ಚಿತ್ರದುರ್ಗ ಜಿಲ್ಲೆ ಹಿರಿಯೂರು. ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್ ವಿಮಾನ ರವಿವಾರ ಬೆಳಗ್ಗೆ ಪತನಗೊಂಡಿರುವುದು
ವರದಿಯಾಗಿದೆ
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಕುದಾಪುರ ವಾಯುನೆಲೆಯಿಂದ ರವಿವಾರ ಬೆಳಗ್ಗೆ ಹಾರಾಟ ಆರಂಭಿಸಿತ್ತು.
ನಿಯಂತ್ರಣ ತಪ್ಪಿ ಜಮೀನಿಲ್ಲಿ ಪತನವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ವಿಮಾನ ಪತನವಾದ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ.
ವಿಮಾನದ ಪಳೆಯುಳಿಕೆಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಡಿ.ಆರ್.ಡಿ.ಓ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ನಡೆದಿದೆ.
ಡಿ.ಆರ್.ಡಿ.ಒ ಸಿದ್ಧಪಡಿಸಿದ್ದ ತಪಸ್ ಎಂಬ ಡ್ರೋನ್ ಮಾದರಿಯ ಪೈಲಟ್ ರಹಿತ ವಿಮಾನ ಇದಾಗಿದ್ದು,
ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿದೆ.ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಇರುವ ಡಿ.ಆರ್.ಡಿ.ಒ ಈ ವಿಮಾನವನ್ನು ಸಿದ್ದಪಡಿಸಿತ್ತು.
ಮುಂಜಾನೆ ಪರೀಕ್ಷಾರ್ಥ ಹಾರಾಟ ನಡೆಸಿದ್ದ ತಪಸ್ ವಿಮಾನ ನಿಯಂತ್ರಣ ತಪ್ಪಿ ಜಮೀನಿನಲ್ಲಿ ಬಿದ್ದಿದೆ.
ಜಮೀನಿನಲ್ಲಿ ಬಿದ್ದಿರುವ ವಿಮನವನ್ನು ನೋಡಲು ಜನಸಾಗರವೇ ಹರಿದುಬಂದಿದೆ.
ಇದೇ ರೀತಿ ಈಗಾಗಲೆ ಜಿಲ್ಲೆಯಲ್ಲಿ ಪದೇ ಪದೇ ಡ್ರೋನ್ ವಿಮಾನಗಳು ಜಮೀನಿನಲ್ಲಿ ಬಿದ್ದ ಘಟನೆಗಳು ಮಾಸುವ ಮುನ್ನವೇ ಹಿರಿಯೂರು ತಾಲೂಕಿನ ವದ್ದಿಕೆರೆ ಬಳಿ ಜಮೀನೊಂದರಲ್ಲಿ ತಪಸ್ ವಿಮಾನ ಬಿದ್ದಿರುವುದು ಜನರಲ್ಲಿ ಮತ್ತಷ್ಟು ಆತಂಕ ತಂದಿದೆ.