ಚಳ್ಳಕೆರೆ : ಕಾಂಗ್ರೆಸ್ ಆಡಳಿತ ನೇತೃತ್ವ ವಹಿಸಿದ ರಾಜ್ಯ ಸರ್ಕಾರದ 2023-24 ನೇ ಸಾಲಿನ ಬಜೆಟ್ ಎಲ್ಲಾ ವರ್ಗದ ಜನರನ್ನು ಒಳಗೊಂಡ ಬಜೆಟ್ ಹಾಗಿದೆ, ಇನ್ನೂ ಎಲ್ಲಾ ಇಲಾಖೆಗೂ ಅನುದಾನ ಸೇರಿಸಿಕೊಂಡು ಜನಸಾಮಾನ್ಯರಿಗೆ ಪೂರಕವಾದ ಬಜೆಟ್ ಹಾಗಿದೆ ಎಂದು ಕಾಂಗ್ರೆಸ್ ನ ಕುಶಲ ಕರ್ಮಿ ವಿಭಾಗದ ರಾಜ್ಯಾಧ್ಯಾಕ್ಷ ಹಾಗೂ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಹೇಳಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಜೆಟ್ ಸಾಮಾನ್ಯ ಜನರಿಗೆ ಪೂರಕವಾದ ಬಜೆಟ್ ಅದರಲ್ಲಿ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡಿರುವುದು ಸಂತಸ ತಂದಿದೆ ಎಂದರು.