ಚಿತ್ರದುರ್ಗದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಚಿನ್ಮೂಲಾದ್ರಿ ರೋಟರಿ ಸಂಸ್ಥೆ ಹಾಗು ಎಸ್.ಜೆ.ಎಂ. ಬ್ಯಾಂಕ್ನ ಸಹಯೋಗದಲ್ಲಿ ನಡೆದ ನಿರಾಶ್ರಿತರ ಕೇಂದ್ರದಲ್ಲಿ ಹಾಲು ವಿತರಣಾ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ಹಾಲು-ಹಣ್ಣುಗಳನ್ನು ವಿತರಿಸಿ, ಬಸವಪ್ರಭು ಶ್ರೀಗಳು ಮಾತನಾಡಿದರು.
ನಾಗರಪಂಚಮಿ ಹಾಲು ಚೆಲ್ಲುವ ಹಬ್ಬವಾಗದೆ ಆದರೆ ಪ್ರಸ್ತುತ ಹಾಲು ಕುಡಿಸುವ ಹಬ್ಬವಾಗಬೇಕಿದೆ ನಿರಾಶ್ರಿತರ ಕೇಂದ್ರದಲ್ಲಿ ಆಧ್ಯಾತ್ಮಿಕವಾದ ಪರಿಸರ ನಿರ್ಮಾಣವಾಗಿದೆ. ಬಡವರು, ನಿರಾಶ್ರಿತರಲ್ಲಿ ದೇವರಿದ್ದಾನೆ. ವಿಕಲಚೇತನರಲ್ಲಿ ದೇವರನ್ನು ಕಾಣಬೇಕು. ಪಂಚಮಿ ಹಬ್ಬದಂದು ಅನೇಕರು ಹುತ್ತಕ್ಕೆ ಹಾಲನ್ನೆರೆಯುತ್ತಾರೆ. ಆದರೆ ಅದೇ ಹಾಲನ್ನು ಮಕ್ಕಳಿಗೆ, ವೃದ್ಧರಿಗೆ, ಹಸಿದವರಿಗೆ ನೀಡಿದರೆ ಅವರಲ್ಲಿ ಪೌಷ್ಟಿಕಾಂಶ ಹೆಚ್ಚಾಗುತ್ತದೆ. ಮೂಢನಂಬಿಕೆಗಳನ್ನು ಆಚರಣೆ ಮಾಡಬಾರದು. ಮೂಢ ಆಚರಣೆಗಳಿಂದ ವ್ಯಕ್ತಿ ಅಥವಾ ಸಮಾಜದ ಅಭಿವೃದ್ಧಿ ಅಸಾಧ್ಯ. ಜಗತ್ತು ಸ್ವರ್ಗ ಆಗಬೇಕಾದರೆ ಮೂಢನಂಬಿಕೆಗಳನ್ನು ನಿರಾಕರಿಸಬೇಕೆಂದರು.
ಜಿಲ್ಲಾ ನ್ಯಾಯಾಧೀಶರು ಹಾಗು ಆಡಳಿತಾಧಿಕಾರಿ ಬಿ.ಎಸ್. ರೇಖಾ ಮಾತನಾಡಿ, ಮಡದಿ ಮಕ್ಕಳನ್ನು ಸಾಕಿ ಸಲುಹಿ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಿ, ಕೊನೆಗೆ ಜೀವನದ ಮುಪ್ಪಾವಸ್ಥೆಯನ್ನು ಕುಟುಂಬದೊAದಿಗೆ ನೆಮ್ಮದಿಯಾಗಿ ಕಳೆಯದೆ ನೀವೆಲ್ಲ ಆಶ್ರಮದಲ್ಲಿರುವುದು ದುಃಖದ ಸಂಗತಿ.
ಎಂದು ಹೇಳಿದರು.

Namma Challakere Local News
error: Content is protected !!