ಚಳ್ಳಕೆರೆ : ಅಂಚೆ ಇಲಾಖೆ ನೀಡುವ ಸೇವೆಯನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಅಂಚೆ ಇಲಾಖೆ ನಿಮ್ಮ ಇಲಾಕೆ ನಿಮ್ಮ ಹಣ, ನಿಮ್ಮ ಸೇವೆ ನಿಮ್ಮದೆ ಕಛೇರಿ ಎಂದು ಪೋಸ್ಟ್ ಇನ್ಸ್ಪೆಕ್ಟರ್ ಹೆಡ್ ರಾಜನ್ ಕುಮಾರ್ ಹೇಳಿದರು.
ಅವರು ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ” ಸಾರ್ವಜನಿಕ ಸೇವೆಯಲ್ಲಿ ಅಂಚೆ ಇಲಾಖೆ ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಅಂಚೆ ಇಲಾಖೆ ಯಾಕೆ ಜನರಿಗೆ ಸಾಲ ಕೊಡುವುದಿಲ್ಲ. ಜನರು ಇಟ್ಟ ಹಣವನ್ನು ಭಾರತ ಸರ್ಕಾರದ ಹಣಕಾಸು ವಿಭಾಗಕ್ಕೆ ನೀಡುವುದರ ಬಗ್ಗೆ ಹಾಗೂ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಯಾವರೀತಿಯಲ್ಲಿ ಅಂಚೆ ಇಲಾಖೆ ಸಹಾಯ ಮಾಡುತಿದ್ದೆ ಹೆಣ್ಣುಮಕ್ಕಳಿಗಾಗಿ ಯಾವ ಯಾವ ಅಕೌಂಟ್ ಇವೆ ಏನೂವುದರ ಬಗ್ಗೆ ವಿವರವಾಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆ ಯಾವಾಗ ಪ್ರಾರಂಭಿಸಲಾಯಿತು, ಪತ್ರಗಳನ್ನು ಹೇಗೆ ಒಂದು ಕಡೆ ಯಿಂದ ಮತ್ತೊಂದು ಕಡೆಗೆ ರವಾನಿಸುವರು, ಅಂಚೆ ಇಲಾಖೆ ಬ್ಯಾಂಕ್ ನಂತೆ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ರಾಮ್ ಪ್ರಸಾದ್ ಚಕ್ಕೇಮಂಡಿ ವಹಿಸಿದ್ದರು, ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಶಾಹೀನ ಮಿಸ್, ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರ ಮಿಸ್, ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು. ಸಂತೋಷ್, ಮಲ್ಲಿಕಾರ್ಜುನ, ಮಹಾಂತೇಶ್ , ತಿಪ್ಪೇಸ್ವಾಮಿ, ನಸೀರ್ ಸಾರ್ ಇತರರು ಇದ್ದರು.