ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಒಂಬತ್ತು ದಿನದ ಬಾಲಕಿಗೆ ಕೋತಿ ದಾಳಿ
ನಾಯಕನಹಟ್ಟಿ:: ಹೋಬಳಿಯ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಕೋತಿ ಸಂಚಾರ ಮಾಡುತ್ತಿತ್ತು. ಈ ದಿನ ಗ್ರಾಮದ ಮಂಜುಳ ಸಿದ್ದೇಶ್ ರವರ ಪುತ್ರಿ ಮನೆಯಲ್ಲಿ ಮಲಗಿದ ವೇಳೆ ಏಕಾಏಕಿ ಕೋತಿ 9 ದಿನದ ಬಾಲಕಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ ಬಾಲಕಿತಾಯಿ ಮಂಜುಳಾ ಹೇಳಿದ್ದಾರೆ. ಗ್ರಾಮ ಪಂಚಾಯತಿ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಸಂಚಾರ ಮಾಡ್ತಿದ್ದ ಕೋತಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೋತಿಯನ್ನ ಸೆರೆಹಿಡಿದು ಗ್ರಾಮದಲ್ಲಿ ಇಂತಹ ಅವಗಡಗಳು ಜರಗದಂತೆ ಕ್ರಮ ವಹಿಸಬೇಕೆಂದು ಬಾಲಕಿ ತಾಯಿ ಮಂಜುಳಾ ಒತ್ತಾಯಿಸಿದ್ದಾರೆ.