ನಾಯಕನಹಟ್ಟಿ:: ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ ಶಾಲಾ ಆವರಣದಲ್ಲಿ 77ನೇ ಸ್ವಾತಂತ್ರ ಮಹೋತ್ಸವದ ಅಂಗವಾಗಿ ಶಿಲಾಫಲಕ ಸ್ಥಾಪನೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಮ್ಮ ಆನಂದಪ್ಪ ಹೇಳಿದ್ದಾರೆ.

ಅವರು ಮಂಗಳವಾರ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ ಶಾಲಾ ಆವರಣದಲ್ಲಿ 77ನೇ ಸ್ವಾತಂತ್ರ ಮಹೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ನಂತರ ಶಿಲಾಫಲಕಕ್ಕೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಇದೆ ವೇಳೆ ಪಿಡಿಒ ಮೋಹನ್ ದಾಸ್ ಮಾತನಾಡಿ ಸರ್ಕಾರದ ಆದೇಶದಂತೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಿಲಾಫಲಕವನ್ನು ನಿರ್ಮಿಸಲಾಗುತ್ತದೆ ನಮ್ಮ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ ಶಾಲಾ ಆವರಣದಲ್ಲಿ 77ನೇ ಸ್ವತಂತ್ರ ಮಹೋತ್ಸವದ ಪ್ರಯುಕ್ತ ದೇಶ ಸೇವೆಯಲ್ಲಿ ಸ್ವತಂತ್ರಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಮಹಾನೀರ ಜ್ಞಾಪಕ ಆರ್ಥಿಕವಾಗಿ ಸರ್ಕಾರದ ಆದೇಶದಂತೆ ಶಿಲಾ ಫಲಕವನ್ನು ನಿರ್ಮಿಸಲಾಗಿದೆ ಹಾದರಂತೆ ಈ ಗ್ರಾಮದ ಮಲ್ಲಯ್ಯ ಎಂಬುವರು ಭಾರತೀಯ ಸೇನೆಯಲ್ಲಿ ವೀರ ಮರಣ ಹೊಂದಿದ್ದು ಅವರ ಜ್ಞಾಪಕಾರ್ಥಕವಾಗಿ ಗ್ರಾಮದಲ್ಲಿ ನಿರ್ಮಿಸಲಾಗಿದೆ ಪ್ರತಿಜ್ಞೆ ವಿಧಿ ವಿಧಿಸುವ ಮೂಲಕ ಗ್ರಾಮದ ಸರ್ವರಿಗೂ ಮನವರಿಕೆ ಮಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷ ಬಿ ಅನಿತಮ್ಮ ಜಿ ಎಂ ಜಯಣ್ಣ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ ಶಂಕರಸ್ವಾಮಿ, ಸದಸ್ಯರಾದ ಪಡ್ಲ ಬೋರಯ್ಯ, ಸುಮಿತ್ರಮ್ಮ‌, ಬಿ ಸಣ್ಣ ಪಾಲಯ್ಯ, ಓ ವಿ ಸಣ್ಣೋಬಯ್ಯ, ಶೇಖರಪ್ಪ, ಸಿದ್ದಲಿಂಗಮ್ಮ, ಬೋರಮ್ಮ, ಹಾಗೂ ಪಿಡಿಒ ಮೋಹನ್ ದಾಸ್, ಗ್ರಾಮದ ಯುವ ಮುಖಂಡ ಸುರೇಂದ್ರಪ್ಪ, ಅಬ್ಬೇನಹಳ್ಳಿ ಯುವ ಮುಖಂಡ ಶಿವಪ್ರಕಾಶ್, ಶಿಕ್ಷಕ ಮಹಾಂತೇಶ್, ಕೊರಡಿಹಳ್ಳಿ ರವಿ, ಬಿಲ್ ಕಲೆಕ್ಟರ್ ಎಸ್ ಶಿವ ತಿಪ್ಪೇಸ್ವಾಮಿ, ಬಿ ಎಫ್ ಟಿ ನಲಗೇತನಹಟ್ಟಿ ಕ್ಯಾಸಯ್ಯ, ಚೌಳಕೆರೆ ಶಿವರಾಜ್, ಬಸವರಾಜ್, ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು

About The Author

Namma Challakere Local News
error: Content is protected !!