ಚಳ್ಳಕೆರೆ : ಶಿಕ್ಷಕರು ಮಕ್ಕಳ ಪಾಠ ಪ್ರವಚನದ ಹಿತದೃಷ್ಟಿಯಿಂದ ಅಲ್ಲದೆ ಕೋರ್ಟ್ ಆದೇಶದಂತೆ ಶಿಕ್ಷಕರು ಬೋಧನೆ ಬಿಟ್ಟು ಅನ್ಯ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಆದೇಶವಿದ್ದರು ಕೂಡ ಶಿಕ್ಷಕರನ್ನು ಬಿಎಲ್‌ಓ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಬೇರೆ ಇಲಾಖೆಯವರನ್ನು ನೇಮಿಸಿಕೊಳ್ಳುವಂತೆ ಶಿಕ್ಷಕರು ಒತ್ತಾಯ ಮಾಡಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ಆಯೋಗದಿಂದ ಆಯೋಜಿಸಿದ್ದ ಮನೆ ಮನೆಗೆ ಬೇಟಿ ಮತದಾರ ಪಟ್ಟಿಯಲ್ಲಿ ದೋಷಗಳನ್ನು ಸರಿಪಡಿಸುವ ತರಬೇತಿ ಕಾರ್ಯಗಾರದಲ್ಲಿ ತಾಲೂಕಿನ ಶಿಕ್ಷಕರು ಭಾಗವಹಿಸಿ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರಲ್ಲಿ ಮತದಾರರ ಸೇರ್ಪಡೆ 80 ವಯಸ್ಸಿನವರನ್ನು ಮತ್ತು ವಿಕಲಚೇತನರನ್ನು ಗುರುತಿಸುವುದು, ಮನೆ ಮನೆ ಭೇಟಿ ಮಾಡುವುದು ಸೇರಿದಂತೆ, ಚುನಾವಣೆ ಕೆಲಸ ಕಾರ್ಯಗಳನ್ನು ತಮ್ಮ ಕರ್ತವ್ಯವನ್ನು ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಬಿಎಲ್‌ಓ ಶಿಕ್ಷಕರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ರಜಾ ಅವಧಿಯಲ್ಲಿ ಚುನಾವಣೆ ಕಾರ್ಯ ನಿರ್ವಹಿಸಿರುವ ನೌಕರರಿಗೆ ಕೆಸಿಎಸ್‌ಆರ್ ನಿಯಮದಂತೆ ಗಳಿಕೆ ರಜೆ ಮಂಜೂರು ಮಾಡಿಕೊಡಬೇಕೆಂಬ ಸರ್ಕಾರಿ ಆದೇಶ ಇದ್ದರೂ ಕೂಡ ಅದನ್ನ ಮತಗಟ್ಟೆ ಅಧಿಕಾರಿ, ಬಿಎಲ್‌ಒ ಗಳಾಗಿ ಕೆಲಸ ನಿರ್ವಹಿಸಿರುವ ಶಿಕ್ಷಕರಿಗೆ ಸಂಬAಧಿಸಿದವರು ಮಂಜೂರು ಮಾಡಿಲ್ಲ ಎನ್ನುವ ಆರೋಪವನ್ನು ಶಿಕ್ಷಕರು ಮಾಡುತ್ತಿದ್ದಾರೆ.
ಇನ್ನೂ ಮಾಧ್ಯಮದೊಟ್ಟಿಗೆ ಮಾತನಾಡಿದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ, ಹಾಗೂ ಎನ್‌ಪಿಎಸ್‌ನೌಕರ ಸಂಘದ ತಾಲೂಕು ಅಧ್ಯಕ್ಷ ಹೆಚ್.ಓ.ರಾಜಣ್ಣ,
ಇದೇ ಸಂಧರ್ಭದಲ್ಲಿ ಮಲ್ಲೆಶಪ್ಪ, ಹೆಚ್.ಹನುಮಂತಪ್ಪ, ನಾಗರೆಡ್ಡಿ, ಈರಣ್ಣ, ಸಿಟಿ.ವಿರೇಶ್, ಮಾಲ, ನಿಂಗಮ್ಮ, ಲಲಿತಾ, ಮಂಜುಳಾ, ಇತರರು ಇದ್ದರು.