ಪರಶುರಾಮಪುರ ಗ್ರಾಮದಲ್ಲಿ ಸಮೃದ್ದಿ ಮಳೆ-ಬೆಳೆಯಾಗಿ ಜನ –ಜಾನುವಾರುಗಳ ಆರೋಗ್ಯ ವೃಧ್ದಿಗೆ ಸಾಂಕ್ರಾಮಿಕ ರೋಗಗಳು ತೊಲಗಲಿ ಎಂದು ಗ್ರಾಮಸ್ಥರು ಶುಕ್ರವಾರ ಊರ ಬಾಗಿಲ ಬಳಿ ಹಸಿರು ಚಪ್ಪರ ಹಾಕಿ ಅದರೊಳಗೆ ಹೋಳಿಗೆಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ಹೋಳಿಗೆ-ಕಡುಬುಗಳನ್ನಿಟ್ಟು ಪೂಜಿಸಿದರು
ಗ್ರಾಮದ ಸ್ಥಳೀಯ ಆಡಳಿತ, ಗ್ರಾಮದ ಹಿರಿಯರು ಹಾಗೂ ಹನ್ನೆರೆಡು ಕೈವಾಡಸ್ಥರು ಸೇರಿಕೊಂಡು ಗ್ರಾಮದಲ್ಲಿ ಸಾರು ಕೊಟ್ಟು ಎಲ್ಲರೂ ಶುಕ್ರವಾರ ಹೋಳಿಗೆಮ್ಮ ದೇವಿಯ ಉತ್ಸವ ಜರುಗಿಸಲಾಗುವುದು ಎಂದು ಘೋಷಿಸಿದ ಕಾರಣ ಗ್ರಾಮದ ಮಹಿಳೆಯರು ಅಂದು ಬೆಳಗ್ಗೆ ತಮ್ಮ ಮನೆಗಳನ್ನು ಸಾರಿಸಿಕೊಂಡು ಮನೆ ಮಕ್ಕಳಿಗೆಲ್ಲ ಸ್ನಾನ ಮಾಡಿಸಿ ಹೋಳಿಗೆಗಳನ್ನು ಸಿಧ್ದಗೊಳಿಸಿ ಬಾಳೆಎಲೆ, ವೀಳ್ಯದೆಲೆ, ತೆಂಗಿನಕಾಯಿ, ಬೇವಿನಸೊಪ್ಪು, ಹೋಳಿಗೆಗಳು, ಮತ್ತಿತರೆ ಸಾಮಗ್ರಿಗಳನ್ನು ತೆಗೆದುಕೊಂಡು ತಮ್ಮ ಮಕ್ಕಳೊಂದಿಗೆ ಊರ ಬಾಗಿಲ ಬಳಿ ಹನ್ನೆರೆಡು ಕೈವಾಡದವರು ಮಣ್ಣಿನಿಂದ ಮಾಡಿದ ಹೋಳಿಗೆಮ್ಮ ದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದ ಸ್ಥಳಕ್ಕೆ ಬಂದು ಎಡೆ ಹಾಕಿ ಪೂಜಿಸಿ, ಪ್ರದಕ್ಷಿಣೆ ಹಾಕಿದರು
ಈ ವೇಳೆ ಪೂಜಾರರು ದೇವಿಗೆ ಭಕ್ತರು ತಂದ ಹೋಳಿಗೆಗಳನ್ನು ಅರ್ಪಿಸಿ ಪೂಜಿಸಿದ ನಂತರ ಸಂಜೆ ಸರ‍್ಯಾಸ್ತದ ವೇಳೆಗೆ ದೇವಿಯ ಮೂರ್ತಿಯನ್ನು ಗಾಡಿಯಲ್ಲಿ ಪ್ರತಿಷ್ಟಾಪಿಸಿಕೊಂಡು ದೇವಿಗೆ ಭಕ್ತರಿಂದ ಬಂದ ಹೋಳಿಗೆ, ಪ್ರಸಾದಗಳನ್ನು ಗಾಡಿಯಲ್ಲಿ ತುಂಬಿಕೊAಡು ಮೆರವಣಿಗೆಯಲ್ಲಿ ಊರ ಗಡಿಗೆ ಹೋಗಿ ಹಾಕಿ ಬಂದರು ಈ ರೀತಿ ಹೋಳಿಗೆಮ್ಮ ದೇವಿಯನ್ನು ಊರ ಗಡಿಗೆ ಹಾಕಿ ಬಂದರೆ ಊರಿಗೆ ಅಂಟಿದ ದೋಷ ಪರಿಹಾರವಾಗಿ ಸಮೃಧ್ದ ಮಳೆ-ಬೆಳೆಯಾಗುತ್ತದೆ ಎಂಬ ನಂಬಿಕೆ ಈ ಬಾಗದ ಜನರಲ್ಲಿದೆ.
ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅನಿತಾವೆಂಕಟೇಶ, ಉಪಾಧ್ಯಕ್ಷ ಜಗಳೂರಪ್ಪ, ಮಾಜಿ ಅಧ್ಯಕ್ಷ ಎಂ ಆರ್ ರುದ್ರೇಶ, ಗ್ರಾಪಂ ಸದಸ್ಯರಾದ ತಿಪ್ಪಮ್ಮ, ರಾಮಣ್ಣ, ಹನುಮಕ್ಕ, ಕಮಲಮ್ಮ, ಓಬಳೇಶ, ಬಿ ಮೋಹನ, ರಂಗಮ್ಮ, ಲಕ್ಷಿö್ಮÃದೇವಿ, ಸವಿತಾ, ಟಿ ಗೋವಿಂದಪ್ಪ, ಸುಜಾತಾ, ಎಂ ನಾಗಭೂಷಣ, ಗೀತಾ, ಬೊಮ್ಮಕ್ಕ, ವಸಂತಾ, ಪಿ ಒ ಪ್ರಕಾಶ, , ಗೌಸ್‌ಪೀರ್, ಎಸ್ ಮಂಜುಳಾ, ಸಿ ನಾಗರಾಜು, ಸರೋಜಾ, ಸಿ ಕೃಷ್ಣಪ್ಪ, ಮುಖಂಡರಾದ ತಿಮ್ಮಯ್ಯ, ತಿಪ್ಪೇಸ್ವಾಮಿ, ಚನ್ನಕೇಶವ, ಪೂಜಾರರಾದ ಶ್ರೀರಾಮ, ಕೆಂಗಪ್ಪ, ಗ್ರಾಮಸ್ಥರಾದ ಬೊಮ್ಮಯ್ಯ, ತಿಪ್ಪೇಸ್ವಾಮಿ, ಲಕ್ಷಿö್ಮÃದೇವಿ, ದೇವಿಕಾ, ಭಾರತಿ, ಸುಶೀಲಾ, ಗ್ರಾಮಸ್ಥರಿದ್ದರು
ಪೋಟೋ (ಪಿಆರ್‌ಪುರ ಹಬ್ಬ 14)
ಪರಶುರಾಮಪುರ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಎದುರು ಶುಕ್ರವಾರ ಹನ್ನೆರೆಡು ಕೈವಾಡದವರು ಹಸಿರು ಚಪ್ಪರ ಹಾಕಿಸಿ ಅದರೊಳಗೆ ಹೋಳಿಗೆಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ವಿವಿಧ ಹೂ, ಬೇವಿನ, ಬೇಟೆ ಸೊಪ್ಪಿನಿಂದ ಅಲಂಕರಿಸಿದ ಭಕ್ತರು ಹೋಳಿಗೆಗಳನ್ನು ಇಟ್ಟು ಪೂಜಿಸಿದರು

About The Author

Namma Challakere Local News
error: Content is protected !!