ಸಮಾಜ ಸೇವೆಯಲ್ಲಿ ತೊಡಗಿದ ರೋಟರಿ ಕ್ಲಬ್ ಕಾರ್ಯ ಶ್ಲಾಘನೀಯ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ: ಬಯಲು ಸೀಮೆಯಲ್ಲಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಲೋಟರಿ ಕ್ಲಬ್ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್ ಮತ್ತು ಇನರ್ ವಿಲ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ 2023-24ನೇ ಸಾಲಿನ ಇನ್ ಸ್ಟಾಲ್ ಲೇಶನ್ ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಹತ್ತು ವರ್ಷಗಳ ನನ್ನ ಶಾಸಕ ಅವಧಿಯಲ್ಲಿ ನಾನು ಕಂಡAತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸಹಾಯಸ್ತ ನೀಡುವ ಮೂಲಕ ಸಮಾಜ ಮುಖಿ ಕಾರ್ಯ ಮಾಡುತ್ತಿದ್ದಾರೆ ಇಂತಹ ಕ್ಲಬ್‌ಗೆ ನಮ್ಮ ಸಹಕಾರ ನಿರಂತರವಾಗಿ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನೇರಲಗುಂಟೆ ರಾಮಪ್ಪ, ರೋಟರಿ ಕ್ಲಬ್ ಅಧ್ಯಕ್ಷರಾದ ನಾಗೇಶ್, ರೋಟರಿ ಕ್ಲಬ್‌ನ ಎನ್.ಎಸ್.ರಾಘವೇಂದ್ರ, ಜಿಲ್ಲಾ ಗೌರ್ನರ್ ರೋಟರಿ ಕ್ಲಬ್ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಲಕ್ಷಿö್ಮ, ತಾಲೂಕು ಮಾಜಿ ಅಧ್ಯಕ್ಷ ಡಾ.ಕೆ.ಎಂ.ಜಯಕುಮಾರ್, ಜಯಪ್ರಕಾಶ್, ಕೆಎಂ.ಯತೀಶ್, ಉಮೇಶ್ ತುಪ್ಪದ್, ಸಹನಾ, ನಾಗರಾಜ್, ತಿಪ್ಪೆಸ್ವಾಮಿ, ಮೂರ್ತಿ, ಪ್ರಕಾಶ್, ಶೋಭಾ ಯತೀಶ್, ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು

About The Author

Namma Challakere Local News
error: Content is protected !!