಚಾಲಯಗಳಿಲ್ಲದೆ ಶುಕ್ರವಾರ ಮತ್ತು ಮಂಗಳವಾರ ಬರುವ ಮಹಿಳಾ ಭಕ್ತರು ಸೀರೆ ಕಟ್ಟಿಕೊಂಡು ಬಟ್ಟೆ ಬದಲಾಯಿಸಬೇಕಿದೆ.ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಶಶಿಕುಮಾರ್ ಮಾತನಾಡಿ, ಮುಜರಾಯಿ ಇಲಾಖೆಗೆ ದೇವಿಯ ದುಡ್ಡು ಬೇಕೇ ಹೊರತು ಯಾತ್ರಿ ನಿವಾಸವಾಗಲಿ, ಶೌಚಾಲಯವಾಗಲಿ ಕಟ್ಟಿಸುತ್ತಿಲ್ಲ, ತಾತ್ಕಾಲಿಕ ಶೌಚಾಲಯಗಳು ಜಾತ್ರೆಯಲ್ಲಿ ನಿರ್ಮಾಣ ಮಾಡುವುದು ಬೇಡ ಶಾಶ್ವತವಾಗಿ ಕಟ್ಟಬೇಕು ಎಂದು ಆಗ್ರಹಿಸಿದರು.
ವಕೀಲ ಚಂದ್ರಪ್ಪ ಮಾತನಾಡಿ, ಕೊಳವೆ ಬಾವಿ ಹಾಕಿ ಟ್ಯಾಂಕ್ ನೀರು ಕಲ್ಪಿಸಬೇಕು ಎಂದರೆ, ಸದಸ್ಯ ಪೂಜಾರಿ ಓಬಯ್ಯ ಮಾತನಾಡಿ, 40 ಟ್ಯಾಂಕರ್ ಕಳಿಸುತ್ತೇವೆ ಎನ್ನುತ್ತಾರೆ ಜಾತ್ರೆಯಲ್ಲಿ 10 ಟ್ಯಾಂಕರ್‌ಗಳು ಇರುವುದಿಲ್ಲ ಎಂದಾಗ ಗ್ರಾಮೀಣ ಕುಡಿವ ನೀರಿನ ಇಲಾಖೆ ಎಂಜಿನಿಯರ್ ಮೋಹನ್ ಉತ್ತರಿಸಿ ನಮ್ಮ ಇಲಾಖೆಯಿಂದ 10 ಟ್ಯಾಂಕರ್ ಕಳಿಸುತ್ತೇವೆ. ಇನ್ನು ಬೇರೆ ಇಲಾಖೆಯಿಂದ ವ್ಯವಸ್ಥೆ ಮಾಡಲಾಗುವುದು ಮತ್ತು ಕೊಳವೆ ಬಾವಿ ಕೊರೆಸಲಾಗುವುದು ಎಂದರು.

