ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿAಗ್ ವಿಭಾಗದ ವತಿಯಿಂದ “ವರ್ಚುಯಲ್ ವಿಸಿಟ್ ಟೂ ಇಂಡಿಯಾಸ್ ಲರ‍್ಜೆಸ್ಟ್ ಸಿಮೆಂಟ್ ಪ್ಲಾಂಟ್ ಮತ್ತು ವರ್ಚುಯಲ್ ರಿಯಾಲಿಟಿ ಬಿಲ್ಡಿಂಗ್ ಡೆಮಾನ್‌ಸ್ಟೆçÀ್ಷಷನ್” ಕಾರ್ಯಕ್ರಮವನ್ನು ಅಲ್ಟಾçಟೆಕ್ ಸಿಮೆಂಟ್ ಇಂಡಿಯಾ ಲಿಮಿಟೆಡ್‌ರವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಪ್ರಾಚಾರ್ಯ ಡಾ.ಭರತ್ ಪಿ ಬಿ ಮಾತನಾಡಿ, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಕಟ್ಟಡ ನಿರ್ಮಾಣ ಕುರಿತು ಪರಿಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಿಮೆಂಟ್ ಉತ್ಪಾದನೆ ಮಾಹಿತಿಯನ್ನು ಆನ್‌ಲೈನ್ ಮೂಲಕ ಬಹುದೊಡ್ಡ ಸಿಮೆಂಟ್ ಉತ್ಪಾದನ ಘಟಕದ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಲ್ಟಾçಟೆಕ್ ಸಿಮೆಂಟ್ ಇಂಡಿಯಾ ಲಿಮಿಟೆಡ್‌ನ ದಾವಣಗೆರೆ-ಚಿತ್ರದುರ್ಗ ವಿಭಾಗದ ಟೆಕ್ನಿಕಲ್ ಮ್ಯಾನೇಜರ್ ಶ್ರೀ ಗಣಪತಿ, ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ ಜಗನ್ನಾಥ್ ಎನ್, ಸಿವಿಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀಶೈ¯ ಜೆ ಎಂ, ಕಾರ್ಯಕ್ರಮದ ಸಂಚಾಲಕರಾದ ಪ್ರೊ.ನವೀನ್ ಕುಮಾರ್ ಕೆ ಆರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.