ಚಳ್ಳಕೆರೆ : ಮನುಷ್ಯ ಆಧುನಿಕ ಕಾಲಘಟ್ಟದಲ್ಲಿ ಇದ್ದರೂ ಕೂಡ ಕಾನೂನಿನ ಅರಿವು ತ್ರೀವ್ರವಾಗಿ ಕಡಿಮೆಯಾಗಿದೆ ಆದ್ದರಿಂದ ಕಾನೂನುನನ್ನು ಎಲ್ಲಾರೂ ಪಾಲಿಸಬೇಕು ಅದೇ ರೀತಿಯಲ್ಲಿ ಕಾನೂನು ಎಲ್ಲಾರಿಗೂ ತಿಳಿದಿರಬೇಕು ಎಂದು ವಕೀಲರಾದ ಇಂದುಮತಿ ಹೇಳಿದರು.
ಅವರು ತಾಲೂಕಿನ ಸಾಣಿಕೆರೆ ವಲಯದ ಗೋಪನಹಳ್ಳಿ ಕಾರ್ಯಕ್ಷೇತ್ರದ ಬಾಪುಜಿ ಪ್ರೌಡ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಿ ಮಾತನಾಡಿದರು.
ಇವತ್ತಿನ ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮಕ್ಕಳ ಪಾತ್ರ ಏನು ಎಂಬುದರ ಬಗ್ಗೆ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಏನೆಂಬುದರ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಒಕ್ಕೂಟದ ಅದ್ಯಕ್ಷರು, ಶಾಲೆಯ ಸಿಬ್ಬಂದಿಗಳು , ವಿದ್ಯಾರ್ಥಿಗಳು ಭಾಗವಹಿಸಿದ್ದರು.