ಶಾಸಕರು ಮಾತನಾಡಿ, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಕುಡಿವ ನೀರಿನ ತೊಂದರೆಯಾಗಬಾರದು. ಇನ್ನು ಸ್ವಚ್ಛತೆ ಮತ್ತು ಕುಡಿವನೀರಿನಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ಕವಾಡಿಗರಹಟ್ಟಿಯಲ್ಲಿ ಆದಂತೆ ಆಗುವುದು ಎಂದು ಎಚ್ಚರಿಸಿದರು. ಮಾತನಾಡಿದರು. ಜಾತ್ರೆಗೆ ಬರುವ ಭಕ್ತಾಧಿಗಳು ಹಾಗೂ ಸಾರ್ವಜನಿಕರಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ಒದಗಿಸುತ್ತಾರೆ ಎಂಬ ಭಾವನೆಯಿಂದ ಜಾತ್ರೆಗೆ ಆಗಮಿಸುತ್ತಾರೆ. ದೇವಿಯ ದರ್ಶನ ಪಡೆಯಲು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ಪೂರ್ಣಪ್ರಮಾಣದಲ್ಲಿ ಆಗಬೇಕು. ಆ ಭಾಗದಲ್ಲಿ ಮಳೆ ಪ್ರಮಾಣ ಈಗಾಗಲೇ ಕಡಿಮೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿಗೆ. ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ಅಕ್ಕಪಕ್ಕದ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಕೇಂದ್ರದಿAದ ಕುಡಿಯುವ ನೀರಿನ ಟ್ಯಾಂಕರನ್ನು ಒದಗಿಸಬೇಕು, ಜಾತ್ರೆ ನಡೆಯುವ ಸ್ಥಳದಲ್ಲೇ ಹೆಚ್ಚುವರಿಯಾಗಿ ನೂತನ ಬೋರ್‌ವೆಲ್ ಕೊರೆಸಿ ನೀರು ಒದಗಿಸಬೇಕು, ಗ್ರಾಮ ಪಂಚಾಯಿತಿ ಆಡಳಿತ ನೈರ್ಮಲ್ಯ ಶುದ್ದೀಕರಣ ಕಾರ್ಯವನ್ನು ನಿರ್ವಹಿಸಬೇಕು. ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನೀರಿನ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳ ದುರಸ್ಥಿ ಮಾಡಬೇಕು. ಗ್ರಾಮದ ಪ್ರತಿಯೊಂದು ರಸ್ತೆಗೂ ವಿದ್ಯುತ್ ದೀಪ ಅಳವಡಿಸಬೇಕು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ನೀಡುವ ಜೊತೆಗೆ, ಕಳ್ಳಕಾರರ ಮೇಲೆ ನಿಗಾವಹಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಮಾತನಾಡಿ, ಈಗಾಗಲೇ ತಾಲ್ಲೂಕು ಆಡಳಿತ ಜಾತ್ರೆಯ ಪೂರ್ವಸಿದ್ದತೆಗಳ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಾತ್ರೆಯಲ್ಲಿ ಪ್ರಾಣ ಬಲಿ ನಿಷೇದಿಸಿದೆ, ಭಕ್ತರು ಯಾರೂ ಸಹ ಪ್ರಾಣಿ ಬಲಿಗೆ ಪ್ರಯತ್ನ ನಡೆಸಬಾರದು. ಭಕ್ತಾಧಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಪೂರೈಸಲು ಈಗಾಗಲೇ ಸಂಬAಧಪಟ್ಟ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಡಿವೈಎಸ್‌ಪಿ ರಾಜಣ್ಣ ಮಾತನಾಡಿ, ಪೊಲೀಸ್ ಇಲಾಖೆ ಶಾಂತಿಯುತ ಜಾತ್ರೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ, ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಳಕು ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ಮತ್ತು ಸಿಬ್ಬಂದಿ ವರ್ಗ ಸಂಚಾರ ವ್ಯವಸ್ಥೆಯೂ ಸೇರಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವರು ಎಂದರು.
ಪೂರ್ವಬಾವಿ ಸಭೆಯಲ್ಲಿ ತಹಶೀಲ್ದಾರ್ ರೇಹಾನ್‌ಪಾಷ, ಎಇಇ ಕಾವ್ಯ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಬಿಸಿಎಂ ಅಧಿಕಾರಿ ದಿವಾಕರ, ಲೋಕೋಪಯೋಗಿ ಅಧಿಕಾರಿ ವಿಜಯಬಾಸ್ಕರ್, ಪ್ರಭಾರ ಇಒ ಸಂತೋಷ್, ಬಿಇಒ ಕೆ.ಎಸ್.ಸುರೇಶ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಪ್ರಭು, ಗ್ರಾಮ ಪಂಚಾಯಿತಿ ಸದಸ್ಯರಾದ ಈರಣ್ಣ, ಭಾಗ್ಯಮ್ಮ, ತಿಮ್ಮಾರೆಡ್ಡಿ, ಜಯಮ್ಮ, ಮಲ್ಲಯ್ಯ, ಮುಖಂಡರಾದ ಗುರುಸ್ವಾಮಿ, ಜಯಣ್ಣ, ಗಂಗಾಧರ,ಬಾಬು, ಆರ್ಚಕ ಟಿ.ಆರ್.ನಿಂಗಣ್ಣ ಇತರರಿದ್ದರು

About The Author

Namma Challakere Local News
error: Content is protected !!