ಚಳ್ಳಕೆರೆ: ಸಾಮಾಜದಲ್ಲಿ‌ ಇರುವ ಮಹನೀಯರನ್ನು‌ ನೆನೆಯುವ ಮೂಲಕ ಅವರನ್ನು ಪೂಜ್ಯಭಾವನೆಯೊಂದಿಗೆ ಕಾಣುವ ಮೂಲಕ ಸರಕಾರ ಆದ್ಯತೆಯ ಮೇರೆಗೆ ಸರಕಾರಿ ಕಛೇರಿಗಳಲ್ಲಿ ಮಹಾನೀಯ ಭಾವಚಿತ್ರ ಅಳವಡಿಸಲಾಗಿದೆ

ಆದರೆ ಸ್ಥಳಿಯ ರಾಜಕೀಯದಿಂದ ಮಹಾನೀಯರ ಭಾವಚಿತ್ರ ತೆಗೆದು‌ ಮೂಲೆ ಗುಂಪು ಮಾಡುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ತಾಲೂಕು ಆರ್ಯ ಈಡಿಗರ ಸಂಗದಿಂದ ತಾಲೂಕು ಕಛೇರಿಯಲ್ಲಿ ತಹಶಿಲ್ದಾರ ರೇಹಾನ್ ಪಾಷರವರಿಗೆ ಸಮುದಾಯದಿಂದ ಮನವಿ ಸಲ್ಲಿಸಿದರು.

ತಾಲೂಕಿನ ಗೌರಸಮುದ್ರ ಗ್ರಾಪಂ ಕಾರ್ಯಾಲಯದಲ್ಲಿದ್ದ ದಾರ್ಶನಿಕ ನಾರಾಯಣಗುರು ಭಾವಚಿತ್ರವನ್ನು ಏಕಾಏಕಿ ತೆಗೆದಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ತಾಲೂಕು ಆರ್ಯ ಈಡಿಗರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಸಮಾಜ ಸುಧಾರಕರಿಗೆ ಸಮಾಜದಲ್ಲಿ ಗೌರವದಿಂದ ಕಾಣಬೇಕಿದೆ. ಸರ್ಕಾರಿ ಕಾರ್ಯಾಲಯಗಳಲ್ಲಿ ನಿಯಮ ಪಾಲನೆ ಆಗಬೇಕು.

ಪಂಚಾಯಿತಿ ಕಾರ್ಯಾಲಯದಲ್ಲಿ ನಾರಾಯಣಗುರು ಭಾವಚಿತ್ರವನ್ನು ಇರಿಸುವಂತೆ ತಾಲೂಕು ಆಡಳಿತ ಗ್ರಾಪಂಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಸಿ.ಒ.ರವಿಕುಮಾರ್, ಮುಖಂಡರಾದ ವೆಂಕಟೇಶ್, ಕೆ.ಜೆ.ಅಶೋಕ್‌ಕುಮಾರ್, ನೇತಾಜಿ ಪ್ರಸನ್ನ, ದೊಡ್ಡರಂಗಪ್ಪ, ಉಮೇಶ್, ಜಗದೀಶ್, ಬೇಕರಿ ವಿಜಯ್, ಮಧು, ಜಿ.ಎಚ್.ಪ್ರಕಾಶ್ ಇತರರಿದ್ದರು.

About The Author

Namma Challakere Local News
error: Content is protected !!