ಚಳ್ಳಕೆರೆ : ಕಾಂಗ್ರೇಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊAದಾಗಿ ಜಾರಿಗೊಳಿಸುವತ್ತಿರುವ ರಾಜ್ಯ ಸರಕಾರ ಇಂದು ರಾಜ್ಯದ ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ಸಿದ್ದರಾಮಯ್ಯ ಸರ್ಕಾರದ ಮತ್ತೊಂದು ಗ್ಯಾರಂಟಿ ಯೋಜನೆಯಾದಂತಹ ” ಗೃಹಲಕ್ಷ್ಮೀ” ಯೋಜನೆಯನ್ನು ಇಂದು ಜಾರಿಗೊಳಿಸಲಾಯಿತು.
ಗೃಹ ಲಕ್ಷ್ಮೀ ಯೋಜನೆಯನ್ನು ಇಂದು ಸಂಜೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ” ಡಿಕೆ.ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ “ಲಕ್ಷ್ಮಿಹೆಬ್ಬಾಳ್ಕರ್” ರವರು ಇಂದು ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿಯಾದ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದರು.
ಇನ್ನೂ ಅರ್ಜಿ ಸಲ್ಲಿಸಿದವರ ಖಾತೆಗೆ 2000 ರೂ ಹಣವನ್ನು ಆಗಸ್ಟ್ ತಿಂಗಳಲ್ಲಿ ಜಮಾ ಮಾಡಲಾಗುವುದು. ಒಂದು ಕೇಂದ್ರದಲ್ಲಿ ದಿನಕ್ಕೆ ಕೇವಲ 60ಅರ್ಜಿಗಳನ್ನು ಮಾತ್ರ ಸ್ವೀಕಾರ ಮಾಡಲಾಗುತ್ತದೆ. ಕರ್ನಾಟಕ ಒನ್, ಗ್ರಾಮಒನ್, ಬೆಂಗಳೂರುಒನ್ ಕೇಂದ್ರ, ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕೂಡ ಅರ್ಜಿ ಸ್ವೀಕರಿಸಲಾಗುವುದು.
ಗೃಹಲಕ್ಷ್ಮಿ ಹಣ ಪಡೆಯಲು ಏನೇನು ದಾಖಲೆಗಳು ಬೇಕು ?
- ಮನೆ ಒಡತಿ ಹೆಸರು ಇರುವಂತಹ ಪಡಿತರ ಕಾರ್ಡ್
- ಮನೆ ಯಜಮಾನಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ.
- ಮನೆ ಒಡತಿ ಪತಿಯ ಆಧಾರ್ ಕಾರ್ಡ್
ಗೃಹಲಕ್ಷ್ಮಿ ಹಣ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ?
ಪಡಿತರ ಚೀಟಿ ಸಂಖ್ಯೆಯನ್ನು 81475 00500 ಸಂಖ್ಯೆಗೆ ಕರೆ ಮಾಡಿ ನಂತರ ಎರಡೇ ಸೆಕೆಂಡಲ್ಲಿ ಇಲಾಖೆಯಿಂದ ಒಂದು ಮೆಸೇಜ್ ಬರುತ್ತದೆ. ಅದರಲ್ಲಿ ಸ್ಥಳ ಹಾಗೂ ಗುರುತು ಪಡಿಸಿದ ದಿನಾಂಕ ಮತ್ತು ಸಮಯ ಇರುತ್ತದೆ.
ನಂತರ ಅದೇ ದಿನ, ಅದೇ ಸಮಯಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು. ಹಾಗೇ ಸಂದೇಶ ಬಂದ ಸೇವಾ ಕೇಂದ್ರಕ್ಕೆ ತೆರಳಿ ನೊಂದಣಿಯನ್ನು ಮಾಡಿಸಬೇಕು.