ರಾಮಾAಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಬಯಲು ಸೀಮೆ ಎಂದರೆ ಎಂಥವರಿಗೂ ತಟ್ಟನೆ ನೆನಪಾಗುವುದು ಚಳ್ಳಕೆರೆ ಇಂತಹ ಪ್ರದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಟಿ.ರಘುಮೂರ್ತಿ ಬುಡುಕಟ್ಟು ಸಮುದಾಯಗಳ ಏಳಿಗೆಗೆ ಹಾಗು ಆರಾಧ್ಯ ದೈವವೆಂದು ಪೂಜಿಸುವ ದೇವರ ಗೋವುಗಳಿಗೆ ವಿಶೇಷ ಕಾಳಜಿಯಿಂದ ಮೇವು ನೀರು ಹೊದಗಿಸುವ ಮಹತ್ವದ ಕಾರ್ಯಕ್ಕೆ ಬುಡಕಟ್ಟು ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದರಂತೆ ಬುಡಕಟ್ಟು ಸಂಪ್ರದಾಯಗಳ ದೇವರ ಗೋವುಗಳನ್ನು ಪೂಜ್ಯ ಭಾವನೆಯಿಂದ ಬಯಲು ಸೀಮೆಯ ಜನರು ಅದರಲ್ಲಿ ಬುಡಕಟ್ಟು ಸಮುದಾಗಳ ಕಿಲಾರಿಗಳು ಆರಾಧಿಸುತ್ತಾರೆ.
ಅದರಂತೆ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಆಯ್ಕೆಯಾದ ಶಾಸಕ ಟಿ.ರಘುಮೂರ್ತಿ, ಬುಡಕಟ್ಟು ಜನರ ದೇವರ ಎತ್ತುಗಳಿಗೆ ಮೇವಿನ ವ್ಯವಸ್ಥೆ ಮಾಡಲು ಹೆಚ್ಚುವರಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕೆಂದು ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಪಶುಸಂಗೋಪನೆ ಸಚಿವರಿಗೆ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕಿನಲ್ಲಿ 1874 ಕ್ಕೂ ಹೆಚ್ಚು ದೇವರ ಎತ್ತುಗಳು ಅರಣ್ಯದ ಮತ್ತು ಗೋಮಾಳದ ನೈಸರ್ಗಿಕ ಮೇವನ್ನು ಅವಲಂಬಿಸಿದ್ದವು. ಆದರೆ ಮುಂಗಾರು ಮಳೆ ಇಲ್ಲದೇ ಬಹುತೇಕ ಎರಡು ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದು ದೇವರ ರಾಸುಗಳಿಗೆ ಮೇವು ಇಲ್ಲದಾಗಿದ್ದು ಸರ್ಕಾರ ಬುಡಕಟ್ಟು ಸಂಸ್ಕೃತಿಯ ಪ್ರತೀಕವಾದ ದೇವರ ಎತ್ತುಗಳು ರಕ್ಷಣೆ ಮಾಡಲು ಸರ್ಕಾರ ಮೇವು ಖರೀದಿ ಮಾಡಲು ಹಣ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಿಸಿ ಸಭೆಯ ಗಮ ಸೆಳೆದರು.
ಶಾಸಕ ಟಿ.ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ಜಿಲ್ಲಾಡಳಿತಕ್ಕೆ 1.50 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಮೇವು ಖರೀದಿಗೆ ಸೂಚಿಸಲಾಗಿದೆ ಎಂದು ತಿಳಿಸಿದಾಗ ಶಾಸಕ ರಘುಮೂರ್ತಿ ಅವರು ದೇವರ ಎತ್ತುಗಳು 1874 ಇದ್ದು ಇವರು ನೀಡಿರುವ 1.50.800 ಲಕ್ಷ ಹಣ ಇದೆ ಎಂದು ಸಚಿವರು 20 ಟನ್ ಮೇವು ಬರುತ್ತದೆ. ಜಿಲ್ಲಾಧಿಕಾರಿ ವರದಿ ಪ್ರಕಾರ 277 ಟನ್ ಮೇವು ಅಗತ್ಯವಾಗಿ ಬೇಕಾಗಿದೆ ಎಂದರು.
