ನಾಯಕನಹಟ್ಟಿ:: ಗ್ರಾಮದ ಪ್ರತಿಯೊಬ್ಬರು ಶುದ್ಧ ನೀರನ್ನು ಬೆಳಿಸಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಎ ಒ ಗೋಪಾಲನಾಯಕ ತಿಳಿಸಿದ್ದಾರೆ ,
ಉತ್ತಮವಾದ ಅವರು ಶನಿವಾರ ಹೋಬಳಿ ನೇರಲಗುಂಟೆ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಗ್ರಾಮ ಪಂಚಾಯತಿ ಯೋಜನೆ ಅಡಿ ನರ್ಮಲ್ಯತೆ ಕಾಪಾಡಿಕೊಳ್ಳಲು ಜನರಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ.
ಗ್ರಾಮದ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನ ಕಾಪಾಡಿಕೊಂಡು ಶುದ್ಧ ನೀರಿನ ಬಳಸಿ ಉತ್ತಮ ಆರೋಗ್ಯವಂತರಾಗಿರಲು ಗ್ರಾಮಸ್ಥರಲ್ಲಿ ಮನವರಿಕೆ ಮಾಡಿದರು.
ಇದೆ ವೇಳೆ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್ ಮಾತನಾಡಿ ಸರ್ಕಾರದ ಆದೇಶದಂತೆ ಈ ದಿನ ನೇರಲಗುಂಟೆ ಗ್ರಾಮ ಪಂಚಾಯತಿ ಗ್ರಾಮದಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ನರ್ಮಲೀಕರಣದ ಬಗ್ಗೆ ಜನರಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನೂ ಶಿಶು ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ ಮಾತನಾಡಿ ಗ್ರಾಮದ ಪ್ರತಿಯೊಬ್ಬರು ಶುದ್ಧ ನೀರು ಬಳಸಿ ರಸ್ತೆ ಬದಿಯಲ್ಲಿ ಕೊಯ್ದಿಟ್ಟ ಹಣ್ಣುಗಳು ಕೊರೆದ ತಿಂಡಿ ತಿನ್ನಬಾರದು ಶುದ್ಧವಾದ ಆಹಾರ ಮತ್ತು ಬಿಸಿಯಾದ ಆಹಾರದ ಪದಾರ್ಥಗಳನ್ನು ಸೇವಿಸಬೇಕು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕಿವಿಮಾತು ಹೇಳಿದರು.
ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹನುಮಂತ ಕುಮಾರ್ ಮಾತನಾಡಿ ಈ ನೇರಲಗುಂಟೆ ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲಿತ ಕಾಪಾಡಿಕೊಳ್ಳುವ ಸಲುವಾಗಿ ಜಾಗೃತಿ ಜಾಥಾ ಮತ್ತು ಪಂಚಿನ ಮೆರವಣಿಗೆ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಸಾರ್ವಜನಿಕರು ಯಾರು ಸಹ ಕಲಿಷಿತ ನೀರು ಸೇವಿಸದೆ ಶುದ್ಧವಾದ ನೀರನ್ನು ಬೆಳಿಸಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಎ.ಒ.ಗೋಪಾಲನಾಯಕ, ಉಪಾಧ್ಯಕ್ಷೆ ದುರುಗಮ್ಮ ನಾಗಭೂಷಣ್, ಸದಸ್ಯರಾದ ಡಿ ತಿಪ್ಪೇಸ್ವಾಮಿ ಡಿ ನಾಗಮಣಿ ಪಾಪಯ್ಯ, ಟಿ. ಚನ್ನಕೇಶವ, ಪಿಡಿಒ ಹನುಮಂತ ಕುಮಾರ್, ಕಾರ್ಯದರ್ಶಿ ಕೆ ಎಸ್ ಮಂಜಣ್ಣ, ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್, ಶಿಶು ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಎಚ್ಐಒ ರಮೇಶ್, ಕಮ್ಯುನಿಟಿ ಆಫೀಸರ್ ಅರ್ಪಿತ, ಕಮ್ಯುನಿಟಿ ಹೆಲ್ತ್ ಆಫೀಸರ್ ಸುಶ್ಮಿತಾ, ಗ್ರಾಮ ಪಂಚಾಯತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ತಿಪ್ಪೇರುದ್ರಪ್ಪ, ಗ್ರಾಮಸ್ಥರಾದ ಗೊಂಚಿಗರ್ ಯರ್ರಯ್ಯ, ಹೊಸ ಕಾರ್ಯಕರ್ತರು ಅಂಗನವಾಡಿ ಶಿಕ್ಷಕಿಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು