ನಾಯಕನಹಟ್ಟಿ:: ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಹೆತ್ತ ತಾಯಿ ತಂದೆಯಂತೆ ಸಸಿಯನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ಹೇಳಿದ್ದಾರೆ.

ಪಟ್ಟಣದಲ್ಲಿ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿಗೆ ನೀರಿರೆದು ಮಾತನಾಡಿದ್ದಾರೆ.
ಉತ್ತಮವಾದ ಗಾಳಿ ಪಡೆಯಲು ಆಮ್ಲಜನಕ ಮಹತ್ವವಾದ ಆದ್ದರಿಂದ ಪಟ್ಟಣದಲ್ಲಿ ಸಸಿಯನ್ನ ಹೆಚ್ಚು ಹೆಚ್ಚು ಹಾಕಿ ಸಂರಕ್ಷಿಸಿದರೆ ಉತ್ತಮವಾದ ಗಾಳಿ ಆಮ್ಲಜನಕ ನಮಗೆ ಸಿಗುತ್ತದೆ ಆದ್ದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಭಾಗ್ಯಮ್ಮ ತಿಳಿಸಿದರು.

ಅರಣ್ಯ ಅಧಿಕಾರಿ ಎನ್ ರಾಜೇಶ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದಿನನಿತ್ಯ ಮರಗಳ ಪೋಷಣೆಗೆ ಜನರು ಆಸಕ್ತಿ ತೋರಬೇಕು ಅರಣ್ಯ ಇಲಾಖೆಯ ಜೊತೆ ಕೈಜೋಡಿಸುವ ಮೂಲಕ ನಾಯಕನಹಟ್ಟಿ ಪಟ್ಟಣದಲ್ಲಿ ಪರಿಸರವನ್ನು ಹಸಿರುಮಯವಾಗಿ ಮಾಡಬೇಕು ನಮ್ಮ ಸುತ್ತಲಿನ ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಶಾಲಾ ವಿದ್ಯಾರ್ಥಿಗಳು ಪರಿಸರವರ ಅರಣ್ಯಗಳ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಪರಿಸರ ಕುರಿತಾದ ವನಮಹೋತ್ಸವ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿದ್ದು ಆ ಬಳಿಕ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪರಿಸರ ದಿನಾಚರಣೆ ತನ್ನ ಮಹತ್ವ ಕಳೆದುಕೊಂಡು ಒಂದು ರೀತಿಯಲ್ಲಿ ಒಣ ಮಹೋತ್ಸವ ಆಗುತ್ತದೆ ಸತತ ಬರಗಾಲಕ್ಕೆ ಅಣೆಪಟ್ಟಿ ಕಟ್ಟಿಕೊಂಡಿರುವ ನಾಯಕನಹಟ್ಟಿ ಹೋಬಳಿಯಲ್ಲಿ ಗಿಡಮರಗಳ ಮಾರಣಹೋಮ ಹೆಚ್ಚುತ್ತಿರುವುದರಿಂದ ಅರಣ್ಯ ಸಂಪತ್ತು ಇನ್ನಿಲ್ಲವಾಗುತ್ತದೆ ಇದರಿಂದ ಸತತ ಬರಗಾಲ ಎದುರಿಸುತ್ತಿರುವ ದು:ಸ್ಥಿತಿ ಬಂದೊದುಗಿದೆ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷಿಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಲಾಲನೆ ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿದರೆ ಖಂಡಿತ ಬರಗಾಲ ಅಳಿಸಬಹುದಾಗಿದೆ ಎಂದರು.

ಇನ್ನೂ ಈ ವನಮಹೋತ್ಸವ ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿ ಡಿ ಆರ್ ಎಫ್ ಒ ವಸಂತ್ ಕುಮಾರ್, ಎನ್ ರಾಜೇಶ್, ಶ್ರೀ ರಾಜಾಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ ಹನುಮಂತಯ್ಯ ಶಿಕ್ಷಕ ಪಿ ಜೆ ರವಿಕುಮಾರ್, ಕೆ ಎಂ ಮಲ್ಲಿಕಾರ್ಜುನ್, ಅರಣ್ಯ ಇಲಾಖೆಯ ಸಿಬ್ಬಂದಿಯಾದ ಲೋಕೇಶ್ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಸೇರಿದಂತೆ ಶ್ರೀ ರಾಜಾಹಟ್ಟಿ ಮಲ್ಲಪ್ಪ ನಾಯಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು

Namma Challakere Local News
error: Content is protected !!