ಚಳ್ಳಕೆರೆ : ಬಯಲು ಸೀಮೆಯಲ್ಲಿ ಭೂಮಿತಾಯಿ ಒಡಲು ಬಗೆಯುವ ಅದೇಷ್ಟು ಅಕ್ರಮ ಮರಳು ದಂದೆ ಕೋರರು ಇದ್ದಾರೆ ಅದರಂತೆ
ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಕೆರೆಯಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಟ ವಾಗುತ್ತಿದ್ದರು ಅಧಿಕಾರಗಳು ಮಾತ್ರ ನಮಗೆ ಸಂಬAಧವಿಲ್ಲ ಎಂಬAತೆ ಜಾಣ ಕುರುಡುತನ ತೊರಿಸುತ್ತಿದ್ದಾರೆ.
ಇನ್ನೂ ರೈತಾಪಿ ವರ್ಗದವರು ಹಾಗೂ ಕೆರೆ ಬಳಕೆದಾರ ಸಂಘದವರು ಈ ಅಕ್ರಮ ಗಾಡಿಗಳನ್ನು ತಡೆದು ಅಕ್ರಮದಾರರಿಗೆ ಚಳಿ ಬಿಡಿಸಿದ್ದಾರೆ.
ಈಗೇ ತಾಲೂಕಿನಲ್ಲಿ ಕೆರೆಗಳಲ್ಲಿ ಹಾಗೂ ವೇದಾವತಿ ನದಿಯಲ್ಲಿ ನಿರಂತವಾಗಿ ಅಕ್ರಮ ಮರಳು ಗಾರಿಕೆ ನಡೆಯುತ್ತಿದೆ ಇನ್ನೂ ವೇದಾವತಿ ಒಡಲು ಬರಿದಾಗುವ ಮುನ್ನ ಅಧಿಕಾರಿಗಳು ಎಚ್ಚತ್ತುಕೊಂಡು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವರಾ ಎಂಬುದು ಕಾದು ನೋಡಬೇಕಿದೆ.