ಚಳ್ಳಕೆರೆ : ಚುನಾವಣೆ ನಿಮ್ಮಿತ್ತ ವರ್ಗಾವಣೆಗೊಂಡ ನಗರಸಭೆ ಪೌರಾಯುಕ್ತ ರಾಮಕೃಷ್ಣಪ್ಪರವರ ಸ್ಥಾನಕ್ಕೆ ಕೊರಟಗೇರೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಲೀಲಾವತಿ ಚಳ್ಳಕೆರೆ ನಗರಸಭೆಗೆ ಎರಡನೇ ಬಾರಿಗೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಇನ್ನೂ ಪೌರಾಯುಕ್ತೆ ಟಿ.ಲೀಲಾವತಿಗೆ ನಗರಸಭೆ ಸಿಬ್ಬಂದಿ ವರ್ಗ ಆತ್ಮೀಯವಾಗಿ ಸ್ವಾಗತ ಕೋರಿ ವರ್ಗವಣೆಗೊಂಡ ಪೌರಾಯುಕ್ತ ರಾಮಕೃಷ್ಣಪ್ಪರವರಿಗೆ ಬಿಳ್ಕೊಡುಗೆ ನೀಡಿದರು.
ಇನ್ನೂ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟಿ.ಲೀಲಾವತಿ ಕಳೆದ ವರ್ಷ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡೆ ಆದರೆ ಕಾರಣಂತರಗಳಿAದ ತೃಪ್ತಿದಾಯಕವಾದ ಕೆಲಸ ಮಾಡಲು ಹಾಗಲಿಲ್ಲ ಆದರೆ ಈ ಬಾರಿ ಮಾದರಿ ನಗರವನ್ನಾಗಿ ಮಾಡಲು ಪಣತೊಟ್ಟಿರುವೆ, ನಗರದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಸ್ವಚ್ಚತೆಗೆ ಹಾಗೂ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡುತ್ತೆನೆ, ಇನ್ನೂ ನಗರಸಭೆ ಕಟ್ಟಡ ಅರ್ಧಕ್ಕೆ ನಿಂತಿದೆ ಸ್ಥಳೀಯ ಶಾಸಕ ಟಿ.ರಘುಮೂರ್ತಿರವರ ವಿಶ್ವಾಸದಂತೆ ಕಟ್ಟಡ ಸಂಪೂರ್ಣಗೊಳಿಸಲು ಕ್ರಮ ಕೈಗೊಳ್ಳುವೆ, ಅದರಂತೆ ನಗರದ 31 ವಾರ್ಡ್ಗಳ ಸರ್ವತೋಮುಖ ಅಭಿವೃದ್ದಿಗೆ ಸ್ಪಂಧಿಸುವೆ ಎನ್ನುತ್ತಾರೆ.
ಇದೇ ಸಂಧರ್ಭದಲ್ಲಿ ನಗರಸಭೆ ವ್ಯವಸ್ಥಾಪಕರಾದ ಲಿಂಗರಾಜು, ಕಂದಾಯ ನೀರಿಕ್ಷಕರಾದ ರುಕ್ಮಿಣಿ, ತಿಪ್ಪೆಸ್ವಾಮಿ, ಮಂಜುನಾಥ್, ದಾದಪೀರ್, ಮಹಾಲಿಂಗಪ್ಪ, ಓಬಳೇಶ್,ಲೋಕೇಶ್, ಗೀತಾ, ಗುರುಪ್ರಸಾದ್, ಹರೀಶ್, ಭಾಗ್ಯಮ್ಮ, ಬೊರಣ್ಣ, ರುದ್ರೆಶ್, ನಿರ್ಮಾಲಾ ಇತರರು ಪಾಲ್ಗೊಂಡಿದ್ದರು.