ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವದಾಗಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಭರವಸೆ
ನಾಯಕನಹಟ್ಟಿ: :ನಮ್ಮ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯನ್ನು ಮಾದರಿಯ ಪಂಚಾಯತಿಯನ್ನಾಗಿ ಮಾಡಲು ಶ್ರಮ ಪಡುತ್ತೇನೆ ಎಂದು ನೂತನ ಅಧ್ಯಕ್ಷ ಪಾಪಮ್ಮ ಆನಂದಪ್ಪ ಭರವಸೆ ನೀಡಿದ್ದಾರೆ.
ಅವರು ಸೋಮವಾರ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದಾರೆ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸರ್ವ ಸದಸ್ಯರ ಸಹಕಾರ ಅತಿ ಮುಖ್ಯವಾದದ್ದು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಚರಂಡಿ ವ್ಯವಸ್ಥೆ, ಕುಡಿಯುವ ನೀರು ಸ್ವಚ್ಛತೆ ಸೇರಿದಂತೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಪಡುವುದಾಗಿ ಸಭೆಯಲ್ಲಿ ತಿಳಿಸಿದರು.
ನೂತನ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬಿ ಅನಿತಮ್ಮ ಜಿ ಎಂ ಜಯಣ್ಣ ಮಾತನಾಡಿ
ಸರ್ವದ ಸದಸ್ಯರ ಮತ್ತು ನಮ್ಮ ಪಂಚಾಯತಿ ವ್ಯಾಪ್ತಿಯ ಜನರು ಸಹಕಾರ ನೀಡಿದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಅಧಿಕಾರ ಶಾಶ್ವತವಲ್ಲ ನಾವು ಮಾಡಿದ ಸೇವೆ ಮಾತ್ರ ಶಾಶ್ವತ ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಬಿ ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಬಿ ಶಂಕರ್ ಸ್ವಾಮಿ, ಶೇಖರಪ್ಪ,
ಕೆ ಸಿ ರಾಧಾ ಎಪಿ. ರೇವಣ್ಣ
ಪಿ ಒ ಸಣೋಬಯ್ಯ, ಪಿ ಟಿ ನಾಗೇಶ್, ಪಡ್ಲ ಬೋರಯ್ಯ, ಸಿದ್ದಲಿಂಗಮ್ಮ, ಜೆ ಪಿ ಪ್ರಿಯಾಂಕಾ ,
ಬಿ ಸಣ್ಣ ಪಾಲಯ್ಯ, ಮಂಜಮ್ಮ, ಮಾರಕ್ಕ, ಬಸಮ್ಮ, ಬೋರಮ್ಮ, ಕೆ ಜಿ ತಿಪ್ಪೇಸ್ವಾಮಿ, ಸುಮಿತ್ರಮ್ಮ ಬಿ ಗುಂಡಪ್ಪ, ಗಾದ್ರೇಪ್ಪ
ಪಿಡಿಒ ಮೋಹನ್ ದಾಸ್, ಕಾರ್ಯದರ್ಶಿ ಗುರುಸ್ವಾಮಿ, ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸಿತರಿದ್ದರು
?