ಚಳ್ಳಕೆರೆ : ಬಯಲು ಸೀಮೆಯಲ್ಲಿ ಕೆಂಪು ಸುಂದರಿಗೆ ಹಿನ್ನಲ್ಲದ ಬೇಡಿಕೆ ಬಂದಿದೆ
ಅದೇ ರೀತಿಯಲ್ಲಿ ರೆಡ್ ರಾಣಿ ಟೊಮೊಟೊ ಬೆಳೆದ ರೈತರು ಇಂದು ಕೋಟಿ ಕೋಟಿ ಒಡೆಯರಾಗಿದ್ದಾರೆ ಇನ್ನೂ
ಇಷ್ಟು ಬಂಗಾರದ ಬೆಳೆಯಿರುವ ಕೆಂಪು ಸುಂದರಿ ರಕ್ಷಣೆಗೆ ಗಡಿ ಕಾಯುವ ಸೈನಿಕರಂತೆ ರಾತ್ರಿ ಪಹರೆ ನಡೆಸುವ ಕಾರ್ಮಿಕರು-ಕಳ್ಳರಿಂದ ಬಂಗಾರದ ಬೆಳೆ ರಕ್ಷಣೆಗೆ ಹೊಲದ ಸುತ್ತಲೂ ಲೈಟಿಂಗ್ಸ್ ಹಾಕಿದ ರೈತ*
ಹೊಲದಲ್ಲಿ ತರಕಾರಿ ಬೆಳೆಯುವ ರೈತರಿಗೆ ಆಗಾಗ ಅದೃಷ್ಟ ಲಕ್ಷ್ಮಿ ಒಲಿಯುವುದು ಸಾಮನ್ಯವಾಗಿದ್ದು ಪ್ರಸ್ತುತ ರೆಡ್ ರಾಣಿ ಟಮೊಟೊ ದರ ಹೆಚ್ಚಾಗಿರುವ ಕಾರಣ ರೆಡ್ ರಾಣಿಯನ್ನು ಕಳ್ಳರು ಕದಿಯಲು ಸಂಚು ರೂಪಿಸುತ್ತಿರುವುದರಿಂದ ರೈತನು ಮೈ ಚಳಿ ಬಿಟ್ಟು ಚಳಿ ಮಳೆಯಲ್ಲೇ ನೈಟ್ ಶಿಫ್ಟ್ ಮಾಡುತ್ತ ಟೊಮೊಟೊ ರಕ್ಷಣೆ ಮಾಡಲು ಮುಂದಾಗಿದ್ದಾನೆ.
ಹೌದು ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಗ್ರಾಪಂ ವ್ಯಾಪ್ತಿಯ ಮುತ್ತಿಗಾರಹಳ್ಳಿ ಸಮೀಪದ ಜಮೀನೊಂದರಲ್ಲಿ ಗುತ್ತಿಗೆ ಪಡೆದು ಆರು ಎಕರೆ ಪ್ರದೇಶದಲ್ಲಿ ಟೊಮೊಟೊ ಬೆಳೆದಿದ್ದಾನೆ.
ಈಗಾಗಲೇ 20 ಲಕ್ಷ ರೂಪಾಯಿಗೂ ಹೆಚ್ಚಿನ ಲಾಭ ಪಡೆದಿರುವ ರೈತ ಟಿಪ್ಪು ಸುಲ್ತಾನ್ ಟೊಮೊಟೊ ಬೆಳೆಯ ಸುತ್ತಲೂ ವಿದ್ಯುತ್ ದೀಪ ಹಾಕಿ ಕಳ್ಳಕಾಕರಿಂದ ಬೆಳೆ ರಕ್ಷಣೆ ಮಾಡಲು ಮುಂದಾಗಿದ್ದಾನೆ.
ಗಗನಮುಖಿ ಬೆಲೆಯ ಟೊಮೆಟೊ ಬೆಳೆ ಲಾಭ ತನ್ನದಾಗಿಸಿಕೊಳ್ಳಲು ರೈತ ತೋಟದ ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಿ ಏಳೆಂಟು ಜನ ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡು ಬೆಳೆ ರಕ್ಷಿಸಿಕೊಳ್ಳುತ್ತಾನೆ.
ಕಳೆದ ತಿಂಗಳಿನಿಂದಲೂ ಟೊಮ್ಯಾಟೋ ಬೆಳೆಯನ್ನು ಕೋಲಾರ ಮಾರುಕಟ್ಟೆಗೆ ಕಳುಹಿಸುವ ಈ ರೈತ ಪ್ರಸ್ತುತವಾಗಿ 10 ಕಟ್ಟಿಂಗ್ ಮಾಡಿದ್ದಾನೆ,ಇದೇ ಬೆಲೆ ಮುಂದುವರೆದರೆ ಇನ್ನೂ ಅರ್ಧ ಕೋಟಿ ಲಾಭ ನಿರೀಕ್ಷೆಯಲ್ಲಿ ಈ ರೈತನಿದ್ದಾನೆ
ಇತ್ತೀಚಿಗೆ ಕಳ್ಳರ ಕಾಟ ಹೆಚ್ಚಾಗಿರುವುದರಿಂದ ಬಂಗಾರದ ಬೆಲೆ ಇರುವ ಟೊಮೋಟವನ್ನು ರಕ್ಷಿಸಲು ರಾತ್ರಿಯಿಡಿ ಚಳಿ ಕಾಯಿಸಿಕೊಂಡು ಹೊಲದ ಸುತ್ತಲೂ ಕಾರ್ಮಿಕರು ಗಸ್ತು ತಿರುಗುತ್ತಿದ್ದಾರೆ.
