ಚಿತ್ರದುರ್ಗ : ರುಡ್‌ಸೆಟ್ ಸಂಸ್ಥೆಯಲ್ಲಿ ವಿಶ್ವ ಯುವ ಕೌಶಲ್ಯ ದಿನದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು,
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯಿAದ ತರಬೇತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾದ 8 ಜನ ಯುವ ಉದ್ಯಮಶೀಲರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್.ಉದಯ್ , ಉಪ ಮಹಾ ಪ್ರಬಂಧಕರು, ಕೆನರಾ ಬ್ಯಾಂಕ್, ಕೇಂದ್ರಿಯ ಕಛೇರಿ, ಬೆಂಗಳೂರು ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಕೆ.ಎಸ್.ಉದಯ್ ಪಾಲ್ಗೊಂಡು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಾವು ಯಾವಾಗಲೂ, ಯಾವ ಪರಿಸ್ಥಿತಿಗೂ ಪ್ರಸ್ತುತವಾಗಿ ಉಳಿಯಲು ಕೌಶಲ್ಯವನ್ನು ಉನ್ನತೀಕರಿಸುವುದು ಯಶಸ್ಸಿನ ಗುಟ್ಟು ಎಂದು ಅಭಿಪ್ರಾಯಪಟ್ಟರು. ಹೊಸ ಕೌಶಲ್ಯಗಳನ್ನು ಕಲಿಯುತ್ತಿರಬೇಕು, ಆ ಮೂಲಕ ನಮ್ಮ ಅಗತ್ಯತೆಯ ಮೌಲ್ಯಗಳನ್ನು ಬೆಳೆಸುತ್ತಾ ಹೋಗಬೇಕು, ನಮ್ಮ ದೈನಂದಿನ ಜೀವನದಲ್ಲಿ ಕೆಲಸ, ಕೌಶಲ್ಯಗಳ ಜೊತೆ ಸೃಜನಾತ್ಮಕವಾಗಿ ಹೊಸದನ್ನು ಕಲಿಯುವುದರಿಂದ, ಕೌಶಲ್ಯದ ಮಟ್ಟವನ್ನು ಬೆಳೆಸಿಕೊಳ್ಳುತ್ತಾ ಇದ್ದರೆ ಆಗ ನಾವು ಯಾವ ಕಾಲಕ್ಕೂ ಸಲ್ಲುವವರಾಗಿ, ಎಂದಿಗೂ ಪ್ರಸ್ತುತವಾಗಿ ಉಳಿಯುತ್ತೇವೆ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ನಾವು ಜೀವನದಲ್ಲಿ ಹೊಸ ವಿಷಯಗಳನ್ನು, ಹೊಸ ಕೌಶಲ್ಯಗಳನ್ನು ಕಲಿಯದೆ ಇದ್ದರೆ ಕೆಲ ಸಮಯಗಳ ನಂತರ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತೇವೆ, ಕೌಶಲ್ಯ ಎಂಬುದಕ್ಕೆ ಯಾವುದೇ ಕಾಲದ ಮಿತಿಯಿಲ್ಲ, ಕಾಲ ಕಾಲಕ್ಕೆ ತಕ್ಕಂತೆ ನಾವು ಹೇಗೆ ಕೆಲಸ ಮಾಡುತ್ತೇವೆಯೋ ಹಾಗೆ ಆ ಕೌಶಲ್ಯ ವೃದ್ಧಿಯಾಗುತ್ತ ಹೋಗುತ್ತದೆ, ಅದು ನಮಗೆ ನಾವೇ ಕಂಡುಕೊಳ್ಳಬಹುದಾದ ಕೊಡುಗೆ, ಇದರಿಂದ ಜೀವನದಲ್ಲಿ ಉತ್ಸಾಹ, ಜೀವನ ಪ್ರೀತಿ ಮತ್ತು ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು. ಯುವ ಸಮುದಾಯ ಪದವೀಧರರಾದರೆ ಮಾತ್ರ ಸಾಲದು, ಕೌಶಲ್ಯ ವೃದ್ದಿಸಿಕೊಳ್ಳಬೇಕು, ಆಧುನಿಕರಣ ತಂತ್ರಜ್ಞಾನಭರಿತ ಉದ್ಯೋಗಗಳಿಗೆ ಸಿದ್ದರಾಗಬೇಕು ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಿರಿ ಎಂದು ಯುವ ಉದ್ಯಮಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇವರು ಮಾತನಾಡುತ್ತಾ ಜೀವನದಲ್ಲಿ ಏಳಿಗೆ ಸಾಧಿಸಲು ವೃತ್ತಿ ಕೌಶಲ್ಯಗಳ ಅಭಿವೃದ್ಧಿ ಮಾಡಿಕೊಳ್ಳುವುದು ಮುಖ್ಯ, ಕೌಶಲ್ಯಗಳಲ್ಲಿ ಮೂರು ವಿಧ – ಅರಿವಿನ ಕೌಶಲ್ಯಗಳು, ತಾಂತ್ರಿಕ ಕೌಶಲ್ಯಗಳು ಮತ್ತು ಪರಸ್ಪರ ಕೌಶಲ್ಯ ಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದರಿಂದ ವೃತ್ತಿಯಲ್ಲಿ ದಕ್ಷತೆ ಮತ್ತು ನೈಪುಣ್ಯತೆಯನ್ನು ಸಾಧಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರವಿಕಲಾ, ವಿಭಾಗಿಯ ಪ್ರಬಂಧಕರು, ಕೆನರಾ ಬ್ಯಾಂಕ್, ಪ್ರಾದೇಶಿಕ ಕಛೇರಿ, ದಾವಣಗೇರೆ, ಶ್ರೀಯುತ ತಿಪ್ಪೇಶ್, ಎಲ್‌ಡಿಎಂ, ಲೀಡ್ ಬ್ಯಾಂಕ್ ಚಿತ್ರದುರ್ಗ, ಶ್ರೀಯುತ ತಿಪ್ಪೇಸ್ವಾಮಿ, ಆರ್ಥಿಕ ಸಾಕ್ಷರತಾ ಸಮಾಲೋಚಕರು, ಅಮೂಲ್ಯ ಸಾಕ್ಷರತಾ ಕೇಂದ್ರ ಚಿತ್ರದುರ್ಗ, ಶ್ರೀಯುತ ಭೊಜರಾಜ್, ಜಿಲ್ಲಾವ್ಯವಸ್ಥಾಪಕರು, ಎನ್.ಆರ್.ಎಲ್.ಎಮ್, ಜಿಲ್ಲಾ ಪಂಚಾಯತಿ ಚಿತ್ರದುರ್ಗ, ಮತ್ತು ಶ್ರೀಯುತ ದೇವರಾಜ್, ಜಿಲ್ಲಾವ್ಯವಸ್ಥಾಪಕರು, ಎನ್.ಆರ್.ಎಲ್.ಎಮ್, ಜಿಲ್ಲಾ ಪಂಚಾಯತಿ ಚಿತ್ರದುರ್ಗ ಶ್ರೀ ತೇಜಸ್ವಿ, ನಿವೃತ್ತ ವ್ಯವಸ್ಥಾಪಕರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದ ಯಶಸ್ವಿ ಉದ್ಯಮೀಗಳಾದ ಶ್ರೀ ಬಸವರಾಜ, ಶ್ರೀಮತಿ ಲತಾ, ್ಪ ಶ್ರೀಮತಿ ಜಯಶೀಲಾ ಶ್ರೀ ಮಂಜುನಾಥ ಶ್ರೀಮತಿ ಟಿ.ಡಿ.ಸುಷ್ಮಾ ಶ್ರೀಮತಿ ದ್ರಾಕ್ಷಾಯಿಣಿ ಶ್ರೀ ಸೈಯದ್ ವಾಸಿಮ್ ಶ್ರೀಕೆ.ವ್ಹಿ.ಗಿರೀಶ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತ್ತು.
ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಶ್ರೀಮತಿ ರಾಧಮ್ಮ ಹೆಚ್.ಆರ್. ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗ ಇವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಕೆಲಸದಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಳ್ಳಿರಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ತೋಟಪ್ಪ ಎಸ್. ಗಾಣಿಗೇರ್, ಉಪನ್ಯಾಸಕರು ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗ ಇವರು ನಿರೂಪಿಸಿದರು, ಶ್ರೀ ಉದಯಕುಮಾರ, ಹಿರಿಯ ಉಪನ್ಯಾಸಕರು ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗ ಇವರು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

Namma Challakere Local News
error: Content is protected !!