ಇನ್ನೂ ಶಾಸಕ ಟಿ.ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ಜಿಲ್ಲಾಡಳಿತಕ್ಕೆ 1.50 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಮೇವು ಖರೀದಿಗೆ ಸೂಚಿಸಲಾಗಿದೆ ಎಂದು ತಿಳಿಸಿದಾಗ ಕೆರಳಿದ ಶಾಸಕ ರಘುಮೂರ್ತಿ ಅವರು ದೇವರ ಎತ್ತುಗಳು 1874 ಇದ್ದು ಇವರು ನೀಡಿರುವ 1.50.800 ಲಕ್ಷ ಹಣ ಇದೆ ಎಂದು ಸಚಿವರು 20 ಟನ್ ಮೇವು ಬರುತ್ತದೆ. ಜಿಲ್ಲಾಧಿಕಾರಿ ವರದಿ ಪ್ರಕಾರ 277 ಟನ್ ಮೇವು ಅಗತ್ಯವಾಗಿ ಬೇಕಾಗಿದೆ.
ಒಂದು ತಿಂಗಳಿಗೆ ಸುಮಾರು 25 ಲಕ್ಷ ಹಣ ಮೇವು ಖರೀದಿಗೆ ಒದಗಿಸಬೇಕು ಎಂದು ಶಾಸಕರು ಒತ್ತಾಯಿಸಿದರು. ಬರಗಾಲದಿಂದ ದೇವರ ಎತ್ತುಗಳ ಜೊತೆಗೆ ಇತರೆ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ವೆಂಕಟೇಶ್ ಮೇವು ಖರೀದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಿ ಹಣ ಬಿಡುಗಡೆ ಮಾಡಲಾಗುವುದು. ಜೊತೆಗೆ ಬರಗಾಲ ಎಂದು ಘೋಷಣೆಯಾದ ನಂತರ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅದರಂತೆ ತಾಲೂಕಿನಲ್ಲಿ ಕುರಿಮೇಕೆ -5,30,471 ಇದ್ದರೆ, ಹಸು ಎಮ್ಮೆ,ಗೋವುಗಳು-70,012 ಇದ್ದಾವೆ. ಇನ್ನೂ ದೇವರ ಗೋವುಗಳು ಸುಮಾರು 1874 ಇದ್ದಾವೆ.
ದೇವರ ಗೂಡುಗಳ ಸ್ಥಳಗಳನ್ನು ನೋಡುವುದಾದರೆ, ಚನ್ನಬಸಯ್ಯನಹಟ್ಟಿ, ನಲಗೇತನಹಟ್ಟಿ, ಬೋಸದೇವರಹಟ್ಟಿ, ದಾಸರಮುತ್ತಯ್ಯನಹಟ್ಟಿ, ಮಲ್ಲೂರಹಳ್ಳಿ, ಜಾಗನೂರಹಟ್ಟಿ, ಗುಂತಕೊಲಮ್ಮನಹಳ್ಳಿ, ವರವು, ಮಲೆಬೋರಯ್ಯನಹಟ್ಟಿ, ಹಿರೆಕೆರೆ ಕಾವಲು, ಕುರುಡಿಹಳ್ಳಿ, ಬೋಮ್ಮದೇವರಹಟ್ಟಿ, ಈಗೇ ಬುಡಕಟ್ಟು ಸಮುದಾಯದ ಗೋರಕ್ಷಕರು ದೇವರ ಗೋವುಗಳಿಗೆ ಪ್ರಮುಖ್ಯತೆ ನೀಡುತ್ತಾ ಬಂದಿದ್ದಾರೆ.