ಎರಡು ದಿನಕೊಮ್ಮೆ ಬೆಳೆ ಕೀಳಲು ಮುಂದಾಗುವ ರೈತ ಒಮ್ಮೆಗೆ 350 ರಿಂದ 400 ಬಾಕ್ಸ್ ಟಮೋಟೊ ಮಾರಾಟ ಮಾಡುತ್ತಿದ್ದಾರೆ ಎಕೆರೆಯೊಂದಕ್ಕೆ ಲಕ್ಷ ರೂಪಾಯಿ ವೆಚ್ಚ ಮಾಡಿರುವ ಈತ ಇಲ್ಲಿಯವರೆಗೂ ಸುಮಾರು 2500 ಬಾಕ್ಸ್ ಟಮೋಟ ಮಾರಿದ್ದಾರೆ ಈ ಮಾರಾಟವು ತಿಂಗಳಿನಿಂದಲೂ ನಡೆಯುತ್ತದೆ ನಾಲ್ಕು ವರ್ಷಗಳಿಂದಲೂ ಇದೇ ಬೆಳೆ ಬೆಳೆಯುವ ಈ ರೈತನಿಗೆ ಮೂರ್ನಾಲ್ಕು ಬೆಳೆ ಕೈ ಕೊಟ್ಟಿದೆ.ಅಲ್ಲದೇ ನಸ್ತವಾಗಲಿ ಲಾಭವಾಗಲಿ ವರ್ಷಪೂರ್ತಿಯಾಗಿ ಟೊಮೊಟೊ ಬೆಳೆಯುವ ರೈತನಾದ ಟಿಪ್ಪು ಸುಲ್ತಾನ್ ಟೊಮೇಟೊ ಬಗ್ಗೆ ವಿಶೇಷ ಪ್ರೀತಿ ಕಾರಣ,ಇದೇ ಟೊಮೇಟೊ ಬೆಳೆದು 12 ಎಕರೆ ಹೊಲ ಖರೀದಿ ಮಾಡಿ 50 ಲಕ್ಷ ರೂಪಾಯಿ ಬೆಲೆಬಾಳುವ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತೇನೆ ಆದ್ದರಿಂದ ವಿಶೇಷವಾಗಿ ಟೊಮೊಟೊ ಮೇಲೆ ನನಗೆ ಎಲ್ಲಿಲ್ಲದ ಪ್ರೀತಿ ಎನ್ನುತ್ತಾನೆ ರೈತ ಟಿಪ್ಪು ಸುಲ್ತಾನ್.
ರಾತ್ರಿ ಕಾವಲು ಕಾಯಲು ಏಳೆಂಟು ಜನ ಕೂಲಿಯಾಳುಗಳನ್ನು ನೇಮಿಸಿಕೊಂಡು ಪಹರೆಗೆ ಹಚ್ಚಿದ್ದಾನೆ ಕೂಲಿ ಕಾರ್ಮಿಕರು ಬೆಳಗಿನ ಜಾವದವರೆಗೂ ಬೆಳೆ ನೋಡಿಕೊಳ್ಳಬೇಕಿದೆ ಎರಡು ದಿನಕ್ಕೊಮ್ಮೆ ಟೊಮ್ಯಾಟೋ ಕಿತ್ತು ಬಾಕ್ಸ್ ಹಾಕಬೇಕು ರಾತ್ರಿಪೂರ ಗಸ್ತು ನಡೆಸಿ ಕಳ್ಳರ ಕಾಟಕ್ಕೆ ಕಡಿವಾಣ ಹಾಕಬೇಕು ಎನ್ನುವ ನಿಯಮದೊಂದಿಗೆ ಕೂಲಿಯಾಳುಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಕೂಲಿಯಾಳುಗಳು ರಾತ್ರಿ ಬೆಂಕಿ ಕಾಯಿಸುವುದು ನಿದ್ದೆ ಬಂದಲ್ಲಿ ತೋಟದ ಸುತ್ತಲೂ ಗಿರಕಿ ಹೊಡೆಯುವುದು,ನಿದ್ದೆ ಬಂದಾಗ ಬೇರೆಯವರನ್ನು ನೇಮಿಸುತ್ತಾರೆ ಗಡಿ ಕಾಯುವ ಸೈನಿಕರಂತೆ ರಾತ್ರಿಪೂರ ಎಚ್ಚರವಿದ್ದು ಬೇಳೆ ರಕ್ಷಿಸಬೇಕಿದೆ.