ಚಳ್ಳಕೆರೆ : ಸಾಮಾಜಿಕ ಸುಸ್ಥಿರ ಅಭಿವೃದ್ಧಿಗೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ತನ್ನನ್ನು ತಾನು ತೊಡಗಿಸಿಕೊಂಡು ಸಾಹಿತ್ಯ, ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ರಾಷ್ಟ್ರೋತ್ಥಾನ ಸಮಿತಿ ಒಂದಾಗಿದೆ ಎಂದು ಪ್ರಶಿಕ್ಷಣ ಸಮಿತಿಯ ಜಿಲ್ಲಾ ಸಂಯೋಜಕರಾದ ರಾಧ ಮಾತಾಜೀ ಹೇಳಿದರು.
ಅವರು ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟೊçÃತ್ಥಾನ ಪರಿಷತ್ ಹಮ್ಮಿಕೊಂಡ ಶಿಕ್ಷಕರ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು, ಪ್ರಶಿಕ್ಷಣ ಭಾರತಿ ಜನರ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ರಾಷ್ಟç ನಿರ್ಮಾಣಕ್ಕೆ ಬದ್ದವಾಗಿದೆ.
ಇನ್ನೂ ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಈಗೇ ಹತ್ತು ಹಲವು ಕ್ಷೇತ್ರಗಳಲ್ಲಿ ಮನುಷ್ಯನ ಜೀವನ ಪರಿವರ್ತನೆ ಹಾಗೂ ಅವನಲ್ಲಿ ದೇಶ ಕಟ್ಟುವ ಮಮತೆಯನ್ನು ಈ ಪರಿಷತ್‌ನಿಂದ ನಿರಂತರವಾಗಿ ನಡೆಯುತ್ತದೆ. ಅದೇ ರೀತಿಯಲ್ಲಿ ಸ್ವಸ್ಥಾö್ಯ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಸಮಾಜಕ್ಕೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕು, ಇಂದಿನ ಯುವ ಜನತೆಯಲ್ಲಿ ಹೆಚ್ಚಾಗಿ ಅವರ ಧ್ಯೆಯ ಕೇವಲ ಡಾಕ್ಟರ್, ಇಂಜಿನಿಯಾರ್ ಕಡೆ ಮಾತ್ರ ಒಲವು ಇದೆ. ಆದರೆ ಶಿಕ್ಷಕರಾಗಲು ಯಾರೂ ಕೂಡ ಬಯಸುವುದಿಲ್ಲ, ಆದರೆ ಸುಸ್ಥಿರ ಸಮಾಜಕ್ಕೆ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕನ ಪಾತ್ರ ಅಗತ್ಯ ಆದ್ದರಿಂದ ಶಿಕ್ಷಕ ಮನಸ್ಸು ಮಾಡಿದರೆ ಈಡೀ ದೇಶವೇ ಬದಲಾಯಿಸುವು ಶಕ್ತಿ ಅವರಲ್ಲಿ ಇರುತ್ತದೆ ಎಂದರು.

ಸಮಾಜ ಸೇವಕ, ಟಿವಿಎಸ್ ಶೋರಂ ಮಾಲೀಕರಾದ ಕಾಲುವೆಹಳ್ಳಿ ಪಾಲಯ್ಯ ಮಾತನಾಡಿ, ನಮ್ಮ ದೇಶ ಸಾಧು ಸಂತರ ದೇಶ, ಮಹಾ ಪುರುಷರು, ಕವಿ, ಪುಂಗರು ಇರುವ ನಾಡು ಆದರೆ ಇಂದಿನ ಅಧ್ಯಯನಗಳಲ್ಲಿ ಕೇವಲ ಪರಕೀಯರದ್ದು ಮಾತ್ರ ನಾವು ಕಾಣುತ್ತೆವೆ ಆದರೆ ನಮ್ಮ ನೆಲದಲ್ಲಿ ಮಹಾ ಪುರುಷರ ಸಾಧನೆಯನ್ನು ತಿಳಿಯದೆ ನಮ್ಮ ಗಟ್ಟಿತನ ನಮಗೆ ತಿಳಿಯದಾಗಿದೆ. ಇನ್ನೂ ರಾಷ್ಟಿçÃಯ ಪರಿಷತ್ ನಿಂದ ತಪಸ್ಸು, ಸಾಧನ ಇವುಗಳ ಮೂಲಕ ದೇಶದ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ನೀಡಲು ನೀಟ್, ಜೆಇಇ, ಐಐಟಿ ಕೋರ್ಸ್ಗಳಂತ ಉನ್ನತ ವ್ಯಾಸಂಗ ನೀಡುವಂತ ಕಾರ್ಯ ನಿರಂತರವಾಗಿ ನಡೆಯುತ್ತದೆ ಎಂದರು.

ಈದೇ ಸಂದರ್ಭದಲ್ಲಿ ಸಮಾಜ ಸೇವಕ, ಟಿವಿಎಸ್ ಶೋರಂ ಮಾಲೀಕರಾದ ಕಾಲುವೆಹಳ್ಳಿ ಪಾಲಯ್ಯ, ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಗೌರವಾಧ್ಯಕ್ಷ ಡಿ.ನಾಗಪ್ಪ, ಅಧ್ಯಕ್ಷರಾದ ರಾಜೇಶ್‌ಗುಪ್ತ, ಕಾರ್ಯದರ್ಶಿ ದಯಾನಂದ ಪ್ರಹ್ಲಾದ್, ಯುವರಾಜ್, ಶಾಲೆಯ ಮುಖ್ಯ ಶಿಕ್ಷಕ ಡಿವಿಎನ್.ಪ್ರಸಾದ್, ಶೋಭಾಸುರೇಶ್, ಶೈಲಜಾ, ಸಿದ್ದೇಶ್, ಮಾಲಿನಿ, ಸಹ ಶಿಕ್ಷಕರ ವರ್ಗ ಹಾಜರಿದ್ದರು.

About The Author

Namma Challakere Local News
error: Content is protected !!