ನಾಯಕನಹಟ್ಟಿ:: ಸಾರ್ವಜನಿಕರ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಪಿಎಸ್ಐ ದೇವರಾಜ್ ಹೇಳಿದ್ದಾರೆ.
ಅವರು ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ 77ನೇ ಸ್ವಾತಂತ್ರ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದಾರೆ. ನಮ್ಮ ಭಾರತ ದೇಶಕ್ಕೆ ಆಗಸ್ಟ್ 15 1947 ರಂದು ಸ್ವಾತಂತ್ರ ಲಭಿಸಿತು ಪ್ರತಿವರ್ಷವು ಸ್ವಾತಂತ್ರ ಮಹೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ ನಮ್ಮ ದೇಶದ ಅನೇಕ ಮಹನೀರಾದ ಮಹಾತ್ಮ ಗಾಂಧೀಜಿ ಸರ್ದಾರ್ ವಲ್ಲಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಡಾ. ಬಿ.ಆರ್ ಅಂಬೇಡ್ಕರ್ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದ ಫಲವಾಗಿ ನಮಗೆ ಸ್ವಾತಂತ್ರವೂ ಲಭಿಸಿದೆ.
ಈ ದಿನವನ್ನು ನಾವೆಲ್ಲ ಭಾರತೀಯರು ಸಂಭ್ರಮಸಡಗರದಿಂದ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ನಮ್ಮೆಲ್ಲ ಪೊಲೀಸರು ಭಾರತದ ಸಂವಿಧಾನವನ್ನ ಸಂವಿಧಾನದ ಆಶ್ರಯಗಳನ್ನ ಗೌರವಿಸಬೇಕು ಸಾರ್ವಜನಿಕರ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲ ಪೊಲೀಸರ ಕರ್ತವವಾಗಿದೆ ಎಂದು ಪಿಎಸ್ಐ ದೇವರಾಜ್ ತಿಳಿಸಿದರು.