ಚಳ್ಳಕೆರೆ : ಬ್ರೀಟಿಷರ ಆಳ್ವಿಕೆಯನ್ನು ಕೊನೆಗಾಣಿಸಿ ಮಹಾತ್ಮ ಗಾಂದಿಜೀ, ಹಾಗೂ ನೂರಾರು ರಾಷ್ಟç ನಾಯಕರು ಜೀವನವನ್ನೆ ಮುಡುಪಾಗಿಟ್ಟು ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತಂತ್ರö್ಯ ತಂದು ಕೊಟ್ಟಿದ್ದಾರೆ, ಭಾರತ ದೇಶ ಇಂದು 76ನೇ ಸ್ವಾತಂತ್ರö್ಯ ದಿನಾಚರಣೆ ಆಚರಿಸಿಕೊಳ್ಳುತ್ತಿದೆ ಎಂದು ಕೃಷಿ ಅಧಿಕಾರಿ ಜೀವನ್ ಹೇಳಿದರು.
ಅವರು ತಾಲೂಕಿನ ಪರುಶುರಾಂಪುರ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ 76ನೇ ಸ್ವಾತಂತ್ರö್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು, ಸ್ವಾತಂತ್ರ‍್ಯ ನಂತರ ದೇಶ ಬಲಿಷ್ಠವಾಗಿ ಬೆಳೆದು ನಿಂತಿದೆ. ದೇಶದ ಹಳ್ಳಿಗಳಲ್ಲಿ ಕೂಡ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಕಾಣಬಹುದು, ಸ್ವಾತಂತ್ರö್ಯ ಹೋರಾಟ ನೆಡೆಸಿದ ಹೋರಾಟಗಾರರ ತ್ಯಾಗ ಬಲಿದಾನವು ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಇಂದಿನ ಯುವ ಜನತೆಗೆ ಸ್ವಾತಂತ್ರ‍್ಯ ಹೋರಾಟದ ಮಹತ್ವ ತಿಳಿಸುವ ಅನಿವಾರ್ಯತೆ ಇದೆ, ಈ ನಿಟ್ಟಿನಲ್ಲಿ ನಮ್ಮ ಜಲ ನಮ್ಮ ನೆಲದ ಹಿರಿಮೆಯನ್ನು ಎತ್ತಿ ಹಿಡಿಯುವ ಮೂಲಕ ಸ್ವಾತಂತ್ರö್ಯ ರಾಷ್ಟçವನ್ನಾಗಿಸಬೇಕು ಎಂದರು.
ಈದೇ ಸಂಧರ್ಭದಲ್ಲಿ ಮಾಜಿ ಸೈನಿಕರಾದ ಸಿದ್ದೇಶ್, ಪರುಶುರಾಂಪುರ ಹಾಗೂ ರೈತ ಸಂಘದ ಮುಖಂಡರಾದ ತಾಲೂಕು ಅಧ್ಯಕ್ಷ ಚಿಕ್ಕಣ್ಣರವರಿಗೆ ಸನ್ಮಾನ ಮಾಡಿದರು,
ಇನ್ನೂ ಸಭಾ ಕಾರ್ಯಕ್ರಮದಲ್ಲಿ ರೈತ ಮುಖಂಡ ಜಂಪಣ್ಣ, ಪ್ರಕಾಶ್, ಹನುಮಂತರಾಯಪ್ಪ, ಖಾದರ್‌ಬಾಷ್, ಗ್ರಾಪಂ.ಅಧ್ಯಕ್ಷ ಜಗಲೂರಸ್ವಾಮಿ, ದೇವರಾಜ್, ಜೈವೀರಾಚಾರಿ, ಸಾಮ್ಯಾನಾಯ್ಕ್, ಸೂರಾಜ್, ಪ್ರಭಾಕರ್, ಹಾಗೂ ರೈತ ಮುಖಂಡರು ಇದ್ದರು.

About The Author

Namma Challakere Local News
error: Content is protected !!